4 ದಿನಗಳಿಂದ ಅಪಾಯದ ಮಟ್ಟ ಏರಿದ ದೆಹಲಿಯಲ್ಲಿನ ಯಮುನಾ ನದಿ !

ಸರ್ವೋಚ್ಚ ನ್ಯಾಯಾಲಯ, ಕೆಂಪು ಕೋಟೆ ಮತ್ತು ರಾಜ್‌ಘಾಟ್ ಬಳಿ ನುಸುಳಿದ ನೀರು !

ನವ ದೆಹಲಿ – ಹರಿಯಾಣದ ಹಥಿನಿಕುಂಡ್ ಅಣೆಕಟ್ಟಿನಿಂದ ನಿರಂತರವಾಗಿ ನೀರು ಬಿಡುತ್ತಿರುವುದರಿಂದ ಯಮುನಾ ನದಿಯಲ್ಲಿ ಪ್ರವಾಹ ಬಂದಿದೆ. ಜುಲೈ 13 ರಂದು ನೀರು 208.66 ಮೀಟರ್‌ ಎತ್ತರಕ್ಕೆ ತಲುಪಿತ್ತು. ಇದರಿಂದಾಗಿ ಸರ್ವೋಚ್ಚ ನ್ಯಾಯಾಲಯದ ಹೊರಭಾಗದ ರಸ್ತೆ ಜಲಾವೃತವಾಯಿತು. ಅಷ್ಟೇ ಅಲ್ಲದೆ, ಕೆಂಪು ಕೋಟೆ ಮತ್ತು ರಾಜ್‌ಘಾಟ್‌ನಲ್ಲಿಯೂ ನೀರು ತುಂಬಿದೆ. ‘ಐಎಸ್‌ಬಿಟಿ’ಯಿಂದ ಕಾಶ್ಮೀರ ಗೇಟ್‌ವರೆಗೆ 20 ಅಡಿವರೆಗೆ ನೀರು ಸಂಗ್ರಹವಾಗಿದೆ.

1. ನೆರವು ನೀಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 16 ಘಟಕಗಳನ್ನು ನಿಯೋಜಿಸಲಾಗಿದೆ.

2. ಜುಲೈ 14 ರ ಸಂಜೆಯ ಹೊತ್ತಿಗೆ, 2,700 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ ಮತ್ತು 23,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

3. ದೆಹಲಿಯ 6 ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿವೆ. ಪ್ರವಾಹದಿಂದಾಗಿ ಮೂರು ನೀರು ಸಂಸ್ಕರಣಾ ಘಟಕಗಳನ್ನು ಬಂದ್ ಮಾಡಿದ್ದರಿಂದ ಮುಂದಿನ ಒಂದೆರಡು ದಿನಗಳವರೆಗೆ ರಾಜಧಾನಿಗೆ ಶೇ. 25 ರಷ್ಟು ಕಡಿಮೆ ನೀರು ಸಿಗಲಿದೆ.

4. ರಾಜಧಾನಿಯ ಎಲ್ಲಾ ಶಾಲೆಗಳು ಮತ್ತು ಕಾಲೇಜ್ ಗಳನ್ನು ಜುಲೈ 16 ರವರೆಗೆ ಮುಚ್ಚಲಾಗಿದೆ ಮತ್ತು ಸರಕಾರಿ ಕಚೇರಿಗಳು ಮನೆಯಿಂದಲೇ ಕೆಲಸ ಮಾಡಲು ಅನುಮತಿಸಲಾಗಿದೆ.