ಅಸ್ಸಾಂನಲ್ಲಿ, ಸರಕಾರಿ ಯೋಜನೆಗಳ ಫಲಾನುಭವಿಗಳಿಗೆ ೨ ಮಕ್ಕಳ ಧೋರಣೆಯನ್ನು ಜಾರಿಗೆ ತರಲಾಗುವುದು ! – ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಗೌಹಾಟಿ (ಅಸ್ಸಾಂ) – ಅಸ್ಸಾಂ ರಾಜ್ಯ ಸರಕಾರದಿಂದ ನಡೆಸುತ್ತಿರುವ, ಅದೇರೀತಿ ಜನರಿಗೆ ಆರ್ಥಿಕ ಸಹಾಯ ಮಾಡುವ ದೃಷ್ಟಿಯಿಂದ ಜಾರಿಗೊಳಿಸಿದ್ದ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಎರಡೇ ಮಕ್ಕಳನ್ನು ಹೊಂದುವ ಧೋರಣೆಯ ಅಗತ್ಯವೆಂದು ನಿರ್ಧರಿತವಾಗಲಿದೆ. ಈ ಧೋರಣೆಯನ್ನು ಹಂತಹಂತವಾಗಿ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಮಾಹಿತಿ ನೀಡಿದರು. ಈ ಧೋರಣೆಯು ಕೇಂದ್ರ ಸರಕಾರದ ಯೋಜನೆಗಳಿಗೆ ಅನ್ವಯವಾಗುವುದಿಲ್ಲ ಎಂದು ಮುಖ್ಯಮಂತ್ರಿ ಸರಮಾ ಇವರು ಸ್ಪಷ್ಟಪಡಿಸಿದರು. (ಅಸ್ಸಾಂ ಸರಕಾರವು ಸಾರ್ವಜನಿಕ ಹಿತದೃಷ್ಟಿಯಿಂದ ಇದನ್ನು ಮಾಡಲು ಸಾಧ್ಯವಾದರೆ, ಕೇಂದ್ರ ಸರಕಾರವು ಇದೇ ನಿಯಮಗಳನ್ನು ಅನುಸರಿಸಬೇಕು ! ಜೊತೆಗೆ ಎಲ್ಲಾ ರಾಜ್ಯ ಸರಕಾರಗಳು ಈ ನೀತಿಯನ್ನು ಅನುಸರಿಸಬೇಕು. – ಸಂಪಾದಕ)

ಸರಮಾ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಉಚಿತ ಪ್ರವೇಶ ಅಥವಾ ಪ್ರಧಾಮಂತ್ರಿ ವಸತಿ ಯೋಜನೆಯಡಿಯ ಮನೆಗಳಿಗೆ ಈ ನೀತಿ ಅನ್ವಯಿಸುವುದಿಲ್ಲ ಆದರೆ, ರಾಜ್ಯ ಸರಕಾರವು ವಸತಿ ಯೋಜನೆಯನ್ನು ಪ್ರಾರಂಭಿಸಿದರೆ, ಅದಕ್ಕಾಗಿ ೨ ಮಕ್ಕಳಿರಬೇಕು ಎಂಬ ಧೋರಣೆಯನ್ನು ಜಾರಿಗೆ ತರುವ ಸಾಧ್ಯತೆಯಿದೆ ಎಂದು ಹೇಳಿದರು.