ಪ್ರತಿಮೆಯನ್ನು ನಿರ್ಮಿಸಲು ವಿರೋಧಿಸಿದ ಬಿಜೆಪಿ ನಾಯಕರ ಬಂಧನ
|
ಭಾಗ್ಯನಗರ – ಆಂಧ್ರಪ್ರದೇಶ ರಾಜ್ಯದ ಕಡಪ್ಪಾ ಜಿಲ್ಲೆಯಲ್ಲಿರುವ ಪ್ರೊದ್ದುತುರನಲ್ಲಿ ಆಡಳಿತಾರೂಢ ವೈಎಸ್‌ಆರ್ (ಯುವ ಕಾರ್ಯಕರ್ತೆ ರಿತು) ಕಾಂಗ್ರೆಸ್ ಶಾಸಕ ಆರ್. ಶಿವ ಪ್ರಸಾದ್ ರೆಡ್ಡಿ, ಮತ್ತು ಸ್ಥಳೀಯ ಮತಾಂಧರು ಕ್ರೂರ ಕರ್ಮ ಟಿಪ್ಪು ಸುಲ್ತಾನ್‌ನ ಪ್ರತಿಮೆಯನ್ನು ನಿರ್ಮಿಸಲು ಆಯೋಜನೆ ರೂಪಿಸಿದ್ದಾರೆ. ಇದು ಗೊತ್ತಾದ ತಕ್ಷಣ ರಾಜ್ಯದ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಷ್ಣುವರ್ಧನ ರೆಡ್ಡಿ ಇದನ್ನು ವಿರೋಧಿಸಿದ್ದರಿಂದ ಜೂನ್ ೧೮ ರಂದು ಅವರನ್ನು ಮತ್ತು ಇತರ ಹಲವಾರು ಬಿಜೆಪಿ ಮುಖಂಡರನ್ನು ಬಂಧಿಸಲಾಯಿತು. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಆಂಧ್ರಪ್ರದೇಶದ ಸಹ-ಉಸ್ತುವಾರಿ ಸುನೀಲ ದೇವಧರ ಅವರು ವಿಡಿಯೋ ಪ್ರಸಾರ ಮಾಡುವ ಮೂಲಕ ಈ ಮಾಹಿತಿಯನ್ನು ನೀಡಿದರು.
ಶಾಸಕ ಆರ್. ಶಿವಪ್ರಸಾದ ರೆಡ್ಡಿ ಇವರು ಟಿಪ್ಪು ಸುಲ್ತಾನ್ ಅವರ ಪ್ರತಿಮೆಯನ್ನಿಡಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ದೊರೆತ ನಂತರ ಬಿಜೆಪಿ ನಾಯಕರು ಇದನ್ನು ಇಡದಂತೆ ಎಚ್ಚರಿಕೆ ನೀಡಿದರು. ಆದರೂ, ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಳ್ಳದ ಕಾರಣ, ರಾಜ್ಯದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ವಿಷ್ಣುವರ್ಧನ ರೆಡ್ಡಿ, ಬಿಜೆಪಿಯ ಕಡಪ್ಪಾ ಜಿಲ್ಲಾಧ್ಯಕ್ಷ ಯೆಲ್ಲಾ ರೆಡ್ಡಿ, ಮಾಜಿ ಜಿಲ್ಲಾಧ್ಯಕ್ಷ ಅಂಕಲ್ ರೆಡ್ಡಿ, ಬಿಜೆಪಿಯ ‘ಕಿಸಾನ್ ಮೋರ್ಚಾ’ ಅಧ್ಯಕ್ಷ ಶಶಿಭೂಷಣ್ ರೆಡ್ಡಿ ಮತ್ತು ಇತರ ನಾಯಕರು ಪ್ರತಿಮೆ ಹಾಕುವ ಸ್ಥಳದಲ್ಲಿ ಒಟ್ಟಾದರು. ಅವರು ‘ಶಾಸಕ ಆರ್. ಶಿವಪ್ರಸಾದ ರೆಡ್ಡಿ ಇವರು ಬೇಕಂತಲೇ ಟಿಪ್ಪು ಸುಲ್ತಾನ್ ಪ್ರತಿಮೆಯನ್ನು ನಿರ್ಮಿಸುವ ಮೂಲಕ ಮತಾಂಧರನ್ನು ಓಲೈಸುತ್ತಿದ್ದಾರೆ’, ಎಂದು ಆರೋಪಿಸಿದ್ದಾರೆ. ಈ ಕುರಿತು ಪೊಲೀಸರು ಬಿಜೆಪಿಯ ಎಲ್ಲ ಮುಖಂಡರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದರು.
ಈ ಪ್ರಕರಣದಲ್ಲಿ ಬಿಜೆಪಿ ಮುಖಂಡ ಸುನೀಲ ದೇವಧರ ಇವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರನ್ನು ಖಂಡಿಸಿದ್ದಾರೆ. ಅವರು ‘ಸಾವಿರಾರು ಹಿಂದೂಗಳನ್ನು ಕೊಂದು ನೂರಾರು ದೇವಾಲಯಗಳನ್ನು ಧ್ವಂಸ ಮಾಡಿದ ಟಿಪ್ಪು ಸುಲ್ತಾನ್‌ನ ಪ್ರತಿಮೆ ಸ್ಥಾಪನೆಯನ್ನು ವಿರೋಧಿಸಿದ್ದಕ್ಕಾಗಿ ಬಿಜೆಪಿ ನಾಯಕರನ್ನು ಬಂಧಿಸಲಾಗಿದೆ’ ಎಂದು ಅವರು ಆರೋಪಿಸಿದರು.
ಟಿಪ್ಪು ಸುಲ್ತಾನನ ಪ್ರತಿಮೆ ಹಾಕಿದರೆ ಹಿಂದೂಗಳ ಧಾರ್ಮಿಕ ಭಾವನೆಗಳು ಘಾಸಿಗೊಳ್ಳುತ್ತವೆ ! – ಬಿಜೆಪಿಯ ಆಂಧ್ರಪ್ರದೇಶ ರಾಜ್ಯ ಅಧ್ಯಕ್ಷ ಸೋಮು ವೀರರಾಜು
ಆಂಧ್ರಪ್ರದೇಶ ರಾಜ್ಯದ ಬಿಜೆಪಿ ಅಧ್ಯಕ್ಷ ಸೋಮು ವೀರರಾಜುರವರು, ಟಿಪ್ಪು ಸುಲ್ತಾನನ ಪ್ರತಿಮೆ ಹಾಕುವುದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗುತ್ತದೆ ಜೊತೆಗೆ ನಮ್ಮ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಬಹುದು. ಈ ವಿಷಯದಲ್ಲಿ ಮುಖ್ಯಮಂತ್ರಿಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಎಲ್ಲಿಯ ವರೆಗೆ ಈ ನಿರ್ಧಾರವನ್ನು ಹಿಂಪಡೆಯುವುದಿಲ್ಲವೋ, ಅಲ್ಲಿಯವರೆಗೆ ನಮ್ಮ ಆಂದೋಲನ ಮುಂದುವರಿಯುತ್ತದೆ ಎಂದು ಹೇಳಿದರು.