‘ಸನಾತನ ಪ್ರಭಾತ’ ನಿಯತಕಾಲಿಕೆಗಳ ಮಾಜಿ ಸಮೂಹ ಸಂಪಾದಕ ಡಾ. ದುರ್ಗೇಶ ಸಾಮಂತ ಇವರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರಿಂದ ಕಲಿಯಲು ಸಿಕ್ಕ ಅಂಶಗಳು

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರು ೧೯೯೮ ರಲ್ಲಿ ಅಧ್ಯಾತ್ಮ ಪ್ರಸಾರ, ರಾಷ್ಟ್ರ ಮತ್ತು ಧರ್ಮ ಜಾಗೃತಿಯ ವಿಷಯಗಳ ಕುರಿತು ತಮ್ಮ ಕಾರ್ಯವನ್ನು ಸಾಪ್ತಾಹಿಕ ‘ಸನಾತನ ಪ್ರಭಾತ’ದ ಮಾಧ್ಯಮದಿಂದ ವಿಸ್ತರಿಸಿದರು. ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಪ್ರಾರಂಭದಲ್ಲಿ ಸ್ವತಃ ೧೯೯೮ ರಲ್ಲಿ ಪ್ರಾರಂಭವಾದ ಸಾಪ್ತಾಹಿಕ ‘ಸನಾತನ ಪ್ರಭಾತ’ ಮತ್ತು ೧೯೯೯ ರಲ್ಲಿ ಪ್ರಾರಂಭವಾದ ದೈನಿಕ ‘ಸನಾತನ ಪ್ರಭಾತ’ ದಿನಪತ್ರಿಕೆಯ ೪ ಆವೃತ್ತಿಗಳು, ಹಾಗೆಯೇ ಹಿಂದಿ ಮತ್ತು ಆಂಗ್ಲ ಮಾಸಿಕ ‘ಸನಾತನ ಪ್ರಭಾತ’ ಇವುಗಳ ಸಮೂಹ ಸಂಪಾದಕರಾಗಿದ್ದರು.’ ಈ ಕಾಲಾವಧಿಯಲ್ಲಿ ನಾನು (ಡಾ. ದುರ್ಗೇಶ ಸಾಮಂತ) ಸಂಪಾದಕೀಯ ವಿಭಾಗದಲ್ಲಿ ಸೇವೆಯನ್ನು ಮಾಡುತ್ತಿದ್ದೆ. ಆಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಂದ ಕಲಿಯಲು ಸಿಕ್ಕಿದ ಕೆಲವು ಅಂಶಗಳನ್ನು ಕಳೆದ ವಾರ ನೋಡಿದೆವು, ಈ ವಾರದ ಅದರ ಮುಂದಿನ ಭಾಗ ನೋಡೋಣ (ಭಾಗ ೨)
೩. ‘ಸಾಧಕನಿಗೆ ಉಪಯುಕ್ತವಾಗಬಹುದು’ ಎಂದು ಇತರ ವಾರ್ತಾಪತ್ರಿಕೆಗಳ ಯಾವುದೇ ಸುದ್ದಿಯನ್ನು ಆತನ ಹೆಸರಿನಲ್ಲಿ ಗುರುತು ಮಾಡುವ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು
ಯಾವುದಾದರೂ ಲೇಖನ ಅಥವಾ ಅದರಲ್ಲಿನ ಅಂಶವನ್ನು ಒಬ್ಬ ಸಾಧಕನಿಗೆ ಹೇಳಬೇಕಾಗಿದ್ದರೆ, ಆ ಸಾಧಕನ ಹೆಸರಿನಿಂದ ಗುರುತು ಮಾಡಲಾಗಿರುತ್ತಿತ್ತು. ಒಂದು ಸಲ ಸಾಂಗ್ಲಿಯ ಹಿರಿಯ ವೈದ್ಯರ ನಿಧನವಾಯಿತು. ಆ ಸುದ್ದಿಯು ಮಹಾರಾಷ್ಟ್ರ ಟೈಮ್ಸ್ ಇದರ ಒಳಗಿನ ಪುಟದಲ್ಲಿ ೬ ರಿಂದ ೮ ಸಾಲುಗಳಷ್ಟಿತ್ತು. ಅದಕ್ಕೆ ಗುರುತು ಮಾಡಿ ಅದಕ್ಕೆ ಪ.ಪೂ. ಡಾಕ್ಟರರು ‘ದುರ್ಗೇಶ’ (ಡಾ. ದುರ್ಗೇಶ ಸಾಮಂತ) ಎಂದು ಬರೆದಿದ್ದರು. ಇದರಿಂದ ನನಗೆ ‘ನನಗೆ ಕಲಿಸಿದ ಆ ಶಿಕ್ಷಕರ ನಿಧನವಾಗಿದೆ’ ಎಂದು ತಿಳಿಯಿತು ಮತ್ತು ನಾನು ಅವರ ಸಂಬಂಧಿಕರಿಗೆ ಶೋಕ ಸಂದೇಶ ಕಳುಹಿಸಿದೆ. ಸ್ವಾಭಾವಿಕವಾಗಿ, ಕೆಲವು ಅಂಶಗಳನ್ನು ಕಲಿಯಲಿಕ್ಕಾಗಿಯೂ ಸಾಧಕನ ಹೆಸರಿನ ಮೇಲೆ ಗುರುತು ಮಾಡಲಾಗಿರುತ್ತಿತ್ತು. ಕೆಲವು ಬಾರಿ ಇತರ ವಾರ್ತಾಪತ್ರಿಕೆಗಳು ಪ್ರಾಮುಖ್ಯತೆ ನೀಡಿರುವ ಸುದ್ದಿ ಮತ್ತು ನಮ್ಮ ದಿನಪತ್ರಿಕೆಯ ಪ್ರಮುಖ ಸುದ್ದಿ, ಇವುಗಳನ್ನೂ ಹೋಲಿಕೆ ಮಾಡಿ ’ನಮ್ಮದು ಎಲ್ಲಿ ತಪ್ಪಾಗಿದೆ ?’ ಎಂದು ಹುಡುಕಲು ಹೇಳುತ್ತಿದ್ದರು.

೪. ಸುದ್ದಿಗಳಿಗೆ ಸಂಪಾದಕೀಯ ದೃಷ್ಟಿಕೋನ ನೀಡಲು ಕಲಿಸಿ ವಿಚಾರಗಳ ವಿಕಸನಕ್ಕೆ ಚಾಲನೆ ನೀಡುವುದು
ಇತರ ವಾರ್ತಾಪತ್ರಿಕೆಗಳ ಕೆಲವು ಸುದ್ದಿಗಳ ಮೇಲೆ ಪ.ಪೂ. ಡಾಕ್ಟರರು ಒಂದು ವಾಕ್ಯದಲ್ಲಿ ತಮ್ಮ ದೃಷ್ಟಿಕೋನಗಳನ್ನು ಬರೆದಿರುತ್ತಿದ್ದರು. ನಂತರ ಆ ದೃಷ್ಟಿಕೋನಗಳನ್ನು ತಿಳಿದುಕೊಂಡು ಸಂಪಾದಕೀಯ ವಿಭಾಗದ ಯಾವುದಾದರೂ ಒಬ್ಬ ಸಾಧಕನು ದೃಷ್ಟಿಕೋನದ ಚೌಕಟ್ಟುಗಳನ್ನು ಸಿದ್ಧಪಡಿಸುತ್ತಿದ್ದನು. ಅವುಗಳನ್ನು ಮತ್ತೆ ಪ.ಪೂ. ಡಾಕ್ಟರರಿಗೆ ಪರಿಶೀಲನೆಗಾಗಿ ಇಡಲಾಗುತ್ತಿತ್ತು. ಅವರು ಸುಧಾರಣೆ ಮಾಡಿದ ನಂತರ, ಮರುದಿನ ಆ ಚೌಕಟ್ಟುಗಳು ದೈನಿಕ ’ಸನಾತನ ಪ್ರಭಾತ’ದಲ್ಲಿ ಮುದ್ರಿಸಲ್ಪಡುತ್ತಿದ್ದವು.
ಇದರಿಂದ ಸಾಧಕರಿಗೆ ಮತ್ತು ಓದುಗರಿಗೆ ’ಸುದ್ದಿಗಳನ್ನು ಹೇಗೆ ನೋಡಬೇಕು ?’ ಎಂದು ಕಲಿಯಲು ಸಿಕ್ಕಿತು. ಸ್ವಲ್ಪ ಸಮಯದ ನಂತರ ಅವರು ಸುದ್ದಿಗಳ ಮೇಲೆ ಏನನ್ನೂ ಬರೆಯದೇ ಸುಮ್ಮನೆ ಗುರುತು ಮಾಡಿ ಕಳುಹಿಸಲು ಪ್ರಾರಂಭಿಸಿದರು. ಆಗ ’ಅದರಲ್ಲಿ ಯಾವ ದೃಷ್ಟಿಕೋನವು ಅಪೇಕ್ಷಿತವಾಗಿರಬಹುದು ?’ಎಂದು ವಿಚಾರ ಮಾಡಿ ಸಂಪಾದಕೀಯ ವಿಭಾಗದ ಸಂಬಂಧಿತ ಸಾಧಕನು ಚೌಕಟ್ಟನ್ನು ಸಿದ್ಧಪಡಿಸುತ್ತಿದ್ದನು. ನಂತರ ಆ ಚೌಕಟ್ಟನ್ನು ಪರಿಶೀಲನೆಗಾಗಿ ಪ.ಪೂ. ಡಾಕ್ಟರರ ಕಡೆಗೆ ಕಳುಹಿಸುತ್ತಿದ್ದನು. ಇದರಿಂದ ಕಲಿಕೆಯ ಮುಂದಿನ ಪ್ರಕ್ರಿಯೆಯಾಯಿತು. ನಂತರ ಅವರು ’ದೈನಿಕದಲ್ಲಿ ಪ್ರಕಟಿಸುವ ಮೊದಲು ನನ್ನ ಬಳಿ ಪರಿಶೀಲನೆಗಾಗಿ ಚೌಕಟ್ಟುಗಳನ್ನು ಕಳುಹಿಸಬೇಡಿ’ ಎಂದು ಹೇಳಿದರು. ಆ ಚೌಕಟ್ಟುಗಳನ್ನು ಮರುದಿನ ಅವರು ದಿನಪತ್ರಿಕೆಯಲ್ಲಿ ಓದುತ್ತಿದ್ದರು. ಇದರಿಂದ ವಾರ್ತಾಪತ್ರಿಕೆಗಳಲ್ಲಿನ ಲೇಖನಗಳಿಂದ ಸಮಸ್ಯೆಗಳನ್ನು ಹೇಗೆ ಹುಡುಕಬೇಕು ? ಅದರ ಮೇಲೆ ಸಮಾಜ, ರಾಷ್ಟ್ರ ಮತ್ತು ಧರ್ಮ ಇವುಗಳ ಹಿತದ ದೃಷ್ಟಿಯಿಂದ ನಿಖರವಾಗಿ ಯಾವ ವಿಚಾರಗಳನ್ನು ಮಂಡಿಸಬೇಕು ? ಎನ್ನುವ ಬಗ್ಗೆ ಮಾರ್ಗದರ್ಶನ ದೊರಕಿತು. ನಾವೂ ಸಹ ಇದೇ ರೀತಿ ಇತರ ದಿನಪತ್ರಿಕೆಗಳು, ಹಾಗೆಯೇ ನಮ್ಮ ದಿನಪತ್ರಿಕೆ (ದೈನಿಕ ‘ಸನಾತನ ಪ್ರಭಾತ’) ಓದಿ, ಮೇಲಿನಂತೆ ಚೌಕಟ್ಟುಗಳನ್ನು ಸಿದ್ಧಪಡಿಸಬೇಕು, ಎಂದು ಪ.ಪೂ. ಡಾಕ್ಟರರು ಪ್ರೋತ್ಸಾಹಿಸಿದರು. ಇದರಿಂದ ವಿಚಾರಗಳು ವಿಕಸನಗೊಳ್ಳಲು ಚಾಲನೆ ದೊರೆಯಿತು. ಎಲ್ಲಕ್ಕಿಂತ ಮಹತ್ವದ ವಿಷಯವೆಂದರೆ, ವಾರ್ತಾಪತ್ರಿಕೆಯೇ ಅಲ್ಲ, ಬೇರೆ ಯಾವುದೇ ವಾಚನವನ್ನು ಮಾಡುವಾಗ ಅದು ಚೆನ್ನಾಗಿದೆ ಎಂದು ಅಥವಾ ಕೇವಲ ಮನರಂಜನೆಗಾಗಿ ಓದುವುದು; ಅಂದರೆ ಸಮಯವನ್ನು ಹಾಳು ಮಾಡುವುದಾಗಿದೆ ಎಂದು ತಿಳಿಯಿತು. ಹಾಗೆಯೇ ಓದುತ್ತಿರುವಾಗ ಅದರಲ್ಲಿ ಒಳ್ಳೆಯದು ಏನಾದರೂ ಕಂಡುಬಂದರೆ, ಅದನ್ನು ದಾಖಲಿಸುವ ಅಭ್ಯಾಸವಾಯಿತು.
೫. ‘ಸೇವೆಯಲ್ಲಿ ನಿಖರವಾಗಿ ಎಲ್ಲಿ ಸುಧಾರಣೆಯನ್ನು ಮಾಡಬೇಕು’ ಎಂದು ಹೇಳುವಾಗ ವಿಶೇಷ ಆಧ್ಯಾತ್ಮಿಕ ದೃಷ್ಟಿಕೋನವನ್ನು ನೀಡುತ್ತಿದ್ದರು !
೫ ಅ. ಸೇವೆಯು ಸುಗಮವಾಗದಿರುವುದರ ಹಿಂದಿನ ಕಾರಣ ತಿಳಿಯದಿರುವುದು !
ದೊನಾಪಾವಲಾ ಎಂಬಲ್ಲಿ ಎಲ್ಲವೂ ಹೊಸದಾಗಿ ಪ್ರಾರಂಭವಾಗಿತ್ತು. ದಿನಪತ್ರಿಕೆ ಪ್ರತಿದಿನ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವಲ್ಲಿ, ಯಾವುದಾದರೂ ಕಾರಣದಿಂದ ಕಠಿಣವಾಗುತ್ತಿತ್ತು. ಸೇವಾಕೇಂದ್ರದಲ್ಲಿ ಇತರ ವಿಭಾಗಗಳ ಸೇವೆಗಳು ಸಮಯಕ್ಕೆ ಸರಿಯಾಗಿ ಆಗುವುದರಲ್ಲಿಯೂ ಸಮಸ್ಯೆಗಳಿದ್ದವು. ’ತಾಂತ್ರಿಕ ತೊಂದರೆಗಳು ಎದುರಾಗದೇ ಸೇವೆಗಳು ಸುಗಮವಾಗಿ ಆದವು’, ಎಂದು ಎಂದಾದರೊಂದು ದಿನ ಆಗಿರಬಹುದು. ಅಲ್ಲದೇ ನಾವೆಲ್ಲ ಸಾಧಕರು ದಿನಪತ್ರಿಕೆಗೆ ಸಂಬಂಧಿಸಿದ ಎಲ್ಲ ವಿಷಯಗಳ ಕುರಿತು ಅಜ್ಞಾನಿಗಳಾಗಿದ್ದೆವು ಅಥವಾ ಅಗತ್ಯಕ್ಕಿಂತ ಕಾಲುಭಾಗದಷ್ಟು ಮಾತ್ರ ಜ್ಞಾನವನ್ನು ಪಡೆದಿದ್ದೆವು. ದಿನಪತ್ರಿಕೆಯ ಎಲ್ಲ ಉಪವಿಭಾಗಗಳಲ್ಲಿನ ಸಾಧಕರ ಸೇವೆಗಳು ಪರಸ್ಪರ ಒಬ್ಬರ ಮೇಲೊಬ್ಬರು ಅವಲಂಬಿಸಿದ್ದವು. ಸ್ವಾಭಾವಿಕವಾಗಿ ಪ್ರತಿಯೊಬ್ಬರಿಗೂ ’ಅವರ ಹಿಂದಿನ ಉಪವಿಭಾಗದಿಂದ ಅವರಿಗೆ ಸಮಸ್ಯೆಗಳು ಉಂಟಾಗುತ್ತಿವೆ’, ಎಂದು ಅನಿಸುತ್ತಿತ್ತು. ಪುಟಗಳ ರಚನೆ ಮಾಡುವವರು (ಫಾರ್ಮೆಟರ್) ಮತ್ತು ಸಂಪಾದಕೀಯ ಸಂಸ್ಕರಣೆ ಮಾಡುವವರ ನಡುವಿನ ಭಿನ್ನಾಭಿಪ್ರಾಯಗಳು ದಿನನಿತ್ಯದ ವಿಷಯವೇ ಆಗಿತ್ತು. ಒಟ್ಟಾರೆ ಎಲ್ಲ ಹೊಣೆಗಾರಿಕೆಯು ನನ್ನ ಮೇಲಿದ್ದರಿಂದ, ‘ಯಾವುದರಿಂದಾಗಿ ? ಏನು ? ಎಲ್ಲಿ ತಪ್ಪಾಗುತ್ತಿದೆ ? ಮತ್ತು ನಿಖರವಾಗಿ ಎಲ್ಲಿ ಮತ್ತು ಯಾವ ಉಪಾಯವನ್ನು ಮಾಡಿದರೆ, ಎಲ್ಲವೂ ಸ್ವಲ್ಪವಾದರೂ ಸುಗಮವಾಗುವುದು’, ಎನ್ನುವುದು ನನಗೆ ತಿಳಿಯುತ್ತಿರಲಿಲ್ಲ. ಪ.ಪೂ. ಡಾಕ್ಟರರು ಪ್ರತಿದಿನ ದಿನಪತ್ರಿಕೆಯ ಮೇಲೆ ಗುರುತು ಮಾಡಿ ೧೦-೧೫ ತಪ್ಪುಗಳನ್ನು ತೋರಿಸಿಕೊಡುತ್ತಿದ್ದರು. ಇದರಿಂದ ನನಗೆ ತುಂಬಾ ಸಾಕಾಗಿ ಹೋಗಿತ್ತು.
೫ ಆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ‘ನಿಖರವಾಗಿ ಎಲ್ಲಿ ತಪ್ಪಾಗುತ್ತಿದೆ’ ಎಂಬುದನ್ನು ಹೇಳುವುದು ಮತ್ತು ಅದರ ಹಿಂದಿನ ಆಧ್ಯಾತ್ಮಿಕ ದೃಷ್ಟಿಕೋನ !
ಆಗ ನಾನು ಪ.ಪೂ. ಡಾಕ್ಟರರಲ್ಲಿ ನಿಖರವಾಗಿ ಎಲ್ಲಿ ತಪ್ಪಾಗುತ್ತಿದೆ ? ಎಲ್ಲಿ ಸುಧಾರಣೆಯನ್ನು ಮಾಡಬೇಕು ? ಎಂದು ಕೇಳಿದೆ. ಅವರು ನಾನು ಮತ್ತು ಸಂಪಾದಕೀಯ ವಿಭಾಗದ ಇತರ ಸಾಧಕರು ಎಲ್ಲಿ ಸಭೆಗಾಗಿ ಕುಳಿತುಕೊಳ್ಳುತ್ತಿದ್ದೆವೋ, ಆ ಮೇಜಿನ ಕಡೆಗೆ ಕೈತೋರಿಸಿ, ಅಲ್ಲಿ ಸುಧಾರಣೆಯಾಗಬೇಕು ! ಎಂದು ಹೇಳಿದರು. ನನಗೆ ಆಶ್ಚರ್ಯವಾಯಿತು. ‘ಇತರ ಉಪವಿಭಾಗಗಳ ಸಂಬಂಧದಲ್ಲಿಯೂ ಹೇಳುತ್ತಾರೆ’ ಎಂದು ನಾನು ನಿರೀಕ್ಷಿಸಿದ್ದೆನು. ಆಗ ನಾನು ನಿಮಗೆ ಹೇಗೆ ತಿಳಿಯಿತು ?ಎಂದು ಕೇಳಿದೆನು. ಆಗ ಅವರು ನಾನು ಇದರಲ್ಲಿ ಸಿಲುಕಿಲ್ಲವಾದ್ದರಿಂದ ! ನನಗೆ ತಿಳಿಯಿತು ಎಂದು ಹೇಳಿದರು. ಈ ವಾಕ್ಯದ ಕಾರ್ಯಕ್ಕೆ ಸಂಬಂಧಿಸಿದ ವ್ಯಾವಹಾರಿಕ ಅರ್ಥ ಮತ್ತು ಅದರ ಹಿಂದಿರುವ ವಿಚಾರಧಾರೆಯು ತಕ್ಷಣವೇ ತಿಳಿಯಿತು. ಅದಕ್ಕನುಸಾರ ನಾವು ಕೃತಿಯನ್ನು ಸಹ ಪ್ರಾರಂಭಿಸಿದೆವು; ಆದರೆ ಇದರ ಹಿಂದಿರುವ ಆಧ್ಯಾತ್ಮಿಕ ದೃಷ್ಟಿಕೋನವು ಅದಕ್ಕಿಂತಲೂ ಬಹಳ ಮಹತ್ವದ್ದಾಗಿತ್ತು, ಎಂಬುದು ಗಮನಕ್ಕೆ ಬಂದಿತು. ನನಗೆ ಅರಿವಾದ ದೃಷ್ಟಿಕೋನ ಹೀಗಿದೆ: ‘ಸಿಕ್ಕಿನಲ್ಲಿ ಸಿಲುಕಿದರೂ ನನ್ನ ಕಾಲುಗಳು ಮುಕ್ತವಾಗಿವೆ’ ಎಂಬ ಪ.ಪೂ. ಬಾಬಾರವರ (ಪ.ಪೂ. ಭಕ್ತರಾಜ ಮಹಾರಾಜರ) ವಚನದಂತೆ, ಪ.ಪೂ. ಡಾಕ್ಟರರು ಈ ಮಾಯೆಯಲ್ಲಿ ಸಿಲುಕಿಲ್ಲ. ಅದರಿಂದ ಅವರಿಗೆ ಎಲ್ಲಿ ? ಏನು ? ಮತ್ತು ಎಷ್ಟರ ಮಟ್ಟಿಗೆ ದುರಸ್ತಿ ಮಾಡಬೇಕು ? ಎಂಬುದು ಚೆನ್ನಾಗಿ ತಿಳಿಯುತ್ತದೆ. ಮಾಯೆಯಲ್ಲಿ ಸಿಲುಕದಿರುವವನಿಗೆ ಸತ್ಯದ ಜ್ಞಾನ ಆಗಿರುತ್ತದೆ; ಆದ್ದರಿಂದ ಆ ಜ್ಞಾನಿಯು ಮಾಯೆಯಲ್ಲಿ ಸಿಲುಕಿರುವವನಿಗೆ ನಿಖರವಾದ ದಾರಿಯನ್ನು ತೋರಿಸಲು ಸಾಧ್ಯವಾಗುತ್ತದೆ, ಅದೇ ರೀತಿ ಇದೂ ಇದೆ. ಸಂಸಾರ ಜಂಜಾಟದಲ್ಲಿ ಸಿಲುಕಿದವರಿಗೆ ಅವರಲ್ಲಿನ ದೋಷ, ಅಹಂ ಮುಂತಾದವುಗಳಿಂದಾಗಿ ‘ನಿಖರವಾಗಿ ಹೇಗೆ ಮುಂದೆ ಹೋಗಬೇಕು’ ಎಂಬುದು ತಿಳಿಯುವುದಿಲ್ಲ, ಎಂಬುದು ನನ್ನ ಗಮನಕ್ಕೆ ಬಂತು.
ದೈನಿಕ ‘ಸನಾತನ ಪ್ರಭಾತ’ದ ನಿಮಿತ್ತವಾಗಿ ಪ.ಪೂ. ಡಾ. ಆಠವಲೆ ಅವರ ಬಗ್ಗೆ ಕೃತಜ್ಞತೆಯಿಂದ ಅವರು ಏನು ಕಲಿಸಿದರು ಎಂಬುದನ್ನು ಇಲ್ಲಿ ಮಂಡಿಸಲು ಪ್ರಯತ್ನಿಸಿದ್ದೇನೆ. ಕೇವಲ ಸಂಪಾದಕನಾಗಿ ಮಾತ್ರವಲ್ಲ, ಒಬ್ಬ ಸಾಧಕನಾಗಿ ಸಹ ಪ.ಪೂ. ಡಾ. ಆಠವಲೆ ಅವರು ನನ್ನನ್ನು ರೂಪಿಸಿದ್ದಾರೆ, ಆ ಬಗ್ಗೆ ಅವರ ಚರಣಗಳಲ್ಲಿ ಕೃತಜ್ಞತೆಗಳು !
– ಡಾ. ದುರ್ಗೇಶ ಸಾಮಂತ, ’ಸನಾತನ ಪ್ರಭಾತ’ ನಿಯತಕಾಲಿಕಗಳ ಮಾಜಿ ಸಮೂಹ ಸಂಪಾದಕರು
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !