
‘ಮಹರ್ಷಿ ಅಗಸ್ತಿ’ ಇವರು ಸಪ್ತಋಷಿಗಳಲ್ಲಿ ಒಬ್ಬರಾಗಿದ್ದಾರೆ. ಅವರ ಬಗ್ಗೆ ಒಂದು ಲೇಖನವನ್ನು ಓದಿದೆ ಅದನ್ನು ಇಲ್ಲಿ ಕೊಡುತ್ತಿದ್ದೇವೆ. ಅಗಸ್ತಿಋಷಿಗಳು ‘ಅಗಸ್ತ್ಯ ಸಂಹಿತೆ’ ಹೆಸರಿನ ಗ್ರಂಥವನ್ನು ರಚಿಸಿದರು. ಈ ಗ್ರಂಥದ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತದೆ. ಈ ಗ್ರಂಥದ ಪ್ರಾಚೀನದ ಮೇಲೆ ಮತ್ತು ಅದರಲ್ಲಿನ ಬರವಣಿಗೆಗೆ ಆಧರಿಸಿದ ವಿವಿಧ ಸಂಶೋಧನೆಗಳನ್ನು ಮಾಡಲಾಗಿವೆ ಮತ್ತು ಅದು ಸರಿಯಾಗಿದೆ ಎಂದು ಕಂಡುಬಂದಿದೆ. ಈ ಗ್ರಂಥದಲ್ಲಿ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದ ಆಶ್ಚರ್ಯಕರ ಅಂಶಗಳು ಸಿಗುತ್ತವೆ.
೧. ‘ಮಿತ್ರಾವರುಣಶಕ್ತಿ’ಯ (‘ಇಲೆಕ್ಟ್ರಿಸಿಟಿ’ಯ) ನಿರ್ಮಿತಿ ಹೇಗೆ ಆಗುತ್ತದೆ ?
ಸಂಸ್ಥಾಪ್ಯ ಮೃಣ್ಮಯೇ ಪಾತ್ರೇ ತಾಮ್ರಪತ್ರಂ ಸುಸಂಸ್ಕೃತಂ |
ಛಾದಯೇಚ್ಛಿಖಿಗ್ರೀವೇನ ಚಾರ್ದಾಭಿಃ ಕಾಷ್ಠಾಪಾಂಸುಭಿಃ ||
ದಸ್ತಾಲೋಷ್ಟೋ ನಿಧಾತ್ವಯಃ ಪಾರದಾಚ್ಛಾದಿತಸ್ತತಃ |
ಸಂಯೋಗಾಜ್ಜಾಯತೇ ತೇಜೋ ಮಿತ್ರಾವರುಣಸಂಜ್ಞಿತಮ್ || – ಅಗಸ್ತ್ಯ ಸಂಹಿತಾ
ಅರ್ಥ : ಒಂದು ಮಣ್ಣಿನ ಮಡಕೆಯಲ್ಲಿ ತಾಮ್ರದ ಪಟ್ಟಿಯನ್ನು ಇಟ್ಟು ಮೇಲೆ ಕಾಪರ್ ಸಲ್ಫೇಟ್ ಮತ್ತು ಒದ್ದೆ ಕಟ್ಟಿಗೆಯ ಪುಡಿಯಿಂದ ಹೊದಿಸಬೇಕು. ಅದರ ಮೇಲೆ ಪಾದರಸ ಹಾಗೆಯೇ ಝಿಂಕ್‌ಅನ್ನು ಸೇರಿಸಬೇಕು. ನಂತರ ತಂತಿಗಳ ಸಂಯೋಗದಿಂದ ‘ಮಿತ್ರಾವರುಣಶಕ್ತಿ’, ಅಂದರೆ ವಿದ್ಯುತ್‌ನ ನಿರ್ಮಿತಿಯಾಗುತ್ತದೆ. – ಅಗಸ್ತಿಋಷಿಗಳ ‘ಅಗಸ್ತ್ಯ ಸಂಹಿತೆ’ ಗ್ರಂಥ
೨. ‘ಅಗಸ್ತ್ಯ ಸಂಹಿತೆ’ಯಲ್ಲಿ ಬ್ಯಾಟರಿಯಿಂದ (ವಿದ್ಯುತ್ ಘಟಕದಿಂದ) ತಾಮ್ರ, ಚಿನ್ನ ಅಥವಾ ಬೆಳ್ಳಿಯ ಹೊಳಪನ್ನು ನೀಡುವ ಪದ್ದತಿ
‘ಅಗಸ್ತ್ಯ ಸಂಹಿತೆ’ಯಲ್ಲಿ ವಿದ್ಯುತ್‌ಅನ್ನು ಇಲೆಕ್ರೊಪ್ಲೇಟಿಂಗ್ ಗಾಗಿ ಉಪಯೋಗಿಸುವುದರ ವಿವರಣೆ ಸಿಗುತ್ತದೆ. ಅವರು ಬ್ಯಾಟರಿಯಿಂದ ತಾಮ್ರ, ಚಿನ್ನ ಅಥವಾ ಬೆಳ್ಳಿಯ ಹೊಳಪನ್ನು ಕೊಡುವ ಪದ್ಧತಿಯನ್ನು ಹೇಳಿದ್ದಾರೆ. ಅಗಸ್ತಿಋಷಿಗಳಿಗೆ ‘ಕುಂಭೋದ್ಭವ’ (ಬ್ಯಾಟರಿ ಬೋನ್) ಎಂದಲೂ ಕರೆಯುತ್ತಾರೆ.
ಅನೇನ ಜಲಭಙ್ಗೋಸ್ತಿ ಪ್ರಾಣೋ ದಾನೇಷು ವಾಯುಷು |
ಏವಂ ಶತಾನಾಂ ಕುಮ್ಭಾನಾಂ ಸಂಯೋಗಕಾರ್ಯಕೃತ್ಸ್ಮೃತಃ || – ಅಗಸ್ತ್ಯ ಸಂಹಿತಾ
ಅರ್ಥ : (ಮೇಲಿನಂತೆ ನಿರ್ಮಿಸಿದ)೧೦೦ ಕುಂಭಗಳ ಶಕ್ತಿಯನ್ನು ನೀರಿನ ಮೇಲೆ ಪ್ರಯೋಗ ಮಾಡಿದಾಗ, ನೀರು ತನ್ನ ರೂಪವನ್ನು ಬದಲಾಯಿಸಿ ಪ್ರಾಣವಾಯು (ಆಕ್ಸಿಜನ್), ಹಾಗೆಯೇ ಉದಾನವಾಯು (ಹೈಡ್ರೋಜನ್) ಇವುಗಳಲ್ಲಿ ಪರಿವರ್ತನೆ ಆಗುತ್ತದೆ.
೩. ಚಿನ್ನದಲ್ಲಿ ಲೇಪಗೊಂಡ ಆ ತಾಮ್ರಕ್ಕೆ ‘ಶಾತಕುಂಭ ಅಥವಾ ಸ್ವರ್ಣ’ ಎಂದು ಕರೆಯಲಾಗುವುದು
ಕೃತ್ರಿಮಸ್ವರ್ಣರಜತಲೇಪಃ ಸತ್ಕೃತಿರುಚ್ಯತೇ |
ಯವಕ್ಷಾರಮಯೋಧಾನೌ ಸುಶಕ್ತಜಲಸನ್ನಿಧೋ ||
ಆಚ್ಛಾದಯತಿ ತತ್ತಾಮ್ರಂ ಸ್ವರ್ಣೇನ ರಜತೇನ ವಾ |
ಸುವರ್ಣಲಿಪ್ತಂ ತತ್ತಾಮ್ರಂ ಶಾತಕುಮ್ಭಮಿತಿ ಸ್ಮೃತಮ್ || – ಅಗಸ್ತ್ಯ ಸಂಹಿತಾ
ಅರ್ಥ : ಕೃತಕ ಚಿನ್ನ ಅಥವಾ ಬೆಳ್ಳಿಯ ಲೇಪನಕ್ಕೆ ‘ಸತ್ಕೃತಿ’ ಎಂದು ಹೇಳಲಾಗುತ್ತದೆ. ಕಬ್ಬಿಣದ ಪಾತ್ರೆಯಲ್ಲಿ ಸುಶಕ್ತಿ ಜಲ (ಆಸಿಡ್‌ನ ನೀರು) ಇದರ ಸಾನಿಧ್ಯ ದೊರೆತಾಗ ಯವಾಕ್ಷರ (ಚಿನ್ನ ಅಥವಾ ಬೆಳ್ಳಿಯ ನೈಟ್ರೇಟ್) ತಾಮ್ರಕ್ಕೆ ಚಿನ್ನ ಅಥವಾ ಬೆಳ್ಳಿಯಿಂದ ಲೇಪಿಸುತ್ತದೆ. ಸ್ವರ್ಣದಲ್ಲಿ ಲೇಪನಗೊಂಡ ಆ ತಾಮ್ರವನ್ನು ‘ಶಾತಕುಂಭ ಅಥವಾ ಸ್ವರ್ಣ’ ಎಂದು ಕರೆಯುತ್ತಾರೆ. (ಇದರ ಉಲ್ಲೇಖವು ಶುಕ್ರನೀತಿಯಲ್ಲಿಯೂ ಇದೆ.)
೪. ವಿದ್ಯುತ್ ತಂತಿ
ಆಧುನಿಕ ನೌಕಾಚಾಲನ, ವಿದ್ಯುತ್ ವಹನ ಮತ್ತು ಸಂದೇಶ ವಾಹನ ಇತ್ಯಾದಿಗಳಿಗಾಗಿ ಅನೇಕ ತಂತಿಗಳ ದೊಡ್ಡ ಕೇಬಲ್‌ಗಳನ್ನು ಸಿದ್ಧಪಡಿಸಲಾಗುತ್ತದೆ. ಅದೇ ರೀತಿ ಪ್ರಾಚೀನ ಕಾಲದಲ್ಲಿಯೂ ಅವುಗಳನ್ನು ನಿರ್ಮಿಸಲಾಗುತ್ತಿತ್ತು. ಅದಕ್ಕೆ ‘ರಜ್ಜು’ ಎಂದು ಕರೆಯುತ್ತಾರೆ.
೫. ೯ ತಂತಿಗಳ ಅಂಶಗಳು
ನವಭಿಸ್ತನ್ತುಭಿಃ ಸೂತ್ರಂ ಸೂತ್ರೈಸ್ತು ನವಭಿರ್ಗುಣಃ |
ಗುಣೈಸ್ತು ನವಭಿಃ ಪಾಶೋ ರಶ್ಮಿಸ್ತೈರ್ನವಭಿರ್ಭವೇತ್ |
ನವಾಷ್ಟಸಪ್ತಷಟ್ಸಙ್ಖ್ಯೈ ರಶ್ಮಿಭಿರ್ರಜ್ಜವಃ ಸ್ಮೃತಾಃ ||
ಅರ್ಥ : ೯ ತಂತಿಗಳಿಂದ ಒಂದು ಸೂತ್ರವು ಸಿದ್ಧವಾಗುತ್ತದೆ. ೯ ಸೂತ್ರಗಳ ಒಂದು ಗುಣ, ೯ ಗುಣಗಳ ೧ ಪಾಶ, ೯ ಪಾಶಗಳ ಒಂದು ರಶ್ಮಿ (ಕಿರಣ) ಸಿದ್ಧವಾಗುತ್ತದೆ.
೯, ೮, ೭ ಅಥವಾ ೬ ಈ ಸಂಖ್ಯೆಯಿಂದ ತೆಗೆದುಕೊಂಡ ‘ರಶ್ಮಿ’ ಸೇರಿ ಒಂದು ರಜ್ಜು ಉಂಟಾಗುತ್ತದೆ.
೬. ಆಕಾಶದಲ್ಲಿ ಹಾರಾಡುವ ಗ್ಯಾಸ್ ಬಲೂನ್‌ಗಳು
ಅಗಸ್ತಿಮುನಿಗಳು ಆಕಾಶದಲ್ಲಿ ಗ್ಯಾಸ್ ಬಲೂನಗಳನ್ನು ಹಾರಿಸುವ ಮತ್ತು ವಿಮಾನಗಳನ್ನು ಚಲಾಯಿಸುವ ವಿಧಾನಗಳನ್ನೂ ಉಲ್ಲೇಖಿಸಿದ್ದಾರೆ.
