ಅಮರನಾಥ ಯಾತ್ರೆ ಸತತ ಎರಡನೇ ದಿನವೂ ಸ್ಥಗಿತ !

ಶ್ರೀನಗರ – ದಕ್ಷಿಣ ಕಾಶ್ಮೀರದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಅಮರನಾಥ ಯಾತ್ರೆಯನ್ನು ಸತತ ೨ನೇ ದಿನವೂ ಸ್ಥಗಿತಗೊಳಿಸಲಾಗಿದೆ. ಧಾರಾಕಾರ ಮಳೆಯ ನಂತರವೂ ಇಲ್ಲಿಯವರೆಗೆ ೮೪ ಸಾವಿರದ ೭೬೮ ಯಾತ್ರಿಕರು ಅಮರನಾಥನ ದರ್ಶನ ಮಾಡಿದ್ದಾರೆ. ಮಳೆಯಿಂದಾಗಿ ಕೆಲವುಕಡೆಗೆ ಭೂ ಕುಸಿತ ಉಂಟಾಗಿ ರಸ್ತೆಗಳನ್ನು ಬಂದ್ ಮಾಡಲಾಯಿತು.