ವಲಸಾಡ (ಗುಜರಾತ) ನಲ್ಲಿ, ಜೈನ ಹುಡುಗಿಯನ್ನು ಪ್ರೀತಿಯ ಬಲೆಗೆ ಬೀಳಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ವಿವಾಹಿತ ಮತಾಂಧ !

೧೯ ವರ್ಷದ ಜೈನ ಧರ್ಮೀಯ ಯುವತಿಯನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿ ನಂತರ ಅಪಹರಿಸಿ ಆಕೆಯನ್ನು ಲೈಂಗಿಕವಾಗಿ ಶೋಷಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಮ್ರಾನ್ ಅನ್ಸಾರಿಯನ್ನು ಬಂಧಿಸಿದ್ದಾರೆ.

ಹಿಂದೂ ಯುವಕನನ್ನು ಮದುವೆಯಾಗಿದ್ದರಿಂದ ಮುಸಲ್ಮಾನ ಹುಡುಗಿಗೆ ಸಂಬಂಧಿಕರಿಂದ ಥಳಿತ !

ರರಿಯಾ ಗ್ರಾಮದಲ್ಲಿ ಹಿಂದೂ ಯುವಕನನ್ನು ವಿವಾಹವಾಗಿದ್ದ ಮುಸಲ್ಮಾನ ಯುವತಿಯನ್ನು ಸಂಬಂಧಿಕರು ಥಳಿಸಿದ್ದಾರೆ. ಜೊತೆಗೆ ಅವಳ ತಲೆಯ ಕೂದಲನ್ನು ಸಂಪೂರ್ಣವಾಗಿ ಕತ್ತರಿಸಿ ಅವಳನ್ನು ಸಂಪೂರ್ಣ ಹಳ್ಳಿಯಲ್ಲಿ ಮೆರವಣಿಗೆಯನ್ನು ತೆಗೆಯಲಾಯಿತು. ಈ ಮಾಹಿತಿ ದೊರೆತ ಕೂಡಲೇ ಪೊಲೀಸರು ಗ್ರಾಮಕ್ಕೆ ತೆರಳಿ ಬಾಲಕಿಯನ್ನು ಬಿಡುಗಡೆ ಮಾಡಿ ೮ ಜನರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ೫ ಜನರನ್ನು ಬಂಧಿಸಲಾಗಿದೆ.

‘ಓಂ’ ಎಂದು ಉಚ್ಚರಿಸಿದರೆ ಯೋಗ ಶಕ್ತಿಶಾಲಿ ಆಗುವುದಿಲ್ಲ !'(ವಂತೆ) – ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಗ್ವಿ

‘ಓಂ’ ಉಚ್ಚರಿಸಿದರೆ ಯೋಗವು ಶಕ್ತಿಶಾಲಿ ಆಗುವುದಿಲ್ಲ ಮತ್ತು ಅಲ್ಲಾಹನ ಹೆಸರನ್ನು ತೆಗೆದುಕೊಳ್ಳುವುದರಿಂದ ಯೋಗದ ಶಕ್ತಿ ಕಡಿಮೆ ಆಗುವುದಿಲ್ಲ’, ಎಂದು ಕಾಂಗ್ರೆಸ್ ಮುಖಂಡ ಮತ್ತು ನ್ಯಾಯವಾದಿ ಅಭಿಷೇಕ ಮನು ಸಿಂಗ್ವಿ ಟ್ವೀಟ್ ಮಾಡಿದ್ದಾರೆ.

ಕೊರೋನಾ ವಿರುದ್ಧದ ಹೋರಾಟದಲ್ಲಿ ಯೋಗವೊಂದೇ ಆಶಾಕಿರಣ ! – ಪ್ರಧಾನಿ ನರೇಂದ್ರ ಮೋದಿ

ಕೊರೋನಾದ ಈ ಕಷ್ಟದ ಸಮಯದಲ್ಲಿ ಜನರಲ್ಲಿ ಯೋಗದ ಬಗ್ಗೆ ಆಸಕ್ತಿ ಹುಟ್ಟಿದೆ. ಆದ್ದರಿಂದ ಜನರಲ್ಲಿ ಕೊರೊನಾದ ವಿರುದ್ಧ ಹೋರಾಡುವ ವಿಶ್ವಾಸವನ್ನು ಹೆಚ್ಚಿಸಿದೆ. ಯೋಗದ ಬಗ್ಗೆ ಪ್ರಪಂಚದಾದ್ಯಂತ ಸಂಶೋಧನೆ ನಡೆಯುತ್ತಿದೆ. ರೋಗನಿರೋಧಕ ವ್ಯವಸ್ಥೆಯ ಮೇಲೆ ಯೋಗದಿಂದಾಗುವ ಸಕಾರಾತ್ಮಕ ಪರಿಣಾಮಗಳ ಬಗ್ಗೆಯೂ ಸಂಶೋಧನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಸಿವಾನ್ (ಬಿಹಾರ)ನಲ್ಲಿ ಮಸೀದಿಯಲ್ಲಿ ಸ್ಫೋಟಗೊಂಡ ಬಾಂಬ್‍ನಿಂದ ಇಬ್ಬರಿಗೆ ಗಾಯ !

ಜುಡಕನ್ ಗ್ರಾಮದ ಮಸೀದಿಯ ಹಿಂದೆ ನಡೆದ ಬಾಂಬ್ ಸ್ಫೋಟದಲ್ಲಿ ತಂದೆ ಮತ್ತು ಮಗ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿನೋದ್ ಮಾಂಝಿ ಮತ್ತು ಅವರ ೩ ವರ್ಷದ ಮಗ ಸತ್ಯಂ ಕುಮಾರ್ ಎಂದು ಗುರುತಿಸಲಾಗಿದೆ. ಸ್ಫೋಟದ ಶಬ್ದದಿಂದ ಗ್ರಾಮಸ್ಥರು ಇಲ್ಲಿ ಜಮಾಯಿಸಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಯುರ್ವೇದ ಔಷಧಿಗಳಿಂದ ೭ ದಿನಗಳಲ್ಲಿ ಗುಣಮುಖರಾಗುತ್ತಿರುವ ಕೊರೋನಾ ರೋಗಿಗಳು ! – ಸಂಶೋಧಕರ ಸಂಶೋಧನೆ

ಈ ತಂಡ ನಡೆಸಿದ ತನಿಖೆಯಲ್ಲಿ, ‘ಆಯುಷ್ – 64’ ಎಂಬ ಔಷಧವು ಕೊರೋನಾದ ಪ್ರಾಥಮಿಕ ಲಕ್ಷಣಗಳನ್ನು ಹೊಂದಿರುವವರ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ. ಈ ಔಷಧಿ ಪ್ರಾಥಮಿಕ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳನ್ನು ೭ ದಿನಗಳಲ್ಲಿ ಗುಣಪಡಿಸಿತು. ಈ ನಿಟ್ಟಿನಲ್ಲಿ ಈವರೆಗೆ ೧೨೨ ರೋಗಿಗಳನ್ನು ಅಧ್ಯಯನ ಮಾಡಲಾಗಿದೆ.

ಉತ್ತರಪ್ರದೇಶದ ೧೦೦೦ ಬಡ ಹಿಂದೂಗಳನ್ನು ಮತಾಂತರಿಸಿದ ಇಬ್ಬರು ಮೌಲಾನಾರ ಬಂಧನ !

‘ಪ್ರೇರಕ ವಿಚಾರ’ ಅಂದರೆ ‘ಮೊಟಿವೇಶನಲ್ ಥಾಟ್’ನ ನುಡಿಮುತ್ತುಗಳು ಹೇಳುವ ಮೂಲಕ ಬಡ ಹಿಂದೂಗಳನ್ನು ಮತಾಂತರಿಸುತ್ತಿದ್ದ ಇಬ್ಬರು ಮೌಲಾನರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ವಿರೋಧಿ ದಳ ಬಂಧಿಸಿದೆ. ಅವರ ಹೆಸರುಗಳು ಜಹಾಂಗೀರ್ ಮತ್ತು ಉಮರ್ ಗೌತಮ್ ಎಂದಿದ್ದು ಅವರು ‘ದಾವಾ ಇಸ್ಲಾಮಿಕ್ ಸೆಂಟರ್’ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

ಆಂಧ್ರಪ್ರದೇಶದ ಶಾಸಕ ಮತ್ತು ಸ್ಥಳೀಯ ಮತಾಂಧನಿಂದ ಕ್ರೂರಕರ್ಮ ಟಿಪ್ಪು ಸುಲ್ತಾನದ ಪ್ರತಿಮೆಯ ನಿರ್ಮಾಣದ ಆಯೋಜನೆ !

ಆಂಧ್ರಪ್ರದೇಶ ರಾಜ್ಯದ ಕಡಪ್ಪಾ ಜಿಲ್ಲೆಯಲ್ಲಿರುವ ಪ್ರೊದ್ದುತುರನಲ್ಲಿ ಆಡಳಿತಾರೂಢ ವೈಎಸ್‌ಆರ್ (ಯುವ ಕಾರ್ಯಕರ್ತೆ ರಿತು) ಕಾಂಗ್ರೆಸ್ ಶಾಸಕ ಆರ್. ಶಿವ ಪ್ರಸಾದ್ ರೆಡ್ಡಿ, ಮತ್ತು ಸ್ಥಳೀಯ ಮತಾಂಧರು ಕ್ರೂರ ಕರ್ಮ ಟಿಪ್ಪು ಸುಲ್ತಾನ್‌ನ ಪ್ರತಿಮೆಯನ್ನು ನಿರ್ಮಿಸಲು ಆಯೋಜನೆ ರೂಪಿಸಿದ್ದಾರೆ.

ಅಸ್ಸಾಂನಲ್ಲಿ, ಸರಕಾರಿ ಯೋಜನೆಗಳ ಫಲಾನುಭವಿಗಳಿಗೆ ೨ ಮಕ್ಕಳ ಧೋರಣೆಯನ್ನು ಜಾರಿಗೆ ತರಲಾಗುವುದು ! – ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಅಸ್ಸಾಂ ರಾಜ್ಯ ಸರಕಾರದಿಂದ ನಡೆಸುತ್ತಿರುವ, ಅದೇರೀತಿ ಜನರಿಗೆ ಆರ್ಥಿಕ ಸಹಾಯ ಮಾಡುವ ದೃಷ್ಟಿಯಿಂದ ಜಾರಿಗೊಳಿಸಿದ್ದ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಎರಡೇ ಮಕ್ಕಳನ್ನು ಹೊಂದುವ ಧೋರಣೆಯ ಅಗತ್ಯವೆಂದು ನಿರ್ಧರಿತವಾಗಲಿದೆ.

ಕೊರೊನಾದಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ೪ ಲಕ್ಷ ರೂಪಾಯಿಗಳಷ್ಟು ಪರಿಹಾರವನ್ನು ನೀಡಲು ಸಾಧ್ಯವಾಗುವುದಿಲ್ಲ ! – ಕೇಂದ್ರ ಸರಕಾರ

ಕೊರೊನಾದಿಂದ ಮೃತ ಪಟ್ಟ ವ್ಯಕ್ತಿಯ ಕುಟುಂಬಗಳಿಗೆ ೪ ಲಕ್ಷ ರೂಪಾಯಿಗಳ ನಷ್ಟಪರಿಹಾರವನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರವು ಸರ್ವೋಚ್ಚನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ಕೋರಿ ಸರ್ವೋಚ್ಚನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ಮೇಲೆ ಕೇಂದ್ರ ಸರಕಾರದ ಪರವಾಗಿ ಪ್ರತಿಜ್ಞಾಪತ್ರ ಸಲ್ಲಿಸಲಾಯಿತು.