ಮೆಕ್ಸಿಕೋ ದೇಶದಲ್ಲಿ ಅತಿಯಾದ ಉಷ್ಣತೆಯಿಂದ 100 ಜನರ ಸಾವು

ಮೆಕ್ಸಿಕೊ – ದೇಶದಲ್ಲಿ ತೀವ್ರ ಉಷ್ಣತೆಯ ಗಾಳಿಯಿಂದ ಕಳೆದ 2 ವಾರಗಳಲ್ಲಿ 100 ಜನರು ಸಾವನ್ನಪ್ಪಿದ್ದಾರೆ. ಈ ಜನರು ಅತಿಸಾರದಿಂದ ಸಾವನ್ನಪ್ಪಿದ್ದಾರೆ ಎಂದು ಬೆಳಕಿಗೆ ಬಂದಿದೆ. ಉಷ್ಣತೆಯ ಗಾಳಿಯಿಂದಾಗಿ ದೇಶದ ಕೆಲವು ಸ್ಥಳಗಳಳ್ಲಿ ತಾಪಮಾನ 50 ಡಿಗ್ರಿ ಸೆಲ್ಷಿಯಸ್ ಗಿಂತ ಹೆಚ್ಚಾಗಿದೆ. ದೇಶದಲ್ಲಿ ಹೆಚ್ಚಾಗಿರುವ ತಾಪಮಾನದಿಂದಾಗಿ ವಿದ್ಯುತ್ ಪೂರೈಕೆ ಬೇಡಿಕೆ ಹೆಚ್ಚಾಗಿದೆ. ಜನರ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಗಮನಿಸಿ ಅದನ್ನು ಪೂರ್ಣಗೊಳಿಸಲು ಸರಕಾರ ವಿಫಲವಾಗಿದ್ದರಿಂದ ಅನೇಕ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ.