೧೯೦ ದೇಶಗಳಲ್ಲಿ ಅಂತರರಾಷ್ಟ್ರೀಯ ಯೋಗದಿನಾಚರಣೆ
ನವ ದೆಹಲಿ – ಇಂದು ಇಡೀ ಜಗತ್ತು ಕೊರೋನಾ ಸಾಂಕ್ರಾಮಿಕ ಮಹಾಮಾರಿಯೊಂದಿಗೆ ಹೋರಾಡುತ್ತಿದೆ. ಈ ಹೋರಾಟದಲ್ಲಿ ಯೋಗವು ಆಶಾಕಿರಣವಾಗಿ ಹೊರಹೊಮ್ಮಿದೆ ಎಂದು ಜೂನ್ ೨೧ ರಂದು ೭ ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಭಾರತೀಯರಿಗೆ ಮಾರ್ಗದರ್ಶನ ನೀಡುವಾಗ ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಈ ವರ್ಷದ ಯೋಗ ಪರಿಕಲ್ಪನೆಯನ್ನು ‘ಯೋಗ ಫಾರ್ ವೆಲ್ ನೆಸ್'(ಸ್ವಸ್ಥ ಆರೋಗ್ಯಕ್ಕಾಗಿ ಯೋಗ) ಎಂದು ಕರೆಯಲಾಗುತ್ತದೆ. ವಿಶ್ವದ ೧೯೦ ದೇಶಗಳಲ್ಲಿ ಅಂತರರಾಷ್ಟ್ರೀಯ ಯೋಗದಿನಾಚರಣೆಯನ್ನು ಆಚರಿಸಲಾಯಿತು.
PM #NarendraModi said, “Yoga remains a ray of hope when world fights the Covid-19 pandemic.”#InternationalDayofYoga #YogaDay https://t.co/yccqVF0xtw
— Deccan Herald (@DeccanHerald) June 21, 2021
ಮೋದಿಯವರು ತಮ್ಮ ಮಾತನ್ನು ಮುಂದುವರೆಸುತ್ತಾ, ಕಳೆದ ಎರಡು ವರ್ಷಗಳಿಂದ ಕೊರೋನಾದಿಂದ ಜಗತ್ತಿನಲ್ಲಿ ಯಾವುದೇ ದೊಡ್ಡ ಕಾರ್ಯಕ್ರಮಗಳು ನಡೆದಿಲ್ಲ ಆದರೆ, ಯೋಗ ದಿನದಂದು ಜನರ ಉತ್ಸಾಹ ಕಡಿಮೆಯಾಗಿಲ್ಲ. ಈ ವರ್ಷದ ಯೋಗ ಕಲ್ಪನೆಯು ‘ಯೋಗ ಫಾರ್ ವೆಲ್ ನೆಸ್’ ಎಂದಾಗಿದ್ದು ಇದರಿಂದ ಜನರಲ್ಲಿ ಆಕರ್ಷಣೆಯು ಹೆಚ್ಚಾಗಿದೆ. ಪ್ರತಿಯೊಂದು ದೇಶ, ಸಮಾಜ ಮತ್ತು ವ್ಯಕ್ತಿಯು ಆರೋಗ್ಯವಂತರಾಗಿರಬೇಕು ಎಂದು ನಾನು ಭಾವಿಸುತ್ತೇನೆ. ಕೊರೋನಾದ ಈ ಕಷ್ಟದ ಸಮಯದಲ್ಲಿ ಜನರಲ್ಲಿ ಯೋಗದ ಬಗ್ಗೆ ಆಸಕ್ತಿ ಹುಟ್ಟಿದೆ. ಆದ್ದರಿಂದ ಜನರಲ್ಲಿ ಕೊರೊನಾದ ವಿರುದ್ಧ ಹೋರಾಡುವ ವಿಶ್ವಾಸವನ್ನು ಹೆಚ್ಚಿಸಿದೆ. ಯೋಗದ ಬಗ್ಗೆ ಪ್ರಪಂಚದಾದ್ಯಂತ ಸಂಶೋಧನೆ ನಡೆಯುತ್ತಿದೆ. ರೋಗನಿರೋಧಕ ವ್ಯವಸ್ಥೆಯ ಮೇಲೆ ಯೋಗದಿಂದಾಗುವ ಸಕಾರಾತ್ಮಕ ಪರಿಣಾಮಗಳ ಬಗ್ಗೆಯೂ ಸಂಶೋಧನೆ ನಡೆಸಲಾಗುತ್ತಿದೆ ಎಂದು ಹೇಳಿದರು.
‘ಎಂ-ಯೋಗ’ ಈ ಆ್ಯಪ್ ಆರಂಭವಾಗಲಿದೆ !
ಭಾರತ ಈಗ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ‘ಎಂ-ಯೋಗ’ ಆ್ಯಪ್ ಬಿಡುಗಡೆ ಮಾಡಲಿದೆ. ಈ ಅಪ್ಲಿಕೇಶನ್‍ನಲ್ಲಿ ವಿಭಿನ್ನ ಆಸನಗಳು ಮತ್ತು ಇತರ ಮಾಹಿತಿಗಳು ಲಭ್ಯವಿರುತ್ತವೆ. ಈ ಮಾಹಿತಿಯು ವಿವಿಧ ಭಾಷೆಗಳಲ್ಲಿ ಲಭ್ಯವಿರುತ್ತದೆ.