ಅತಿಯಾದ ನೀರಾವರಿಯಿಂದಾಗಿ ವಿಶ್ವಮಟ್ಟದಲ್ಲಿ ಸಮುದ್ರದ ಮಟ್ಟ ಏರಿಕೆ !
ನ್ಯೂಯಾರ್ಕ (ಅಮೇರಿಕಾ) – ಅಂತರ್ಜಲವು ನಾಗರಿಕರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರನ್ನು ಪೂರೈಸುತ್ತದೆ ಮತ್ತು ಮಳೆಯ ಕೊರತೆಯಿರುವಾಗ ಬೆಳೆಗಳಿಗೆ ನೀರುಣಿಸಲು ಸಹಾಯ ಮಾಡುತ್ತದೆ; ಆದರೂ ಹೊಸ ಸಂಶೋಧನೆಯಲ್ಲಿ, ಒಂದು ದಶಕ್ಕಿಂತಲೂ ಹೆಚ್ಚು ಅಂತರ್ಜಲದ ನೀರನ್ನು ನೀರಾವರಿಗಾಗಿ ನಿರಂತರವಾಗಿ ಉಪಯೋಗಿಸಿರುವುದರಿಂದ ನಮ್ಮ ಗ್ರಹ ಯಾವ ಅಕ್ಷದಲ್ಲಿ (ಆಕ್ಸಿಸ್ ಮೇಲೆ)ತಿರುಗುತ್ತಿತ್ತೋ, ಅದು ಪ್ರತಿವರ್ಷ ಸುಮಾರು 4.3. ಸೆಂಟಿಮೀಟರಗಳಿಂದ ಪೂರ್ವದ ಕಡೆಗೆ ಸರಿಯುತ್ತಿದೆ. ಈ ಬದಲಾವಣೆ ಪೃಥ್ವಿಯ ಮೇಲ್ಮೈಯಲ್ಲಿಯೂ ಕಂಡು ಬರುತ್ತದೆ. ಇದರ ಪರಿಣಾಮವಾಗಿ ವಿಶ್ವದಲ್ಲಿ ಸಮುದ್ರ ಮಟ್ಟ ಹೆಚ್ಚಾಗಿದೆ ಎಂದು `ಜಿಯೋಫಿಸಿಕಲ್ ರಿಸರ್ಚ ಲೆಟರ್ಸ ಜರ್ನಲ್’ ನಲ್ಲಿ ಜೂನ್ 15 ರಂದು ಪ್ರಕಟಿಸಿರುವ ವರದಿಯಲ್ಲಿ ಸಂಶೋಧಕರು ತಿಳಿಸಿದ್ದಾರೆ.
1. 1993 ರಿಂದ 2010 ಕಾಲಾವಧಿಯಲ್ಲಿ ಮಾನವನು ಪೃಥ್ವಿಯ ಗರ್ಭದಿಂದ 2 ಸಾವಿರ 150 ಅಬ್ಜ ಟನ್ ಗಳಿಗಿಂತಲೂ ಹೆಚ್ಚು ಭೂಜಲವನ್ನು ಹೊರಗೆ ತೆಗೆದಿದ್ದಾರೆ. ಇದರಲ್ಲಿ ಹೆಚ್ಚಿನ ನೀರು ಪಶ್ಚಿಮ ಉತ್ತರ ಅಮೇರಿಕಾ ಮತ್ತು ವಾಯುವ್ಯ ಭಾರತದಿಂದ ಬಂದಿದೆಯೆಂದು ಸಂಶೋಧನೆಯಲ್ಲಿ ಹೇಳಿದ್ದಾರೆ.
2. 2016 ರಲ್ಲಿ ಸಂಶೋಧಕರ ಮತ್ತೊಂದು ತಂಡಕ್ಕೆ, 2003 ರಿಂದ 2015 ರ ಕಾಲಾವಧಿಯಲ್ಲಿ ಪೃಥ್ವಿಯ ತಿರುಗುವಿಕೆಯ ಅಕ್ಷದಲ್ಲಿ ಬದಲಾವಣೆಯು ಹಿಮನದಿಗಳು ಮತ್ತು ಬರ್ಫಗಳ ಬದಲಾವಣೆಗಳಿಗೆ ಸಂಬಂಧಿಸಿದ್ದು, ಇದು ಪೃಥ್ವಿಯ ಮೇಲಿನ ಅಂತರ್ಜಲದ ಸಂಗ್ರಹಣೆಗೂ ಸಂಬಂಧಿಸಿದೆಯೆಂದು ಕಂಡು ಹಿಡಿದಿದೆ.