ದೇಶದ ೭ ರಾಜ್ಯಗಳಲ್ಲಿ ನೆರೆಯ ಪರಿಸ್ಥಿತಿ !

  • ಉತ್ತರಾಖಂಡದಲ್ಲಿನ ೧೫೪ ರಸ್ತೆಗಳು ಮುಚ್ಚಿವೆ

  • ಅಸ್ಸಾಂನಲ್ಲಿ ೨೨ ಸಾವಿರ ಜನರು ಅಪಾಯದಲ್ಲಿ

ದೆಹಲಿ ಪ್ರವಾಹ

ಅಸ್ಸಾಂ ಪ್ರವಾಹ

ಕೇರಳ ಪ್ರವಾಹ

ನವ ದೆಹಲಿ – ದೇಶದಲ್ಲಿನ ೭ ರಾಜ್ಯಗಳಲ್ಲಿ ಧಾರಾಕಾರ ಮಳೆಯಿಂದಾಗಿ ನೆರೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಲ್ಲಿ ಉತ್ತರಾಖಂಡ, ಅಸ್ಸಾಂ, ಹಿಮಾಚಲ ಪ್ರದೇಶ, ಗೋವಾ, ಕರ್ನಾಟಕ, ಕೇರಳ ಮತ್ತು ನಾಗಾಲ್ಯಾಂಡ್ ಈ ರಾಜ್ಯಗಳು ಒಳಗೊಂಡಿವೆ.

ಕರ್ನಾಟಕದಲ್ಲಿ ಮಳೆಯಿಂದಾಗಿ ಇಲ್ಲಿಯವರೆಗೆ ೪ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಉತ್ತರಾಖಂಡದಲ್ಲಿ ೧೫೪ ರಸ್ತೆಗಳನ್ನು ಮುಚ್ಚಲಾಗಿದೆ. ಅಸ್ಸಾಂನಲ್ಲಿನ ೬ ಜಿಲ್ಲೆಗಳಲ್ಲಿನ ೧೨೧ ಗ್ರಾಮಗಳಲ್ಲಿ ಸುಮಾರು ೨೨ ಸಾವಿರ ಜನರು ನೆರೆಯ ಅಪಾಯದಲ್ಲಿದ್ದಾರೆ. ಬದ್ರಿನಾಥ ರಾಷ್ಟ್ರೀಯ ಹೆದ್ದಾರಿ ಚಿಂನ್ಕಾ ಹತ್ತಿರ ಕುಸಿತದಿಂದ ರಸ್ತೆ ಮುಚ್ಚಲಾಗಿತ್ತು. ಸುಮಾರು ೫ ಗಂಟೆಯ ನಂತರ ಅದನ್ನು ಪುನಃ ಆರಂಭ ಮಾಡಲಾಯಿತು.

ಮುಂದಿನ ೪ ರಿಂದ ೫ ದಿನಗಳ ಕಾಲ ಉತ್ತರ ಭಾರತದಲ್ಲಿ ಧಾರಾಕಾರ ಮಳೆ ಆಗುವುದು ಎಂದು ಭಾರತೀಯ ಹವಾಮಾನ ಇಲಾಖೆಯಿಂದ ಹೇಳಲಾಗಿದೆ. ಇದರ ಜೊತೆಗೆ ಜುಲೈ ೯ ವರೆಗೆ ಜಮ್ಮು, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ, ಹರಿಯಾಣ ಮತ್ತು ಉತ್ತರಪ್ರದೇಶ ಈ ರಾಜ್ಯಗಳಲ್ಲಿ ಕೂಡ ಧಾರಾಕಾರ ಮಳೆಯ ಎಚ್ಚರಿಕೆ ನೀಡಲಾಗಿದೆ.