ವಾಯುಬನ್ಧಕವಸ್ತ್ರೇಣ ಸುಬಧ್ದೋ ಯಾನಮಸ್ತಕೇ |
ಉದಾನಸ್ಯ ಲಘುತ್ವೇನ ವಿಭ್ಯರ್ತ್ಯಾಕಾಶಯಾನಕಮ್ ||
ಅರ್ಥ : ಉದಾನ ವಾಯು (ಹೈಡ್ರೋಜನ್) ಅನ್ನು ನಿರ್ಬಂಧಿಸುವ ಬಟ್ಟೆಯನ್ನು ಛಾವಣಿಗೆ ಸರಿಯಾಗಿ ಕಟ್ಟಿ, ಅದನ್ನು ತಡೆದು ಹಿಡಿದಾಗ, ಅದು ವಿಮಾನದ ಕೆಲಸಕ್ಕೆ ಬರುತ್ತದೆ. ಇದರರ್ಥ ಹೈಡ್ರೋಜನ್‌ಅನ್ನು ದೃಢವಾಗಿ ಕಟ್ಟಿದರೆ, ಅದನ್ನು ಆಕಾಶದಲ್ಲಿ ಹಾರಿಸಬಹುದು.
೭. ರೇಶ್ಮೆ ಬಟ್ಟೆಗಳು ಮೃದುವಾಗಿರುವುದರಿಂದ ವಾಯು ಬಲೂನುಗಳಿಗೆ ಮತ್ತು ಆಕಾಶದ ಛತ್ರಕ್ಕೆ ಸೂಕ್ತವಾಗಿವೆ
ಜಲನೌಕೇವ ಯಾನಂ ಯದ್ವಿಮಾನಂ ವ್ಯೋಮ್ನಿ ಕೀರ್ತಿತಮ್ |
ಕೃಮಿಕೋಷಸಮುದ್ಗತಂ ಕೌಷೇಯಮಿತಿ ಕಥ್ಯತೇ |
ಸೂಕ್ಷ್ಮಾಸೂಕ್ಷ್ಮೌ ಮೃದುಸ್ಥೂಲೌ ಓತಪ್ರೋತೋ ಯಥಾಕ್ರಮಮ್ ||
ವೈತಾನತ್ವಂ ಚ ಲಘುತಾ ಚ ಕೌಷೇಯಸ್ಯ ಗುಣಸಙ್ಗ್ರಹಃ |
ಕೌಶೇಯಛತ್ರಂ ಕರ್ತವ್ಯಂ ಸಾರಣಾ ಕುಚನಾತ್ಮಕಮ್ |
ಛತ್ರಂ ವಿಮಾನಾದ್ವಿಗುಣಮ್ ಆಯಾಮಾದೌ ಪ್ರತಿಷ್ಠಿತಮ್ ||
ಅರ್ಥ : ನೀರಿನಲ್ಲಿ ಚಲಿಸುವ ನೌಕೆಯಂತೆ ವಿಮಾನವು ಆಕಾಶದಲ್ಲಿ ಹಾರುತ್ತದೆ. ಕೀಟಕಗಳಿಂದ ಉತ್ಪತ್ತಿಯಾಗಿರುವ ರೇಶ್ಮೆ ಬಟ್ಟೆಗಳು ಇದಕ್ಕೆ ಸೂಕ್ತವಾಗಿವೆ; ಏಕೆಂದರೆ ಅದು ಅತ್ಯಂತ ಸೂಕ್ಷ್ಮ ಮತ್ತು ಕೋಮಲವಾಗಿರುತ್ತದೆ. ಎಳೆಯುವ ಸಾಮರ್ಥ್ಯ ಮತ್ತು ಹಗುರತೆ ಇವು ರೇಶ್ಮೆಯ ಗುಣಗಳಾಗಿವೆ. ಆದ್ದರಿಂದ ವಿಮಾನಕ್ಕೆ ರೇಶ್ಮೆ ಬಟ್ಟೆಯ ಛಾವಣಿ ಇರಬೇಕು, ಹಾಗೆಯೇ ಅದು ವಿಮಾನದ ಎರಡುಪಟ್ಟು ಉದ್ದವಿರಬೇಕು.
ಮೇಲಿನ ಸಾಲಿನಲ್ಲಿ ಹೇಳಿದಂತೆ ನೀರಿನಲ್ಲಿ ದೋಣಿಯು ಹೇಗೆ ಚಲಿಸುತ್ತದೆಯೋ ಅದೇ ರೀತಿ ವಿಮಾನವು ವಾಯುವಿನ ಆಧಾರದ ಮೇಲೆ ಚಲಿಸುತ್ತದೆ. ವಾಯುಬಲೂನುಗಳು ಮತ್ತು ಆಕಾಶಛಾವಣಿಗಾಗಿ ರೇಶ್ಮೆ ಬಟ್ಟೆಯನ್ನು ಸೂಕ್ತವೆಂದು ಹೇಳಲಾಗಿದೆ; ಏಕೆಂದರೆ ಅದು ಮೃದುವಾಗಿರುತ್ತದೆ.
೮. ವಾಯುಪೂರಣ ವಸ್ತ್ರ
ಪ್ರಾಚೀನ ಕಾಲದಲ್ಲಿ ಗಾಳಿಯನ್ನು ತುಂಬುವಂತಹ ಬಟ್ಟೆಗಳನ್ನು ತಯಾರಿಸುತ್ತಿದ್ದರು. ಆ ಬಟ್ಟೆಯನ್ನು ಸಿದ್ಧಪಡಿಸಲು ಕೆಳಗಿನ ವಿಧಿಯು ಅಗಸ್ತ್ಯ ಸಂಹಿತೆಯಲ್ಲಿದೆ.
ಕ್ಷೀಕದ್ರುಮಕದಬಾಭ್ರಾ ಭಯಾಕ್ಷತ್ವಶ್ಜಲೈಸ್ತ್ರಿಭಿಃ |
ತ್ರಿಫಲೋದೈಸ್ತತಸ್ತದ್ವತ್ಪಾಷಯುಷೈಸ್ತತಃ ಸ್ತತಃ ||
ಸಂಯಮ್ಯ ಶರ್ಕರಾಸೂಕ್ತಿಚೂರ್ಣಮಿಶ್ರಿತವಾರಿಣಾಮ್ |
ಸುರಸಂ ಕುಟ್ಟನಂ ಕೃತ್ವಾ ವಾಸಾಂಸಿ ಸ್ತ್ರವಯೇತ್ಸುಧೀಃ || – ಅಗಸ್ತ್ಯ ಸಂಹಿತಾ
ಅರ್ಥ: ರೇಶ್ಮೆ ಬಟ್ಟೆಯ ಮೇಲೆ ಅಂಜೂರಿ ಹಣ್ಣು, ಹಲಸಿನ ಹಣ್ಣು, ಮಾವಿನಹಣ್ಣು, ಅಕ್ಷಯ, ನೀರಕದಂಬ ಇತ್ಯಾದಿ ವೃಕ್ಷಗಳು ಮತ್ತು ಕಾಳುಗಳ ರಸ ಅಥವಾ ಸತ್ತ್ವ ಇವುಗಳ ಲೇಪನವನ್ನು ಮಾಡಲಾಗುತ್ತದೆ. ಅನಂತರ ಸಾಗರದ ತೀರದಲ್ಲಿ ದೊರಕುವ ಶಂಖ ಮತ್ತು ಸಕ್ಕರೆಯ ನೀರನ್ನು ಸಿದ್ಧಪಡಿಸಿ ಆ ಬಟ್ಟೆಯನ್ನು ಅದರಲ್ಲಿ ನೆನೆಸಿ ಅದನ್ನು ಒಣಗಿಸುತ್ತಾರೆ. ಇಂತಹ ಬಟ್ಟೆಯಲ್ಲಿ ಉದಾನವಾಯು (ಹೈಡ್ರೋಜನ್) ತುಂಬಿದರೆ ಆ ಬಟ್ಟೆಯನ್ನು ಹಾರಿಸಬಹುದು.
ಅಗಸ್ತಿ ಮಹರ್ಷಿಗಳ ನಂತರ ‘ವೈಶೇಷಿಕ ದರ್ಶನ’ದಲ್ಲಿಯೂ ಊರ್ಜೆಯ ಸೋತ್ರ, ಉತ್ಪತ್ತಿ ಮತ್ತು ಅದರ ಬಳಕೆಯ ಕುರಿತು ಎಲ್ಲ ಮಾಹಿತಿಗಳನ್ನು ಹೇಳಲಾಗಿದೆ.’
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು