ಹಿಂದೂ ಯುವಕನನ್ನು ಮದುವೆಯಾಗಿದ್ದರಿಂದ ಮುಸಲ್ಮಾನ ಹುಡುಗಿಗೆ ಸಂಬಂಧಿಕರಿಂದ ಥಳಿತ !

ತಲೆಯ ಕೂದಲು ಕತ್ತರಿಸಿ ಹಳ್ಳಿಯಲ್ಲಿ ಮೆರವಣಿಗೆ !

೫ ಜನರ ಬಂಧನ

‘ಲವ್ ಜಿಹಾದ್’ ಘಟನೆಗಳ ಬಗ್ಗೆ ಮಾತನಾಡುವಾಗ, ಪ್ರೀತಿಯಲ್ಲಿ ಯಾವುದೇ ಧರ್ಮವಿಲ್ಲ ಎಂದು ಹೇಳುವ ಪ್ರಗತಿ(ಅಧೋಗತಿ)ಪರರು ಮತ್ತು ಜಾತ್ಯತೀತವಾದಿಗಳು ಈಗ ಎಲ್ಲಿದ್ದಾರೆ ?

ಬಾರಾಬಂಕಿ (ಉತ್ತರ ಪ್ರದೇಶ) – ಇಲ್ಲಿಯ ರರಿಯಾ ಗ್ರಾಮದಲ್ಲಿ ಹಿಂದೂ ಯುವಕನನ್ನು ವಿವಾಹವಾಗಿದ್ದ ಮುಸಲ್ಮಾನ ಯುವತಿಯನ್ನು ಸಂಬಂಧಿಕರು ಥಳಿಸಿದ್ದಾರೆ. ಜೊತೆಗೆ ಅವಳ ತಲೆಯ ಕೂದಲನ್ನು ಸಂಪೂರ್ಣವಾಗಿ ಕತ್ತರಿಸಿ ಅವಳನ್ನು ಸಂಪೂರ್ಣ ಹಳ್ಳಿಯಲ್ಲಿ ಮೆರವಣಿಗೆಯನ್ನು ತೆಗೆಯಲಾಯಿತು. ಈ ಮಾಹಿತಿ ದೊರೆತ ಕೂಡಲೇ ಪೊಲೀಸರು ಗ್ರಾಮಕ್ಕೆ ತೆರಳಿ ಬಾಲಕಿಯನ್ನು ಬಿಡುಗಡೆ ಮಾಡಿ ೮ ಜನರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ೫ ಜನರನ್ನು ಬಂಧಿಸಲಾಗಿದೆ. ಹಿಂದೂ ಯುವಕ ಮತ್ತು ಮುಸಲ್ಮಾನ ಯುವತಿ ಇಬ್ಬರೂ ಅನಾಥರಿದ್ದಾರೆ. ಕೆಲವು ತಿಂಗಳುಗಳಿಂದ ಅವರಲ್ಲಿ ಪ್ರೇಮಸಂಬಂಧ ಇತ್ತು. ಅವರು ದೇವಸ್ಥಾನಕ್ಕೆ ಹೋಗಿ ಮದುವೆಯಾಗಿದ್ದರಿಂದ ಯುವತಿಯ ಸಂಬಂಧಿಕರು ಕೋಪಗೊಂಡರು ಮತ್ತು ಅವರು ಮೇಲಿನ ಕೃತ್ಯವನ್ನು ಮಾಡಿದರು.