ನವ ದೆಹಲಿ – ಕೊರೊನಾದಿಂದ ಮೃತ ಪಟ್ಟ ವ್ಯಕ್ತಿಯ ಕುಟುಂಬಗಳಿಗೆ ೪ ಲಕ್ಷ ರೂಪಾಯಿಗಳ ನಷ್ಟಪರಿಹಾರವನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರವು ಸರ್ವೋಚ್ಚನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ಕೋರಿ ಸರ್ವೋಚ್ಚನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ಮೇಲೆ ಕೇಂದ್ರ ಸರಕಾರದ ಪರವಾಗಿ ಪ್ರತಿಜ್ಞಾಪತ್ರ ಸಲ್ಲಿಸಲಾಯಿತು. ಇದರಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.
ಇದರಲ್ಲಿ ಕೇಂದ್ರ ಸರಕಾರವು,
೧. ಭೂಕಂಪಗಳು, ಪ್ರವಾಹ ಮುಂತಾದ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಮಾತ್ರ ವಿಪತ್ತು ಕಾಯ್ದೆಯಡಿ ಕಡ್ಡಾಯವಾಗಿ ಪರಿಹಾರವನ್ನು ನೀಡಬಹುದು.
೨. ಅಂತಹ ಪರಿಹಾರವನ್ನು ನೀಡುವುದು ಇದು ರಾಜ್ಯಗಳ ಆರ್ಥಿಕ ಸಾಮರ್ಥ್ಯವನ್ನು ಮೀರಿದೆ.
೩. ಒಂದು ಕಡೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಆದಾಯ ಕುಸಿಯುತ್ತಿದೆ, ಮತ್ತೊಂದೆಡೆ ಆರೋಗ್ಯ ವೆಚ್ಚದಲ್ಲಿ ಭಾರಿ ಹೆಚ್ಚಳವಾಗಿದ್ದರಿಂದ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಂದು ಕಡೆ ಆರ್ಥಿಕ ಒತ್ತಡದಲ್ಲಿವೆ. ಅದರಲ್ಲೇ ಕೊರೋನಾದಿಂದ ಮೃತಪಟ್ಟವರ ಕುಟುಂಬಗಳಿಗೆ ೪ ಲಕ್ಷ ರೂಪಾಯಿ ನೀಡುವುದನ್ನು ಆರಂಭಿಸಿದರೆ ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಬಳಸುವ ಹಣದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ.