ಉತ್ತರಪ್ರದೇಶದ ೧೦೦೦ ಬಡ ಹಿಂದೂಗಳನ್ನು ಮತಾಂತರಿಸಿದ ಇಬ್ಬರು ಮೌಲಾನಾರ ಬಂಧನ !

ಕಾನಪುರ, ವಾರಣಾಸಿ ಮತ್ತು ನೋಯಡಾದಲ್ಲಿ ನಡೆದ ಮತಾಂತರ !

ಪಾಕಿಸ್ತಾನದ ಐ.ಎಸ್.ಐ. ಸಂಘಟನೆಯಿಂದ ಸಹಾಯಹಸ್ತ !

* ಭಾರತೀಯ ಭದ್ರತಾ ವ್ಯವಸ್ಥೆಯನ್ನು ಬೆಚ್ಚಿಬೀಳಿಸಿದ ಘಟನೆ ! ಶತ್ರುರಾಷ್ಟ್ರದ ಗೂಢಚರ ಸಂಘಟನೆಯು ದೇಶದಲ್ಲಿ ಅನೇಕ ಹಿಂದೂಗಳನ್ನು ಬೃಹತ್ ಪ್ರಮಾಣದಲ್ಲಿ ಮತಾಂತರಗೊಳಿಸುತ್ತಿರುವಾಗ, ನಮ್ಮ ಗುಪ್ತಚರ ಸಂಸ್ಥೆಗಳಿಗೆ ಅದಾಗುತ್ತಿರುವ ಸ್ಥಳ ಹೇಗೆ ತಿಳಿಯಲಿಲ್ಲ ? ಅಥವಾ ಅವರು ನಿದ್ದೆ ಮಾಡುತ್ತಿದ್ದರೇ ? ಸರಕಾರಿ ಸಂಸ್ಥೆಗಳಿಗೆ ಇದು ಅತ್ಯಂತ ನಾಚಿಕೆಯ ವಿಷಯವಾಗಿದೆ !

* ಹಿಂದೂ ಬಹುಸಂಖ್ಯಾತ ದೇಶದಲ್ಲಿ ಇಲ್ಲಿಯವರೆಗೆ ಲಕ್ಷಾಂತರ ಹಿಂದೂಗಳು ಮತಾಂತರಗೊಂಡಿದ್ದರೂ, ಸ್ವಾತಂತ್ರ್ಯದ ೭೪ ವರ್ಷಗಳಲ್ಲಿ, ಒಬ್ಬನೇ ಒಬ್ಬ ರಾಜಕಾರಣಿಯು ಮತಾಂಧರ ಓಲೈಕೆಯ ಹಿಂದೆಬಿದ್ದು ರಾಷ್ಟ್ರಮಟ್ಟದಲ್ಲಿ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತಂದಿಲ್ಲ ! ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಇದರಿಂದ ಅವರಿಗೆ ಪೀಡಿತ ಹಿಂದೂಗಳದ್ದಲ್ಲ, ಮತಾಂತರಿಸುವ ಮತಾಂಧರ ಮತ್ತು ಅವರ ಓಟುಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ, ಈ ಚಿತ್ರಣವನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು !

* ಹಿಂದೂಗಳ ಮತಾಂತರವನ್ನು ತಡೆಗಟ್ಟಲು, ಹಿಂದೂಗಳಿಗೆ ಧರ್ಮ ಶಿಕ್ಷಣವನ್ನು ನೀಡುವ ಮೂಲಕ ಅವರಲ್ಲಿ ಧರ್ಮಾಭಿಮಾನವನ್ನು ಹೆಚ್ಚಿಸುವುದು ಅವಶ್ಯಕವಾಗಿದೆ ! ಅದಕ್ಕಾಗಿ ಎಲ್ಲಾ ಧಾರ್ಮಿಕ ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ಒಂದಾಗಿ ನೇತೃತ್ವವನ್ನು ವಹಿಸಿಕೊಳ್ಳಬೇಕು !

* ಈಗ ಹಿಂದೂ ಸಂಘಟನೆಗಳು ಈ ಮತಾಂತರಗೊಂಡ ಹಿಂದೂಗಳನ್ನು ಪುನಃ ಹಿಂದೂ ಧರ್ಮಕ್ಕೆ ಮರಳಿ ತರಲು ಪ್ರಯತ್ನಿಸಬೇಕು !

ಜಹಾಂಗೀರ್ ಮತ್ತು ಉಮರ್ ಗೌತಮ್

ಲಕ್ಷ್ಮಣಪುರಿ (ಲಖನೌ) – ‘ಪ್ರೇರಕ ವಿಚಾರ’ ಅಂದರೆ ‘ಮೊಟಿವೇಶನಲ್ ಥಾಟ್’ನ ನುಡಿಮುತ್ತುಗಳು ಹೇಳುವ ಮೂಲಕ ಬಡ ಹಿಂದೂಗಳನ್ನು ಮತಾಂತರಿಸುತ್ತಿದ್ದ ಇಬ್ಬರು ಮೌಲಾನರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ವಿರೋಧಿ ದಳ ಬಂಧಿಸಿದೆ. ಅವರ ಹೆಸರುಗಳು ಜಹಾಂಗೀರ್ ಮತ್ತು ಉಮರ್ ಗೌತಮ್ ಎಂದಿದ್ದು ಅವರು ‘ದಾವಾ ಇಸ್ಲಾಮಿಕ್ ಸೆಂಟರ್’ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಭಯೋತ್ಪಾದನಾ ವಿರೋಧಿ ದಳ ಅವರನ್ನು ವಿಚಾರಣೆ ನಡೆಸುತ್ತಿದೆ. ಕಾನಪುರ, ವಾರಣಾಸಿ ಮತ್ತು ನೋಯಡಾದ ಅನೇಕ ಮಕ್ಕಳು ಮತ್ತು ಮಹಿಳೆಯರನ್ನು ಅವರು ಮತಾಂತರಗೊಳಿಸಿದ್ದಾರೆ.

ಭಯೋತ್ಪಾದನಾ ವಿರೋಧಿ ದಳದ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಇವರಿಬ್ಬರು ಬಡ ಹಿಂದೂಗಳನ್ನು ಗುರಿಯಾಗಿಸಿಕೊಂಡಿದ್ದರು. ಅವರು ಇಲ್ಲಿಯವರೆಗೆ ಅಂದಾಜು ೧೦೦೦ ಹಿಂದೂಗಳನ್ನು ಮತಾಂತರಿಸಿದ್ದಾರೆ, ಇದರಲ್ಲಿ ಹೆಚ್ಚಿನ ಸಂಖ್ಯೆಯ ಕಿವುಡ ಮತ್ತು ಮೂಕ ಮಹಿಳೆಯರು ಸೇರಿದ್ದಾರೆ. ರಾಮಪುರದ ಹಳ್ಳಿಯೊಂದರಲ್ಲಿ, ಇಬ್ಬರು ಹಿಂದೂ ಮಕ್ಕಳನ್ನು ಬಲವಂತವಾಗಿ ಸುನ್ನತ ಮಾಡುವ ಮತ್ತು ಅವರನ್ನು ಮತಾಂತರಗೊಳಿಸುವಲ್ಲಿ ಮೌಲಾನನ ಕೈವಾಡವಿದೆ ಎಂಬುದು ಬೆಳಕಿಗೆ ಬಂದಿದೆ. ಅವರಿಗೆ ವಿದೇಶದಲ್ಲಿ ಕಾರ್ಯ ಮಾಡುತ್ತಿರುವ ಮುಸ್ಲಿಂ ಸಂಘಟನೆಯಿಂದ ಆರ್ಥಿಕ ನೆರವು ಪಡೆಯುತ್ತಿರುವುದು ಕಂಡುಬಂದಿದ್ದು, ಪೊಲೀಸರು ಅದರ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತಿದ್ದಾರೆ.

ಡಾಸನಾ ದೇವಸ್ಥಾನದ ಅರ್ಚಕರ ಮೇಲೆ ಹಲ್ಲೆ ನಡೆಸಿದ ಘಟನೆಯಿಂದ ಈ ಪ್ರಕರಣ ಬಹಿರಂಗಗೊಂಡಿದೆ !

ಇದರರ್ಥ ಈ ಘಟನೆ ನಡೆಯದಿದ್ದರೆ, ಪೊಲೀಸರು ಈ ಮೌಲಾನರ ಕೃತ್ಯಗಳು ಎಂದಿಗೂ ತಿಳಿಯುತ್ತಿರಲಿಲ್ಲ ! ಇದಕ್ಕೆ ಕಾರಣವಾಗಿರುವ ಸಿದ್ರಿಸ್ತ ಪೊಲೀಸರನ್ನು ವಜಾಗೊಳಿಸಿ ಮನೆಗೆ ಕಳುಹಿಸಿ !

ಜೂನ್ ೩ ರಂದು ಇಬ್ಬರು ಮತಾಂಧ ಯುವಕರು ದೆಹಲಿಯ ಡಾಸನಾ ದೇವಸ್ಥಾನದಲ್ಲಿ ಅರ್ಚಕರ ಮೇಲೆ ಹಲ್ಲೆಗೆ ಯತ್ನಿಸಿದರು. ಅವರನ್ನು ಬಂಧಿಸಿ ವಿಚಾರಣೆ ನಡೆಸಿದ ನಂತರ ಪೊಲೀಸರಿಗೆ ಮೌಲಾನಾ ಉಮರ್ ಮತ್ತು ಜಹಾಂಗೀರ್ ಬಗ್ಗೆ ಮಾಹಿತಿ ಸಿಕ್ಕಿತು. ಇಬ್ಬರು ಮೌಲಾನರು ‘ನೋಯಡಾ ಡೆಫ ಸೊಸಾಯಿಟಿ’ಯ ಕಿವುಡ-ಮೂಕ ಶಾಲೆಯ ವಿದ್ಯಾರ್ಥಿಗಳಿಗೆ ಆಮಿಷವೊಡ್ಡಿದರು ಮತ್ತು ಅವರನ್ನು ಮತಾಂತರಗೊಳಿಸಿದರು. ಮತಾಂತರಗೊಂಡ ಮಹಿಳೆಯರು ಮತ್ತು ಮಕ್ಕಳ ಪಟ್ಟಿ ಪೊಲೀಸರ ಕೈಗೆ ಸಿಕ್ಕಿದೆ.