ದೇಶದ ೧೫ ರಾಜ್ಯಗಳಲ್ಲಿ ನೆರೆಯನ್ನು ದರ್ಶಿಸುವ ಸ್ಥಿತಿ

ನವದೆಹಲಿ – ದೇಶದಲ್ಲಿ ಮಳೆಗಾಲದ ಆಗಮನವಾಗಿ ೫೦ ದಿನಗಳಾಗಿವೆ. ದೇಶದ ಉತ್ತರ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ಸುರಿದಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ, ಗುಜರಾತ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಮುಂಬರುವ ೩ ದಿನಗಳಲ್ಲಿ ಧಾರಾಕಾರ ಮಳೆ ಸುರಿಯುವುದಾಗಿ ಎಚ್ಚರಿಸಲಾಗಿದೆ. ಹಾಗೆಯೇ ಜಮ್ಮು-ಕಾಶ್ಮೀರ, ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ದೇಶದ ಸುಮಾರು ೧೫ ರಾಜ್ಯಗಳಲ್ಲಿನ ಅನೇಕ ಜಿಲ್ಲೆಗಳಲ್ಲಿ ನೆರೆಯ ಸ್ಥಿತಿಯಿದೆ. ಇದರಲ್ಲಿ ಉತ್ತರಾಖಂಡ, ಉತ್ತರಪ್ರದೇಶ, ಹಿಮಾಚಲ ಪ್ರದೇಶ, ಬಿಹಾರ, ಅಸ್ಸಾಮ, ದೆಹಲಿ, ಝಾರಖಂಡ, ಬಂಗಾಳ, ಒಡಿಶಾ, ಗುಜರಾತ, ತೆಲಂಗಾಣ, ಗೋವಾ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಈ ರಾಜ್ಯಗಳೂ ಸೇರಿವೆ.

ದೇಶದಲ್ಲಿ ಜೂನ್ ೧ ರಿಂದ ಜುಲೈ ೧೮ರ ವರೆಗೆ ೩೨೧.೮ ಮಿಮಿ. ಮಳೆಯಾಗಿದೆ. ಉತ್ತರ ಭಾರತದಲ್ಲಿ ಮಳೆಯಿಂದಾಗಿ ಯಮುನಾ ನದಿಯು ಅಪಾಯದ ಮಟ್ಟವನ್ನು ದಾಟಿದ್ದು ಯಮುನಾದ ನೀರು ಆಗ್ರಾದ ತಾಜಮಹಲಿನ ವರೆಗೆ ತಲುಪಿದೆ. ಅದೇ ಸಮಯದಲ್ಲಿ ೧೨ ರಾಜ್ಯಗಳಲ್ಲಿನ ೨೧ ಜಿಲ್ಲೆಗಳಲ್ಲಿ ಮಳೆಯು ಶೆ. ೬೦ಕ್ಕಿಂತಲೂ ಕಡಿಮೆಯಾಗಿದೆ. ಬಿಹಾರದಲ್ಲಿನ ೨೯, ಉತ್ತರಪ್ರದೇಶದಲ್ಲಿನ ೨೫, ಮಹಾರಾಷ್ಟ್ರದಲ್ಲಿನ ೧೮, ಕರ್ನಾಟಕದಲ್ಲಿನ ೧೭ ಜಿಲ್ಲೆಗಳಲ್ಲಿ ಸರಾಸರಿಗಿಂತಲೂ ಕಡಿಮೆ ಮಳೆಯಾಗಿದೆ.