ಕುಟುಂಬ ವ್ಯವಸ್ಥೆಯ ಹೃದಯ ಅಡುಗೆಮನೆ !
೧೯೭೦ ರ ದಶಕದ ಮೊದಲು ಅಮೆರಿಕದಲ್ಲಿಯೂ ಮನೆಮನೆಗಳಲ್ಲಿ ಮೂರು ತಲೆಮಾರುಗಳು ಒಟ್ಟಿಗೆ ಇರುತ್ತಿದ್ದವು. ಕುಟುಂಬದ ಸದಸ್ಯರು ಪ್ರತಿದಿನ ರಾತ್ರಿ ಊಟದ ಮೇಜಿನಲ್ಲಿ ಕುಳಿತು ಮನೆಯಲ್ಲಿ ತಯಾರಿಸಿದ ಊಟವನ್ನು ಮಾಡುತ್ತಿದ್ದರು. ಈ ಊಟವು ಕುಟುಂಬದ ನಿಯಮಗಳು, ಸಂಪ್ರದಾಯ ಮತ್ತು ಮೌಲ್ಯಗಳನ್ನು ರಕ್ಷಿಸುತ್ತಿತ್ತು