ಹಿಂದೂಗಳನ್ನು ಮತಾಂತರಿಸಲು ಸಕ್ರಿಯವಾಗಿರುವ ತಮಿಳುನಾಡು ಸರಕಾರ !

ತಮಿಳುನಾಡು ವೈಷ್ಣವ ಮತ್ತು ಶೈವರ ದೊಡ್ಡ ಮಂದಿರಗಳಿಗಾಗಿ ಪ್ರಸಿದ್ಧವಾಗಿದೆ. ದಕ್ಷಿಣ ಭಾರತದಲ್ಲಿ ಸಾಮ್ರಾಟ ಅಶೋಕ, ಚಂದ್ರಗುಪ್ತ, ಸಮುದ್ರಗುಪ್ತ ಅಥವಾ ವಿಕ್ರಮಾದಿತ್ಯ ಮುಂತಾದವರ ಆಡಳಿತವಿತ್ತು. ಆಕ್ರಮಕರು ಖೈಬರ ಪಖ್ತೂರೀನ ಮಾರ್ಗದಿಂದ ಭಾರತದಲ್ಲಿ ಪ್ರವೇಶಿಸಿದ್ದರು. ಮಂದಿರಗಳನ್ನು ಕೆಡವಿ ಆಡಳಿತ ನಡೆಸುವುದು ಮೊಗಲರ ಪದ್ಧತಿಯಾಗಿತ್ತು. ಆದ್ದರಿಂದ ಅವರು ಎಲ್ಲ ದೊಡ್ಡ ಮಂದಿರಗಳನ್ನು ಕೆಡವಿದರು; ಆದರೆ ಅವರಿಗೆ ತಮಿಳುನಾಡಿಗೆ  ಪ್ರವೇಶ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಅಲ್ಲಿನ ಮಂದಿರಗಳು ಇಂದು ಕೂಡ ಯಥಾಸ್ಥಿತಿಯಲ್ಲಿವೆ. ವಿಶೇಷವಾಗಿ ಆ ಮಂದಿರಗಳನ್ನು ಶಿಲೆಗಳಿಂದ (ಫರಸಿ ಕಲ್ಲು) ತಯಾರಿಸಲಾಗಿದೆ. ತಮಿಳುನಾಡಿನಲ್ಲಿ ಮಂದಿರಗಳಿಗೆ ವಿಶೇಷ ಸ್ಥಾನಮಾನವಿದೆ. ಇಂತಹ ತಮಿಳುನಾಡಿನ ಜನರನ್ನು ಕ್ರೈಸ್ತ ಮತ್ತು ಇಸ್ಲಾಮ್‌ ಸ್ವೀಕರಿಸುವಂತೆ ಮಾಡಲಾಗುತ್ತಿದೆ.

ನ್ಯಾಯವಾದಿ ಡಿ.ಕೆ. ದುಬೆ

೧.ಕ್ರೈಸ್ತ ಮತ್ತು ಮುಸಲ್ಮಾನರಿಂದ ಹಿಂದೂಗಳ ಮತಾಂತರ

ನಾವು ಇತಿಹಾಸವನ್ನು ನೋಡಿದರೆ ಯಾವಾಗಲೂ ಸರಕಾರಕ್ಕೆ ಧರ್ಮದ ಸಂಬಂಧವಿರುತ್ತದೆ. ‘ಸರಕಾರದ ಜೊತೆಗೆ ಧರ್ಮ ನಡೆಯುತ್ತದೆ?, ಎಂಬುದು ಗಮನಕ್ಕೆ ಬರುತ್ತದೆ. ಯಾವ ಪ್ರಕಾರದ ಆಡಳಿತವಿರುತ್ತದೆಯೋ, ಆ ಪ್ರಕಾರದ ಧರ್ಮದ ರಕ್ಷಣೆಯಾಗುತ್ತದೆ. ಮತಾಂಧ ಆಕ್ರಮಣಕಾರರು ಬಲವಂತವಾಗಿ ಜನರನ್ನು ಇಸ್ಲಾಮ್‌ ಸ್ವೀಕರಿಸುವಂತೆ ಮಾಡಿದ್ದಾರೆ. ಕ್ರೈಸ್ತರು ಶಿಸ್ತುಬದ್ಧವಾಗಿ ತಮ್ಮನ್ನು ಆಂಗ್ಲರೆಂದು ಹೇಳಿಸಿಕೊಂಡರು. ಅವರನ್ನು ಆಂಗ್ಲರೆಂದು ಸಂಬೋಧಿಸಿದಾಗ ಅವರ ಮೇಲಿನ ‘ಕ್ರೈಸ್ತ’ ಈ ಮುದ್ರೆ ಅಳಿಸಲ್ಪಟ್ಟಿತು. ಅವರು ದೊಡ್ಡ ಪ್ರಮಾಣದಲ್ಲಿ ಚರ್ಚಗಳನ್ನು ನಿರ್ಮಾಣ ಮಾಡಿದರು. ಅವರು ಶಾಲೆ, ಆಸ್ಪತ್ರೆ, ಕಾರ್ಖಾನೆ ಈ ಎಲ್ಲ ಸ್ಥಳಗಳಲ್ಲಿ ಚರ್ಚಗಳನ್ನು ನಿರ್ಮಾಣ ಮಾಡಿದರು. ಅವರು ಕಾರ್ಮಿಕರ ವಸತಿ ನಿರ್ಮಾಣ ಮಾಡಿ ಅಲ್ಲಿಯೂ ಚರ್ಚ ನಿರ್ಮಾಣ ಮಾಡಿದರು. ಅವರು ಭಾರತವನ್ನು ಕ್ರೈಸ್ತ ಮಯಗೊಳಿಸಲು ಅನೇಕ ತಂತ್ರಗಳನ್ನು ಆಯ್ದುಕೊಂಡರು. ಅದನ್ನೆ ಇಂದಿನ ತಮಿಳುನಾಡಿನ ಸ್ಟಾಲಿನ್‌ ಸರಕಾರ ಮಾಡುತ್ತಿದೆ.

೨. ತಮಿಳುನಾಡಿನ ಕ್ರೈಸ್ತ ಸರಕಾರ  

ಪ್ರಸ್ತುತ ಕೇಂದ್ರ ಸರಕಾರ ಭಾರತದ ದೊಡ್ಡ ಮಂದಿರಗಳ ಜೀರ್ಣೋದ್ಧಾರಕ್ಕಾಗಿ ಗುರುತಿಸುತ್ತಿದೆ. ಇದೇ ಗುಪ್ತ ಸಾಮ್ರಾಜ್ಯ, ಛತ್ರಪತಿ ಶಿವಾಜಿ ಮಹಾರಾಜ, ಪುಣ್ಯಶ್ಲೋಕ ಅಹಿಲ್ಯಾಬಾಯಿ ಹೋಳಕರ್‌, ಮಹಾರಾಣಾ ಪ್ರತಾಪ ಮುಂತಾದ ರಾಜರ ಕಾಲದಲ್ಲಿ ನಡೆಯಿತು. ಹಿಂದಿನ ಕಾಲದ ರಾಜರು ಗೆದ್ದು ಬಂದಾಗ ಮೊದಲು ಮಂದಿರಗಳನ್ನು ನಿರ್ಮಿಸುತ್ತಿದ್ದರು ಹಾಗೂ ಅವುಗಳ ಪರಿಸರದಲ್ಲಿ ಕೋಟೆಗಳನ್ನು ನಿರ್ಮಿಸುತ್ತಿದ್ದರು. ಅವರು ಅಲ್ಲಿ ಶಿಲಾಲೇಖನಗಳನ್ನೂ ಮಾಡಿಸುತ್ತಿದ್ದರು, ಅದೇ ರೀತಿ ಧರ್ಮದ ಪ್ರಚಾರ ಮಾಡುತ್ತಿದ್ದರು. ಸದ್ಯ ತಮಿಳುನಾಡು ಸರಕಾರ ಕ್ರೈಸ್ತ ಆಗಿರುವುದರಿಂದ ಅದು ಕ್ರೈಸ್ತ ಪಂಥಕ್ಕೆ ಪ್ರೋತ್ಸಾಹ ನೀಡುತ್ತಿದೆ. ಅವರಿಗೆ ಸನಾತನ ಧರ್ಮವನ್ನು ನಷ್ಟಗೊಳಿಸಲಿಕ್ಕಿದೆ. ಆದರೆ ಕೇಂದ್ರದಲ್ಲಿ ಭಾರತೀಯತ್ವವನ್ನು ಪೋಷಿಸುವ ಸರಕಾರವಿದೆ, ಇದು ನಮ್ಮ ಭಾಗ್ಯ. ಆದ್ದರಿಂದ ಬಂಗಾಲ ಅಥವಾ ಕೇರಳ ಸರಕಾರ ಮಾಡಲು ಸಾಧ್ಯವಾಗದಿರುವುದನ್ನು ಇವರಿಗೆ ಮಾಡಲಿಕ್ಕಿದೆ.

೩. ತಮಿಳುನಾಡಿನಲ್ಲಿ ಹಿಂದೂ ಮಂದಿರಗಳ ೪೭ ಸಾವಿರ ಎಕ್ರೆ ಭೂಮಿ ನಾಪತ್ತೆ ! 

ಸುಮಾರು ೧ ವರ್ಷದ ಹಿಂದೆ ತಮಿಳುನಾಡು ಉಚ್ಚ ನ್ಯಾಯಾಲಯ ‘ಹಿಂದೂ ಧಾರ್ಮಿಕ ಧರ್ಮದಾಯ ದತ್ತಿ ವಿಭಾಗ’ಕ್ಕೆ ಹಿಂದೂ ಮಂದಿರಗಳ ೪೭ ಸಾವಿರ ಎಕ್ರೆ ಭೂಮಿ ಕಾಣೆಯಾಗಿರುವ ವಿಷಯದಲ್ಲಿ ಸ್ಪಷ್ಟೀಕರಣ ಕೇಳಿತು. ‘ಹಿಂದೂ ಧಾರ್ಮಿಕ ದತ್ತಿ ವಿಭಾಗ’ದ ಅಧಿಕಾರಿಯಲ್ಲಿ ಈ ಭೂಮಿಯ ದಾಖಲೆ ಇರಬೇಕಿತ್ತು; ಆದರೆ ಅವರಲ್ಲಿ ೪೭ ಸಾವಿರ ಎಕ್ರೆ ಭೂಮಿಯ ದಾಖಲೆ ಇಲ್ಲದಿರುವುದು ಗಮನಕ್ಕೆ ಬಂದಿತು. ಆ ಭೂಮಿಯ ಮೇಲೆ ಅತಿಕ್ರಮಣವಾಗುವುದನ್ನು ಬಿಟ್ಟುಬಿಡಿ; ಆದರೆ ಅದರ ದಾಖಲೆಯೂ ಕಾಣೆಯಾಗಿದೆ. ಅಂದರೆ ಈ ವಿಭಾಗದವರ ಬಳಿ ೨ ಲಕ್ಷದ ೩ ಸಾವಿರ ಎಕ್ರೆ ಭೂಮಿಯ ದಾಖಲೆ ಇದ್ದರೆ, ಅದರಿಂದ ೪೭ ಸಾವಿರ ಎಕ್ರೆ ಭೂಮಿ ಕಾಣೆಯಾಗಿದೆ. ಇದರ ಅರ್ಥ ಆ ವಿಭಾಗದ ಅಧಿಕಾರಿ ಆ ಭೂಮಿಯನ್ನು ಮಾರಾಟ ಮಾಡಿದರು ಅಥವಾ ಯಾರಿಗಾದರೂ ಹಸ್ತಾಂತರ ಮಾಡಿದ್ದಾರೆ, ಎಂಬುದು ಸಿದ್ಧವಾಗುತ್ತದೆ. ತಮಿಳುನಾಡು ರಾಜ್ಯದಲ್ಲಿ ಇದು ಅಸಾಧ್ಯವಿಲ್ಲ.

‘ಹಿಂದೂ ಧಾರ್ಮಿಕ ಹಾಗೂ ಧರ್ಮದಾಯ ದತ್ತಿ’ ಕಾನೂನಿನ ಅಂತರ್ಗತ ಮಂದಿರಗಳ ಸಂಪತ್ತನ್ನು ಹಸ್ತಾಂತರಗೊಳಿಸುವ ವಿಷಯದಲ್ಲಿ ಇತ್ತೀಚೆಗೆ ಒಂದು ಉದಾಹರಣೆ ಬೆಳಕಿಗೆ ಬಂದಿತು. ಈ ವಿಷಯದಲ್ಲಿ ಒಂದು ಕಂಪನಿ ಉಚ್ಚ ನ್ಯಾಯಾಲಯಕ್ಕೆ ಬಂದಿತ್ತು. ‘ಹಿಂದೂ ಧಾರ್ಮಿಕ ಹಾಗೂ ಧರ್ಮದಾಯ ದತ್ತಿ’ ವಿಭಾಗದ ಅಂತರ್ಗತ ಈ ಭೂಮಿ ಪ್ರತಿ ತಿಂಗಳು ೧೫ ರೂಪಾಯಿ ಬಾಡಿಗೆಗೆ ಅವರ ವಶದಲ್ಲಿತ್ತು. ಒಂದು ‘ಡೀಡ್‌’ (ಲಿಖಿತ ಒಪ್ಪಂದ) ಆಗಿತ್ತು. ಆ ‘ಡೀಡ್‌’ ‘ಲೀಸ್‌’ (ಬಾಡಿಗೆಪಟ್ಟಿ) ಆಗಿತ್ತು ಹಾಗೂ ಆ ‘ಲೀಸ್‌ನ್ನು ಅವರು ಖರೀದಿ ಮಾಡಿದ್ದರು. ಯಾರ ಹೆಸರಿನಲ್ಲಿ ಆ ‘ಲೀಸ್‌’ ಆಗಿತ್ತೊ, ಆ ವ್ಯಕ್ತಿ ೧೯೮೬ ರಲ್ಲಿ ಮರಣಹೊಂದಿದ್ದನು. ಅವರ ನಂತರ ಅವರ ಉತ್ತರಾಧಿಕಾರಿ ಆ ‘ಲೀಸ್‌’ ತಮಗೆ ಸೇರಬೇಕೆಂದು ಹೇಳಿದರು. ನ್ಯಾಯಾಲಯ ಅದಕ್ಕೆ ಆದೇಶ ನೀಡಿತು. ನ್ಯಾಯಾಲಯದ ಏಕ ಸದಸ್ಯ ವಿಭಾಗೀಯ ಪೀಠ ಆದೇಶ ನೀಡಿತು ಹಾಗೂ ಆ ಆದೇಶವನ್ನು ದ್ವಿಸದಸ್ಯಯ ವಿಭಾಗೀಯ ಪೀಠವು ರದ್ದುಪಡಿಸಿತು.

ಈ ಪ್ರಕರಣನ್ನು ದ್ವಿಸದಸ್ಯ ಪೀಠವು ಬಿಗಿ ಹಿಡಿಯಿತು, ಅದು ಧರ್ಮದಾಯ ಅಧಿಕಾರಿಗೆ, ‘ಮಂದಿರದ ಸಂಪತ್ತನ್ನು ರಕ್ಷಣೆ ಮಾಡುವ ಅವಶ್ಯಕತೆಯಿದೆ. ಇದು ಮಂದಿರದ ಸಂಪತ್ತಾಗಿದೆ. ಮಂದಿರದ ಭೂಮಿಯ ಈ ಕಳ್ಳ ವ್ಯವಹಾರ ನಿಲ್ಲಬೇಕು, ಮಂದಿರಗಳ ಭೂಮಿಯನ್ನು ಮಾರಾಟ ಮಾಡುವುದು ಹಾಗೂ ಹಸ್ತಾಂತರಿಸುವುದು ನಿಲ್ಲಬೇಕು’ ಎಂದು ಹೇಳಿತು. ಈ ಮೇಲಿನ ಕೃತಿಯನ್ನು ನೋಡಿದರೆ, ೪೭ ಸಾವಿರ ಎಕ್ರೆ ಭೂಮಿ ಕಾಣೆಯಾಗುವುದರಲ್ಲಿಯೂ ಹೀಗೆಯೆ ಏನಾದರು ನಡೆದಿರಬೇಕು. ಅದಕ್ಕಾಗಿ ಹಿಂದೂ ಧಾರ್ಮಿಕ ಧರ್ಮದಾಯ ದತ್ತಿ ವಿಭಾಗದ ಅಧಿಕಾರಿಗಳ ಕೈವಾಡವೂ ಇದರಲ್ಲಿ ಇರಬೇಕು.

– ನ್ಯಾಯವಾದಿ ಡಿ.ಕೆ. ದುಬೆ, ಸರ್ವೋಚ್ಚ ನ್ಯಾಯಾಲಯ.

(ಆಧಾರ : ನ್ಯಾಯವಾದಿ ಡಿ.ಕೆ.ದುಬೆ ಇವರ ‘ಲೀಗಲ್‌ ಇಂಟರ್‌ಪ್ರೆಟೇಶನ್‌’ ಯೂ ಟ್ಯೂಬ್‌ ಚಾನಲ್‌)