ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಭಾರೀ ಭೂಕುಸಿತ, 12 ಜನರ ಸಾವು !

103 ಜನರ ರಕ್ಷಣೆ

30 ರಿಂದ 40 ಮನೆಗಳು ಹೂತು ಹೋಗಿದೆ !

ಮೃತರ ಸಂಬಂಧಿಕರಿಗೆ ೫ ಲಕ್ಷ ರೂಪಾಯ ಪರಿಹಾರ ಘೋಷಣೆ !

ರಾಯಗಡ – ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಭೀಕರ ಭೂಕುಸಿತ ಸಂಭವಿಸಿದೆ. ರಾಯಗಡ ಜಿಲ್ಲೆಯ ಖಲಾಪುರದ ಇರ್ಸಾಲವಾಡಿ ಗ್ರಾಮದಲ್ಲಿ ಭಾರಿ ಭೂಕುಸಿತ ಸಂಭವಿಸಿದೆ ಎಂದು ವರದಿಯಾಗಿದೆ. ಎನ್‌ಡಿಆರ್‌ಎಫ್‌ನ ನಾಲ್ಕು ತಂಡಗಳು ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಭೂಕುಸಿತದ ಅವಶೇಷಗಳಲ್ಲಿ 100 ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ. ಸುಮಾರು 70 ರಿಂದ 75 ಮನೆಗಳು ಇಲ್ಲಿದ್ದು, ಈ ಭೂಕುಸಿತದಲ್ಲಿ ಸುಮಾರು 30 ರಿಂದ 35 ಮನೆಗಳಿಗೆ ಹಾನಿಯಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ 10 ಮಂದಿಯನ್ನು ರಕ್ಷಿಸಲಾಗಿದೆ. ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ.

ಜೆಸಿಬಿ ತಲುಪಲು ಕಷ್ಟ, ಹೆಲಿಕಾಪ್ಟರ್ ಮೂಲಕ ರಕ್ಷಣೆಗೆ ಸಿಎಂ ಆದೇಶ

ರಾಯಗಡ ಜಿಲ್ಲೆಯ ಖಲಾಪುರದ ಇರ್ಶಲವಾಡಿಯಲ್ಲಿ ಭೂಕುಸಿತ ಸಂಭವಿಸಿದೆ ಎಂದು ಎನ್‌ಡಿಆರ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಕೆಲವರು ಸಿಕ್ಕಿಬಿದ್ದಿರುವ ಆತಂಕವಿದೆ. ಎನ್‌ಡಿಆರ್‌ಎಫ್‌ನ 2 ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಶೋಧ ಮತ್ತು ರಕ್ಷಣಾ ಕಾರ್ಯ ಆರಂಭಿಸಿವೆ. ಮುಂಬೈನಿಂದ ಇನ್ನೂ 2 ತಂಡಗಳು ಕಾರ್ಯಾಚರಣೆಗೆ ತೆರಳಿವೆ. ಘಟನೆಯ ನಂತರ ರಾಯಗಢ ಪೊಲೀಸರು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದ್ದಾರೆ. ಸಿಎಂ ಶಿಂಧೆ ಹೆಲಿಕಾಪ್ಟರ್ ಮೂಲಕ ರಕ್ಷಣೆಗೆ ಆದೇಶ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳದಲ್ಲಿನ ರಸ್ತೆಗಳು ತುಂಬಾ ಹದಗೆಟ್ಟಿದ್ದು, ಡಾಂಬರು ಕಾಣದ ಕಾರಣ ಇಲ್ಲಿಯವರೆಗೆ ಜೆಸಿಬಿ ಕೂಡ ಬರಲು ಸಾಧ್ಯವಾಗಿಲ್ಲ.