‘ಆಯುಷ್ –64‘ ಔಷಧಿಯಿಂದ ಉತ್ತಮ ಪರಿಣಾಮವಾಗುತ್ತಿದೆ !
ನವ ದೆಹಲಿ – ಕೊರೋನಾ ಸೋಂಕಿಗೆ ಆಯುರ್ವೇದ ಔಷಧಿಗಳನ್ನು ತೆಗೆದುಕೊಂಡರೆ, ೭ ದಿನಗಳಲ್ಲಿ ಕೊರೋನಾದಿಂದ ಮುಕ್ತರಾಗಬಹುದು ಎಂದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ.
೧. ಅಖಿಲ ಭಾರತ ಆಯುರ್ವೇದ ಸಂಸ್ಥೆಯ ನಿರ್ದೇಶಕ ಡಾ. ತನುಜಾ ನೆಸರಿ ಇವರು, ಆಯುರ್ವೇದದಲ್ಲಿ ಈ ರೀತಿಯ ಅನೇಕ ಔಷಧಿಗಳಿವೆ, ಅದು ರುಚಿಯಲ್ಲಿ ಕಹಿಯಾಗಿದ್ದರೂ, ಕೊರೋನಾ ಚಿಕಿತ್ಸೆಗೆ ಪರಿಣಾಮಕಾರಿ ಎಂದು ಸಾಬೀತಾಗಿದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಳಸಿ, ಅಮೃತಬಳ್ಳಿ, ಅಶ್ವಗಂಧಾ, ಬೇವು ಮುಂತಾದ ಔಷಧಿಗಳು ಪರಿಣಾಮಕಾರಿಯಾಗಿವೆ ಎಂದು ಸಾಬೀತಾಗಿದೆ. ಇವುಗಳು ವಿಷಾಣು ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು ಅದು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಔಷಧದ ಅಧ್ಯಯನದ ಆಧಾರದ ಮೇಲೆ ವಿಜ್ಞಾನಿಗಳು ಕೊರೋನಾದ ಸಮಯದಲ್ಲಿ ಆಯುರ್ವೇದ ಔಷಧ `ಆಯುಷ್ -64′ ಅನ್ನು ಅಭಿವೃದ್ಧಿಪಡಿಸಿದರು ಮತ್ತು ಅದರ ಫಲಿತಾಂಶಗಳು ತುಂಬಾ ಉತ್ತಮವಾಗಿವೆ ಎಂದು ಹೇಳಿದ್ದಾರೆ.
೨. ಸಿ.ಸಿ.ಆರ್.ಎ.ಎಸ್. (ಆಯುರ್ವೇದ ವಿಜ್ಞಾನದ ಕೇಂದ್ರೀಯ ಸಂಶೋಧನಾ ಮಂಡಳಿ ಆಯುರ್ವೇದದಲ್ಲಿನ ಸಂಶೋಧನೆಯ ಕೇಂದ್ರ ಪರಿಷತ್ತು) ಈ ಸಂಸ್ಥೆಯ ನಿರ್ದೆಶಕರಾದ ಎನ್. ಶ್ರೀಕಾಂತ ಇವರು, ಆಯುಷ್ ಸಚಿವಾಲಯವು ಕಳೆದ ಒಂದು ವರ್ಷದಲ್ಲಿ ಆಯುರ್ವೇದ ಔಷಧದ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದೆ ಅದಕ್ಕಾಗಿ ‘ಆಯುಷ್ ರೀಸರ್ಚ್ ಆಂಡ್ ಡೆವಲಪ್‍ಮೆಂಟ್ ಟಾಸ್ಕ ಫೋರ್ಸ್’ ಅನ್ನು ಸ್ಥಾಪಿಸಲಾಗಿದೆ. ಈ ತಂಡ ನಡೆಸಿದ ತನಿಖೆಯಲ್ಲಿ, ‘ಆಯುಷ್ – 64‘ ಎಂಬ ಔಷಧವು ಕೊರೊನಾದ ಪ್ರಾಥಮಿಕ ಲಕ್ಷಣಗಳನ್ನು ಹೊಂದಿರುವವರ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ. ಈ ಔಷಧಿ ಪ್ರಾಥಮಿಕ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳನ್ನು ೭ ದಿನಗಳಲ್ಲಿ ಗುಣಪಡಿಸಿತು. ಈ ನಿಟ್ಟಿನಲ್ಲಿ ಈವರೆಗೆ ೧೨೨ ರೋಗಿಗಳನ್ನು ಅಧ್ಯಯನ ಮಾಡಲಾಗಿದೆ. ಈ ಅಧ್ಯಯನದಲ್ಲಿ, ಆಯುಷ್ – 64 ಉತ್ತಮ ರೀತಿಯಲ್ಲಿ ಲಾಭವಾಗಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ.