ವಿಜ್ಞಾನ ಮತ್ತು ತಂತ್ರಜ್ಞಾನದ ಅತಿ ಬಳಕೆಯ ಪ್ರತಿಫಲ

ಹವಾಮಾನ ಬದಲಾವಣೆಯ ಹೆಚ್ಚುತ್ತಿರುವ ವೇಗದಿಂದಾಗಿ ಜಾಗತಿಕ ತಾಪಮಾನದಲ್ಲಿ ಹೆಚ್ಚಳದ ವಿಪತ್ತು ಭಯಾನಕವಾಗುತ್ತಿದೆ. ಭೀಕರ ಉಷ್ಣತೆಯ ಅಲೆಗಳ ನಂತರ ಉತ್ತರ ಭಾರತದಲ್ಲಿ ಆಗುತ್ತಿರುವ ಅತಿವೃಷ್ಟಿಯಿಂದ ೯೦ ಜನರು ಸಾವನ್ನಪ್ಪಿದ್ದಾರೆ. ಇಲ್ಲಿ ಅಮೇರಿಕಾ, ಯುರೋಪ್, ಆಫ್ರಿಕಾ ದೇಶದ ನಾಗರಿಕರು ಉಷ್ಣತೆಯಿಂದ ತೊಂದರೆಗೀಡಾಗಿರುವುದು ನೋಡುತ್ತಿದ್ದೇವೆ. ಆದ್ದರಿಂದ ತಾಪಮಾನದ ಹೊಸ ದಾಖಲೆ ನಿರ್ಮಾಣವಾಗುತ್ತಿದೆ.