ಆರೋಪಿ ಸಗೀರ್ ಸಾಯಿ ಹುಡುಕಾಟದಲ್ಲಿ ಪೊಲೀಸರು !ಬಿಹಾರದಲ್ಲಿ ಕಳೆದ ಕೆಲವು ದಿನಗಳಲ್ಲಿ ಬಾಂಬ್ ಸ್ಫೋಟದ ಮೂರನೇ ಘಟನೆ ! |
ದೇಶದಲ್ಲಿ ಮತಾಂಧರು ಮತ್ತು ಜಿಹಾದಿಗಳು ಬಾಂಬ್‍ಗಳನ್ನು ಸ್ಫೋಟಿಸಿದಾಗ, ಒಂದೇ ಜಾತಿಯ ಪ್ರಗತಿ(ಅಧೋಗತಿ)ಪರರು ಮತ್ತು ಜಾತ್ಯತೀತವಾದಿಗಳು ಬಾಯಿ ಮುಚ್ಚಿಕೊಳ್ಳುತ್ತಾರೆ; ಆದರೆ ಹಿಂದೂಗಳ ನಿರಪರಾಧಿ ಸಂಘಟನೆಗಳು ಮತ್ತು ನಾಯಕರ ವಿರುದ್ಧ ಆರೋಪ ಮಾಡುವಲ್ಲಿ ಅವರು ಮುಂಚೂಣಿಯಲ್ಲಿರುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಸಿವಾನ್ (ಬಿಹಾರ) – ಇಲ್ಲಿನ ಜುಡಕನ್ ಗ್ರಾಮದ ಮಸೀದಿಯ ಹಿಂದೆ ನಡೆದ ಬಾಂಬ್ ಸ್ಫೋಟದಲ್ಲಿ ತಂದೆ ಮತ್ತು ಮಗ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿನೋದ್ ಮಾಂಝಿ ಮತ್ತು ಅವರ ೩ ವರ್ಷದ ಮಗ ಸತ್ಯಂ ಕುಮಾರ್ ಎಂದು ಗುರುತಿಸಲಾಗಿದೆ. ಸ್ಫೋಟದ ಶಬ್ದದಿಂದ ಗ್ರಾಮಸ್ಥರು ಇಲ್ಲಿ ಜಮಾಯಿಸಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ನನ್ನ ಪತಿಯು ಮಗನೊಂದಿಗೆ ಮಸೀದಿಯ ಹಿಂಭಾಗದಲ್ಲಿ ಕುಳಿತಿದ್ದರು. ಆಗ ಹಳ್ಳಿಯ ಸಗಿರ್ ಸಾಯಿ ಎಂಬ ವ್ಯಕ್ತಿ ಬಂದು ಅವರು ನನ್ನ ಗಂಡನಿಗೆ ಒಂದು ಚೀಲ ಕೊಟ್ಟು, ಒಂದು ಗಂಟೆಯಲ್ಲಿ ಒಬ್ಬ ವ್ಯಕ್ತಿ ಇಲ್ಲಿಗೆ ಬರುತ್ತಾನೆ, ಆತನಿಗೆ ಈ ಚೀಲ ಕೊಡು ಎಂದು ಹೇಳಿದ. ಅವನು ಹೊರಡುವಾಗಲೇ ಬ್ಯಾಗ್‍ನಲ್ಲಿದ್ದ ಬಾಂಬ್ ಸ್ಫೋಟಗೊಂಡಿತು. ನನ್ನ ಗಂಡ ಮತ್ತು ಮಗುವಿನೊಂದಿಗೆ ಸಗಿರ್ ಕೂಡ ಗಾಯಗೊಂಡಿದ್ದಾನೆ.’ ಎಂದು ವಿನೋದ್ ಮಾಂಝಿಯ ಪತ್ನಿಯು ಹೇಳಿದ್ದಾರೆ. ಸಗೀರ್ ಗಾಯಗೊಂಡಿದ್ದರೂ, ಅವನು ಪರಾರಿಯಾಗಿದ್ದಾನೆ. ಸಗಿರ್‍ನನ್ನು ಮತ್ತು ಯಾವ ವ್ಯಕ್ತಿಗೆ ಬ್ಯಾಗ್ ನೀಡಲು ಅವನು ಹೇಳಿದ್ದನೋ ಆತನನ್ನು ಪೊಲೀಸರು ಹುಡುಕುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಬಿಹಾರದ ಬಾಂಕಾ ಮತ್ತು ದರಭಂಗಾದಲ್ಲೂ ಬಾಂಬ್ ಸ್ಫೋಟಗೊಂಡಿತ್ತು. ಈಗ ಇದು ಮೂರನೇ ಘಟನೆಯಾಗಿದೆ. ಆದ್ದರಿಂದ ಪೊಲೀಸರು ಘಟನೆಯ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ತನಿಖೆ ನಡೆಸುತ್ತಿದ್ದಾರೆ.