ಧಾರಾಕಾರ ಮಳೆಯಿಂದಾಗಿ ಹಿಮಾಚಲ ಪ್ರದೇಶಕ್ಕೆ 4 ಸಾವಿರ ಕೋಟಿ ರೂಪಾಯಿಗಳ ಹಾನಿ !

ಶಿಮಲಾ (ಹಿಮಾಚಲ ಪ್ರದೇಶ) – ಧಾರಾಕಾರ ಮಳೆಯ ರಭಸಕ್ಕೆ ಉತ್ತರ ಭಾರತವು ತತ್ತರಿಸಿದ್ದು ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದಾಗಿ ಇಲ್ಲಿಯ ವರೆಗೆ ಅನೇಕ ಕಡೆಗಳಲ್ಲಿ ಭೂಕುಸಿತ ಸಂಭವಿಸಿದ್ದು ಜನರು ನೀರಿನ ಪ್ರವಾಹವನ್ನು ಎದುರಿಸಬೇಕಾಗುವುದು. ಇಲ್ಲಿಯ ವರೆಗೆ 17 ಜನರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ರಾಜ್ಯಕ್ಕೆ ಸುಮಾರು 3 ರಿಂದ 4 ಸಾವಿರ ಕೋಟಿ ರೂಪಾಯಿಗಳ ಹಾನಿಯಾಗಿದೆ. ರಾಜ್ಯದ ಲಾಹೌಲ ಸ್ಪಿತಿ, ಹಾಗೆಯೇ ಕುಲ್ಲೂ ಜಿಲ್ಲೆಗಳಲ್ಲಿ ನೆರೆಯ ನೀರಿನಿಂದಾಗಿ ಸಿಲುಕಿದ್ದ 300 ಪ್ರವಾಸಿಗರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲು ಪ್ರಯತ್ನಿಸಲಾಗುತ್ತಿದೆ.