ಮುಂದಿನ 15 ದಿನಗಳಲ್ಲಿ ದೇಶದ 16 ರಾಜ್ಯಗಳಲ್ಲಿ ಮಳೆ ಬರಲಿದೆ! – ಹವಾಮಾನ ಇಲಾಖೆ

ನವದೆಹಲಿ- ಮುಂದಿನ 15 ದಿನಗಳಲ್ಲಿ ದೇಶದ 16 ರಾಜ್ಯಗಳಲ್ಲಿ ಮುಂಗಾರು ಪ್ರವೇಶಿಸಲಿದೆಯೆಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ 19ರಿಂದ ಕೆಲವು ರಾಜ್ಯಗಳಲ್ಲಿ ಮಳೆ ಪ್ರಾರಂಭವಾಗಿದ್ದು, ಇದರಲ್ಲಿ ದೆಹಲಿ, ಬಿಹಾರ, ಪೂರ್ವ ಉತ್ತರಪ್ರದೇಶ ಮತ್ತು ಬಂಗಾಳದ ಕಡಲ ತೀರದ ಪ್ರದೇಶಗಳು ಸೇರಿವೆ. ಆಸ್ಸಾಂ, ಉಪ-ಹಿಮಾಲಯದ ಬಂಗಾಳ, ಸಿಕ್ಕಿಂ, ಪಶ್ಚಿಮ ಮಧ್ಯಪ್ರದೇಶದಲ್ಲಿ ಮುಂದಿನ 24 ಗಂಟೆಗಳಲ್ಲಿ ಮಧ್ಯಮದಿಂದ ಧಾರಾಕಾರ ಮಳೆ ಬರುವ ಸಾಧ್ಯತೆಯಿದೆ.

ಮುಂದಿನ 2 ದಿನಗಳಲ್ಲಿ ಮಧ್ಯಪ್ರದೇಶ ಸಹಿತ 10 ರಾಜ್ಯಗಳಲ್ಲಿ ಉಷ್ಣತೆಯ ಅಲೆ

ಹವಾಮಾನ ಇಲಾಖೆಯ ಅಂದಾಜಿನಂತೆ ಮುಂದಿನ ಎರಡು ದಿನಗಳಲ್ಲಿ ಉತ್ತರಪ್ರದೇಶ, ಬಿಹಾರ, ಝಾರಖಂಡ, ಮಧ್ಯಪ್ರದೇಶ, ಓಡಿಸ್ಸಾ, ಬಂಗಾಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣಾ ಮತ್ತು ತಮಿಳುನಾಡು ಈ 10 ರಾಜ್ಯಗಳಲ್ಲಿ ಉಷ್ಣತೆಯ ಅಲೆಗಳು ಬರುವ ಸಾಧ್ಯತೆಯಿದೆ. ಈ ರಾಜ್ಯಗಳಿಗೆ ಈ ಬಗ್ಗೆ ಈಗಾಗಲೇ ಎಚ್ಚರಿಕೆ ವಹಿಸುವಂತೆ ಮುನ್ಸೂಚನೆಯನ್ನು ಕೊಡಲಾಗಿದೆ. ಉಷ್ಣತೆಯ ಅಲೆಗಳ ಸಂದರ್ಭದಲ್ಲಿ ಕೇಂದ್ರೀಯ ಆರೋಗ್ಯ ಸಚಿವ ಮನಸುಖ ಮಾಂಡವಿಯಾ ಇವರು ಉನ್ನತಮಟ್ಟದ ಸಭೆಯನ್ನು ನಡೆಸಿದರು.

ದೆಹಲಿ, ಮಧ್ಯಪ್ರದೇಶ, ಝಾರಖಂಡ, ಛತ್ತೀಸಗಡ, ಗಂಗಾಕ್ಷೇತ್ರ ಇರುವ ಬಂಗಾಳ ಮತ್ತು ಈಶಾನ್ಯದ 8 ರಾಜ್ಯಗಳಿಗೆ ಮುಂದಿನ 15 ದಿನಗಳಲ್ಲಿ ಧಾರಾಕಾರ ಮತ್ತು ಸತತ ಮಳೆ ಬೀಳುವ ಸಾಧ್ಯತೆಯಿದೆ.

`ಬಿಪರಜಾಯ್’ ಚಂಡಮಾರುತವು ಮುಂಗಾರು ಮಳೆಯ ಶೇ.20 ರಷ್ಟುಕೊರತೆ ನೀಗಿಸಿದೆ.

`ಬಿಪರಜಾಯ್’ ಚಂಡಮಾರುತವು ದೇಶದಲ್ಲಿ ಮುಂಗಾರು ಮಳೆಯ ಕೊರತೆಯನ್ನು ಭರಿಸಿದೆ. ಕೇವಲ ಉತ್ತರ- ಪಶ್ಚಿಮ ಭಾರತದಲ್ಲಿ ಎಂದಿಗಿಂತಲೂ ಶೇ. 37 ರಷ್ಟು ಅಧಿಕ ಮಳೆ ಬಂದಿದೆ. ಬಿಪರಜಾಯ್ ದಿಂದ ಕಳೆದ 4 ದಿನಗಳಲ್ಲಿ ಗುಜರಾತ ಮತ್ತು ರಾಜಸ್ಥಾನದಲ್ಲಿ ಎಷ್ಟು ಮಳೆ ಬಿದ್ದಿದೆಯೆಂದರೆ, ಮುಂಗಾರು ಮಳೆಯ ಶೇ. 20 ರಷ್ಟು ಕೊರತೆಯನ್ನು ಅದು ನೀಗಿಸಿದೆ.