ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
‘ನಿಜವಾದ ಬುದ್ಧಿಜೀವಿಗಳು ಪ್ರಯೋಗ ಮಾಡಿದ ನಂತರ ನಿಷ್ಕರ್ಷಕ್ಕೆ ಬರುತ್ತಾರೆ. ಮತ್ತೊಂದೆಡೆ, ತಮ್ಮನ್ನು ಬುದ್ಧಿಜೀವಿಗಳು ಎಂದು ಕರೆದುಕೊಳ್ಳುವವರು ಸಾಧನೆಯ, ಅಧ್ಯಾತ್ಮದ ಪ್ರಯೋಗ ಮಾಡದೇ, ‘ಅವರು ಸುಳ್ಳು ಹೇಳುತ್ತಾರೆ !’ ಎಂದು ಹೇಳುತ್ತಾರೆ !
‘ವ್ಯಕ್ತಿ ಸ್ವಾತಂತ್ರ್ಯವು ಮನುಷ್ಯನ ದಾರಿ ತಪ್ಪಿಸುತ್ತದೆ; ಏಕೆಂದರೆ ಅದು ಸಾತ್ತ್ವಿಕವಲ್ಲ. ಹಾಗೆ ಆಗಬಾರದೆಂದು ಅವನಿಗೆ ಧರ್ಮಬಂಧನ ಇರಬೇಕು !’
ಸಂಶೋಧನೆಯನ್ನು ಮಾಡದವರು ಬುದ್ಧಿಜೀವಿಗಳು !
‘ಬುದ್ಧಿಜೀವಿಗಳು ‘ಅಧ್ಯಾತ್ಮಶಾಸ್ತ್ರವು ಹೇಗೆ ಸರಿಯಲ್ಲ’ ಎಂಬುದನ್ನು ಸಾಬೀತುಪಡಿಸಲು ಸಂಶೋಧನೆ ಮಾಡಲು ಸಾಧನಗಳನ್ನು ಎಂದಿಗೂ ಬಳಸಲಿಲ್ಲ; ಆದರೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ನೂರಾರು ಪ್ರಯೋಗಗಳ ಮೂಲಕ ‘ಅಧ್ಯಾತ್ಮಶಾಸ್ತ್ರವು ಚಿರಂತನ ಸತ್ಯವನ್ನು ಹೇಳುತ್ತದೆ’ ಎಂದು ಸಾಬೀತು ಪಡಿಸಿದೆ ಮತ್ತು ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪರಿಷತ್ತುಗಳಲ್ಲಿ ಶೋಧಪ್ರಬಂಧಗಳನ್ನು ಮಂಡಿಸಿದೆ.’
‘ಕಣ್ಣುಗಳಿಗೆ ಸೂಕ್ಷ್ಮಜೀವಗಳು ಕಾಣಿಸುವುದಿಲ್ಲ; ಆದರೆ ಅವು ಸೂಕ್ಷ್ಮದರ್ಶಕದಲ್ಲಿ ಗೋಚರಿಸುತ್ತವೆ. ಅದೇ ರೀತಿ, ಸೂಕ್ಷ್ಮದರ್ಶಕದಿಂದ ಯಾವುದನ್ನು ನೋಡಲು ಸಾಧ್ಯವಿಲ್ಲ ಅಂತಹ ಸೂಕ್ಷ್ಮಾತಿಸೂಕ್ಷ್ಮ ಜಗತ್ತು ಸಾಧನೆಯಿಂದ ತಿಳಿಯುತ್ತದೆ.
‘ಧರ್ಮವು ತ್ಯಾಗವನ್ನು ಕಲಿಸಿದರೆ, ರಾಜಕಾರಣವು ಸ್ವಾರ್ಥವನ್ನು ಕಲಿಸುತ್ತದೆ; ಆದ್ದರಿಂದ ಮೀಸಲಾತಿ ಇತ್ಯಾದಿಗಳು ಹೆಚ್ಚುತ್ತಿವೆ. ಇದಕ್ಕೆ ಒಂದೇ ಒಂದು ಪರಿಹಾರವಿದೆ, ಅದೆಂದರೆ ಎಲ್ಲರಿಗೂ ಸರ್ವಸ್ವದ ತ್ಯಾಗ ಮಾಡಲು ಕಲಿಸುವ ಸಾಧನೆಯನ್ನು ಕಲಿಸುವುದು !’
‘ಹಿಂದೂಗಳೇ, ತಮ್ಮ ಜೊತೆಗೆ ರಾಷ್ಟ್ರ ಮತ್ತು ಧರ್ಮದ ಬಗ್ಗೆಯೂ ಯೋಚಿಸಿ !’
‘ಅಡಚಣೆಯ ಸಮಯದಲ್ಲಿ ಸಹಾಯವಾಗಬೇಕು; ಎಂದು ನಾವು ಹಣವನ್ನು ಬ್ಯಾಂಕಿನಲ್ಲಿ ಇಡುತ್ತೇವೆ. ಅದೇ ರೀತಿಯಲ್ಲಿ, ಸಂಕಷ್ಟದ ಸಮಯದಲ್ಲಿ ಸಹಾಯವಾಗಲು ಸಾಧನೆಯನ್ನು ಸಂಗ್ರಹಿಸಿ ನಮ್ಮೊಂದಿಗಿರಿಸುವ ಅಗತ್ಯವಿದೆ. ಇದರಿಂದ ಸಂಕಷ್ಟದ ಸಮಯದಲ್ಲಿ ಇದು ನಮಗೆ ಸಹಾಯವಾಗುತ್ತದೆ.’
ಯಾವುದಾರೊಂದು ರೋಗವು ಬರಬಾರದೆಂದು ಲಸಿಕೀಕರಣ (ವ್ಯಾಕ್ಸಿನೇಶನ್) ಮಾಡಲಾಗುತ್ತದೆ ಹಾಗೆಯೇ ಮೂರನೇ ಮಹಾಯುದ್ಧದಲ್ಲಿ ಉಳಿಯುವುದಕ್ಕಾಗಿ ಸಾಧನೆಯೇ ಲಸಿಕೆಯಾಗಿದೆ.
– (ಪರಾತ್ಪರ ಗುರು) ಡಾ. ಆಠವಲೆ