‘ಓಂ’ ಎಂದು ಉಚ್ಚರಿಸಿದರೆ ಯೋಗ ಶಕ್ತಿಶಾಲಿ ಆಗುವುದಿಲ್ಲ !'(ವಂತೆ) – ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಗ್ವಿ

ಯೋಗ ಮಾಡಿದರೆ ಎಲ್ಲರಿಗೂ ಒಂದೇ ದೇವರು ಕಾಣುತ್ತಾರೆ ! – ಯೋಗಋಷಿ ರಾಮದೇವ ಬಾಬಾ ಅವರ ಪ್ರತ್ಯುತ್ತರ

* ಕಾಂಗ್ರೆಸ್ಸಿಗರಿಗೆ ‘ಓಂ’ನ ‘ಅಲರ್ಜಿ’ ಇದೆ ಮತ್ತು ಇತರ ಧರ್ಮಗಳ ಶ್ರದ್ಧಾಸ್ಥಾನವು ಹೆಚ್ಚು ಪ್ರಿಯವಾಗಿದೆ, ಅದಕ್ಕಾಗಿಯೇ ಅವರು ಪ್ರತಿ ಬಾರಿಯೂ ಈ ರೀತಿಯ ಸೈದ್ಧಾಂತಿಕ ಮಾಲಿನ್ಯವನ್ನು ಸೃಷ್ಟಿಸುತ್ತಿದ್ದಾರೆ !

* ಯೋಗವು ಹಿಂದೂ ಧರ್ಮದಿಂದ ಉತ್ಪತ್ತಿಯಾಗಿದೆ ಮತ್ತು ಅದಕ್ಕೆ ಆಧ್ಯಾತ್ಮಿಕ ಮಹತ್ವವಿದೆ. ಆದ್ದರಿಂದ ಯೋಗ ಮಾಡುವಾಗ ‘ಓಂ’ ಅನ್ನು ಉಚ್ಚರಿಸುವುದರಿಂದ ಆಧ್ಯಾತ್ಮಿಕ ಮಟ್ಟದಲ್ಲಿ ಹೆಚ್ಚಿನ ಲಾಭವಾಗುತ್ತದೆ; ಆದರೆ ಅಲ್ಪಸಂಖ್ಯಾತರ ಓಲೈಕೆಯಿಂದ ಕಾಂಗ್ರೆಸ್‍ನ ಹಿಂದೂ ನಾಯಕರು ದೇಶದಲ್ಲಿ ಗಾಂಧಿಗಿರಿ ಪ್ರಾರಂಭಿಸಿದಾಗಿನಿಂದ ಇತರ ಧರ್ಮಗಳಿಗಿಂತ ಹಿಂದೂ ಧರ್ಮವನ್ನು ಕೀಳಾಗಿ ತೋರಿಸಲು ಪ್ರಯತ್ನಿಸುತ್ತಿದ್ದಾರೆ. ಚುನಾವಣೆಗಳ ಮೂಲಕ ಹಿಂದೂಗಳು ಕಾಂಗ್ರೆಸ್ ಅನ್ನು ಉರುಳಿಸಿದ ನಂತರವೂ ಕಾಂಗ್ರೆಸ್ಸಿಗರ ಕಣ್ಣು ತೆರೆದಿಲ್ಲ. ಆದ್ದರಿಂದ, ಭವಿಷ್ಯದಲ್ಲಿ ಹಿಂದೂಗಳು ಕಾಂಗ್ರೆಸ್‍ಅನ್ನು ಇತಿಹಾಸದ ಪುಟಗಳಲ್ಲಿ ಸೇರಿಸುವ ತನಕ ಸುಮ್ಮನಿರುವುದಿಲ್ಲ, ಎಂಬುದನ್ನು ಅವರು ನೆನಪಿನಲ್ಲಿಡಬೇಕು !

ಅಭಿಷೇಕ್ ಮನು ಸಿಂಗ್ವಿ

ನವ ದೆಹಲಿ – ‘ಓಂ’ ಉಚ್ಚರಿಸಿದರೆ ಯೋಗವು ಶಕ್ತಿಶಾಲಿ ಆಗುವುದಿಲ್ಲ ಮತ್ತು ಅಲ್ಲಾಹನ ಹೆಸರನ್ನು ತೆಗೆದುಕೊಳ್ಳುವುದರಿಂದ ಯೋಗದ ಶಕ್ತಿ ಕಡಿಮೆ ಆಗುವುದಿಲ್ಲ’, ಎಂದು ಕಾಂಗ್ರೆಸ್ ಮುಖಂಡ ಮತ್ತು ನ್ಯಾಯವಾದಿ ಅಭಿಷೇಕ್ ಮನು ಸಿಂಗ್ವಿ ಟ್ವೀಟ್ ಮಾಡಿದ್ದಾರೆ. ಅದಕ್ಕೆ ಪ್ರತ್ಯುತ್ತರ ನೀಡಿದ ಯೋಗಋಷಿ ರಾಮದೇವ ಬಾಬಾರವರು, ‘ಈಶ್ವರ ಅಲ್ಲಾ ತೆರೋ ನಾಮ್ ಸಬಕೊ ಸನ್ಮತಿ ದೇ ಭಗವಾನ್’ ಎಂದರೆ ಅಲ್ಲಾಹ್, ದೇವರು ಎಲ್ಲರೂ ಒಬ್ಬರೇ ಆಗಿದ್ದಾರೆ. ಆದ್ದರಿಂದ ‘ಓಂ’ ಎಂದು ಹೇಳುವಲ್ಲಿ ಏನು ತೊಂದರೆ ಇದೆ ? ಇದರಲ್ಲಿ ಎಲ್ಲರಿಗೂ ಒಂದೇ ದೇವರು ಕಾಣಿಸುತ್ತಾನೆ. ಅದಕ್ಕಾಗಿಯೇ ಯೋಗ ಮಾಡಬೇಕು ಎಂದು ಹೇಳಿದರು.

( ಸೌಜನ್ಯ: India Today )