ಜನವರಿ ೨೬ ರಂದು ಗಣರಾಜ್ಯೋತ್ಸವವಿದೆ. ಆ ನಿಮಿತ್ತ …

‘ಸಂವಿಧಾನದ ಮೂಲಕ ಭಾರತದಂತಹ ಪ್ರಜಾಪ್ರಭುತ್ವಪ್ರಧಾನ ದೇಶವನ್ನು ನಡೆಸಲಾಗುತ್ತದೆ. ಸಂವಿಧಾನವು ಭಾರತವನ್ನು ‘ಜಾತ್ಯತೀತ (ಧರ್ಮನಿರಪೇಕ್ಷ) ದೇಶ’ವೆಂದು ಘೋಷಣೆ ಮಾಡಿದೆ. ಇದರ ಅರ್ಥ ‘ದೇಶದಲ್ಲಿ ಎಲ್ಲ ಕಡೆಗಳಲ್ಲಿ ಸರ್ವಧರ್ಮಸಮಭಾವವನ್ನು ಪಾಲಿಸಲಾಗುವುದು, ಯಾವುದೇ ಸರಕಾರ ಬಂದರೂ ಎಲ್ಲ ನಾಗರಿಕರಿಗೆ ಸಮಾನ ವರ್ತನೆಯನ್ನು ನೀಡುವುದು ಮತ್ತು ಅವರಲ್ಲಿ ಧರ್ಮದ ಆಧಾರದಲ್ಲಿ ಯಾವುದೇ ಭೇದಭಾವವನ್ನು ಮಾಡಲಾಗುವುದಿಲ್ಲ’, ಎಂದಿದೆ. ದುರ್ಭಾಗ್ಯದಿಂದ ಭಾರತೀಯ ಸಂವಿಧಾನವು ಧರ್ಮದ ಆಧಾರದಲ್ಲಿ ಕೆಲವು ಸಮಾಜಗಳಿಗೆ ಕೆಲವು ವಿಶಿಷ್ಟ ಅನುಕೂಲತೆಗಳನ್ನು ಮತ್ತು ಸೌಲಭ್ಯಗಳನ್ನು ಉಪಲಬ್ಧ ಮಾಡಿಕೊಟ್ಟಿದೆ. ಭಾರತ ಜಾತ್ಯತೀತ ರಾಷ್ಟ್ರವಾಗಿದ್ದರೂ ಕೆಲವು ನಾಗರಿಕರಿಗೆ ಕೇವಲ ಧರ್ಮದ (ಪಂಥದ) ಆಧಾರದಲ್ಲಿ ವಿಶಿಷ್ಟ ಸ್ಥಾನವನ್ನು ನೀಡಲಾಗುತ್ತದೆ, ಇದು ಅನ್ಯಾಯವಾಗಿದೆ. ಈ ಪರಿಸ್ಥಿತಿಯ ಲಾಭವನ್ನು ರಾಜಕೀಯ ಪಕ್ಷಗಳು ಪಡೆಯುತ್ತಿವೆ. ಭಾರತ ಸ್ವತಂತ್ರವಾದಾಗಿನಿಂದ ಇಂದಿನವರೆಗೆ ಅಧಿಕಾರಕ್ಕಾಗಿ ರಾಜಕೀಯ ಪಕ್ಷಗಳು ಈ ವಿಶಿಷ್ಟ ಪಂಥೀಯರನ್ನು ಓಲೈಸಿ ಅವರನ್ನು ಮತಪೆಟ್ಟಿಗೆಗೆ ಉಪಯೋಗಿಸಿಕೊಳ್ಳುತ್ತಿವೆ. ಅದರ ಪರಿಣಾಮದಿಂದ ಇಂದು ಭಾರತೀಯ ಸಮಾಜ ‘ಅಲ್ಪಸಂಖ್ಯಾತ’ ಮತ್ತು ‘ಬಹುಸಂಖ್ಯಾತ’ ಹೀಗೆ ಎರಡು ಗುಂಪುಗಳಲ್ಲಿ ವಿಭಜನೆಗೊಂಡಿದೆ. ಅದರಿಂದ ದೇಶದಲ್ಲಿ ಎಲ್ಲೆಡೆ ಧಾರ್ಮಿಕ ವೈಮನಸ್ಸು ಮತ್ತು ಉದ್ವಿಗ್ನತೆ ಹೆಚ್ಚಾಗಿದೆ. ಭಾರತದಂತೆ ಜಗತ್ತಿನ ಇತರ ಯಾವುದೇ ದೇಶದಲ್ಲಿ ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಎಂಬ ಭೇದ ಕಂಡುಬರುವುದಿಲ್ಲ. ಇದು ಆಂಗ್ಲರ ‘ಒಡೆದಾಳುವ’ ನೀತಿಯ ದುಷ್ಪರಿಣಾಮವಾಗಿದೆ. ಎಲ್ಲ ರಾಜಕೀಯ ಪಕ್ಷಗಳು ಈ ನೀತಿಯನ್ನು ಬಹಳ ಜೋರಾಗಿ ಉಪಯೋಗಿಸಿ ರಾಜಕಾರಣ ಮಾಡುತ್ತಿವೆ. ನಮಗೆ ‘ಕಾನೂನಿನ ಮುಂದೆ ಎಲ್ಲರೂ ಸಮಾನರಾಗಿದ್ದಾರೆ’, ಎಂದು ಪದೇ ಪದೇ ಹೇಳಲಾಗುತ್ತದೆ; ಆದರೆ ಈ ಕಾನೂನು ಬಹುಸಂಖ್ಯಾತರ ವಿಷಯದಲ್ಲಿ ಎಷ್ಟು ಪಕ್ಷಪಾತಿಯಾಗಿದೆ, ಎಂಬುದನ್ನು ಎಂದಿಗೂ ಹೇಳುವುದಿಲ್ಲ. ಇದನ್ನು ತಿಳಿದುಕೊಳ್ಳಲು ಭಾರತೀಯ ಸಂವಿಧಾನದಲ್ಲಿನ ಕೆಲವು ವಿಸಂಗತ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳುವುದು ಆವಶ್ಯಕವಾಗಿದೆ.

೧. ಭಾರತೀಯ ಸಂವಿಧಾನದ ಅಸಮಂಜಸ ವ್ಯವಸ್ಥೆ
ಅ. ಸಂವಿಧಾನದ ಪರಿಚ್ಛೇದ (ಕಲಂ) ೧೪ ರಲ್ಲಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಅದರಲ್ಲಿ ‘ರಾಜ್ಯ ಯಾವುದೇ ವ್ಯಕ್ತಿಗೆ ಭಾರತದ ರಾಜ್ಯಕ್ಷೇತ್ರದಲ್ಲಿ ಕಾನೂನಿನ ಮುಂದೆ ಸಮಾನತೆ ಅಥವಾ ಕಾನೂನಿನ ಸಮಾನ ರಕ್ಷಣೆಯನ್ನು ನಿರಾಕರಿಸುವುದಿಲ್ಲ’, ಎಂದು ನಮೂದಿಸಲಾಗಿದೆ.
ಆ. ಪರಿಚ್ಛೇದ ೧೫ (೧) ರಲ್ಲಿ ‘ರಾಜ್ಯ ಯಾವುದೇ ವ್ಯಕ್ತಿಗೆ ಪ್ರತಿಕೂಲವಾಗುವಂತೆ ಧರ್ಮ, ವಂಶ, ಜಾತಿ, ಲಿಂಗ, ಜನ್ಮಸ್ಥಳ ಅಥವಾ ಇವುಗಳಲ್ಲಿ ಯಾವುದೇ ಕಾರಣದಿಂದ ಭೇದಭಾವ ಮಾಡುವುದಿಲ್ಲ’, ಎಂದು ಸ್ಪಷ್ಟಪಡಿಸಿದೆ.
ಇ. ಸಮಾನತೆಯ ಬಗ್ಗೆ ಹೀಗೆ ಸ್ಪಷ್ಟವಾಗಿ ನಮೂದಿಸಿದ್ದರೂ ಪರಿಚ್ಛೇದ ೩೦ (೧) ರಂತೆ ‘ಧರ್ಮ ಅಥವಾ ಭಾಷೆಯ ಆಧಾರದಲ್ಲಿ ಅಲ್ಪಸಂಖ್ಯಾತರಿಗೆ ಇಷ್ಟವಿರುವ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ಅವುಗಳ ವ್ಯವಸ್ಥಾಪನೆಯನ್ನು ನೋಡುವ ಅಧಿಕಾರವನ್ನು ನೀಡಲಾಗಿದೆ.’
ಈ. ಸಂವಿಧಾನದ ಪರಿಚ್ಛೇದ ೨೬ ರಿಂದ ೨೯ ಇವುಗಳಲ್ಲಿ ಧರ್ಮವನ್ನು ಆಧರಿಸಿ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ಆದ್ದರಿಂದ ಪರಿಚ್ಛೇದ ೨೬ ರಿಂದ ೩೦ ಇವುಗಳಲ್ಲಿ ಧರ್ಮವನ್ನು ಆಧರಿಸಿದ ವಿಶೇಷ ಲಾಭಗಳನ್ನು ನಮೂದಿಸಲಾಗಿದೆ. ಆದ್ದರಿಂದ ಅವುಗಳಲಿಲ್, ಹಾಗೆಯೇ ಪರಿಚ್ಛೇದ ೧೪ ಮತ್ತು ೧೫ (೧) ರಲ್ಲಿನ ವ್ಯವಸ್ಥೆಯಲ್ಲಿ ಸಂಪೂರ್ಣ ವಿಸಂಗತಿ ಇದೆ.
೨. ಭಾರತೀಯ ಸಂವಿಧಾನದಲ್ಲಿ ‘ಅಲ್ಪಸಂಖ್ಯಾತ’ ಈ ಶಬ್ದದ ಸುಸ್ಪಷ್ಟತೆ ಇಲ್ಲದಿರುವಾಗಲೂ ಅಲ್ಪಸಂಖ್ಯಾತರಿಗೆ ಸೌಲಭ್ಯಗಳನ್ನು ನೀಡುವುದೆಂದರೆ, ಇದು ಹಿಂದೂಗಳ ವಿಶ್ವಾಸಘಾತವಾಗಿದೆ !
ಅ. ಸಂವಿಧಾನದಲ್ಲಿ ‘ಅಲ್ಪಸಂಖ್ಯಾತ’ ಈ ಶಬ್ದವನ್ನು ೫ ರಿಂದ ೬ ಬಾರಿ ಉಲ್ಲೇಖಿಸಲಾಗಿದೆ; ಆದರೆ ‘ಅಲ್ಪಸಂಖ್ಯಾತ’ರೆಂದು ಯಾರಿಗೆ ಹೇಳಬೇಕು’, ಎಂಬುದನ್ನು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ ಅಥವಾ ಯಾವುದಾದರೊಂದು ವಿಶಿಷ್ಟ ಸಮುದಾಯ ಅಥವಾ ಪಂಥವನ್ನು ಅಲ್ಪಸಂಖ್ಯಾತ’ರೆಂದು ನಿರ್ಧರಿಸಲು ಯಾವುದೇ ಮಾನದಂಡವನ್ನು ನೀಡಿಲ್ಲ. ಎಷ್ಟು ಶೇಕಡಾ ಜನಸಂಖ್ಯೆಯ ಸಮಾಜವನ್ನು ಅಲ್ಪಸಂಖ್ಯಾತರೆಂದು ಸಂಬೋಧಿಸಲಾಗುವುದು ? ಅದೇ ರೀತಿ ಅದನ್ನು ಘೋಷಣೆ ಮಾಡಲು ಯಾವ ನಿಯಮಗಳನ್ನು, ಅಂದರೆ ಸಂಪೂರ್ಣ ರಾಷ್ಟ್ರವೋ, ವಿಶಿಷ್ಟ ರಾಜ್ಯವೋ, ವಿಶಿಷ್ಟ ಜಿಲ್ಲೆಯೋ ಅಥವಾ ಪಟ್ಟಣವೋ ಅಥವಾ ಗ್ರಾಮವೋ ? ಎಂಬುದರ ಮಾಹಿತಿಯನ್ನು ನೀಡಿಲ್ಲ; ಏಕೆಂದರೆ ಧರ್ಮಕ್ಕನುಸಾರ ಜನಸಂಖ್ಯೆಯ ಪ್ರಮಾಣ ಸಮಾನವಾಗಿರುವುದಿಲ್ಲ. ಅದರಲ್ಲಿ ವ್ಯತ್ಯಾಸವಿರುತ್ತದೆ. ಅದೇ ರೀತಿ ಅದು ವಿಭಿನ್ನ ಸ್ಥಾನಗಳಿಗನುಸಾರವೂ ಬದಲಾಗುತ್ತದೆ.
ಆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಸಂಸತ್ತು ಯಾವುದೇ ಅಧಿಕೃತ ಘೋಷಣೆಯನ್ನು ಮಾಡದೇ, ಆಗಿನ ಕಾಂಗ್ರೆಸ್ ಸರಕಾರ ಮುಸಲ್ಮಾನ, ಕ್ರೈಸ್ತ ಮತ್ತು ಪಾರ್ಸಿ ಸಮಾಜದ ಜನರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸುತ್ತಿತ್ತು ಮತ್ತು ಅವರಿಗೆ ಆ ರೀತಿಯ ಸೌಲಭ್ಯಗಳನ್ನೂ ನೀಡುತ್ತಿತ್ತು.
ಇ. ೧೯೯೨ ರಲ್ಲಿ ಕೇಂದ್ರ ಸರಕಾರ ಮೊದಲ ಸಲ ‘ಅಲ್ಪಸಂಖ್ಯಾತ ಆಯೋಗ ಅಧಿನಿಯಮ’ ಕಾನೂನನ್ನು ಮಾಡಿತು. ಈ ಕಾನೂನಿನ ಪರಿಚ್ಛೇದ ೨ ಕ್ಕನುಸಾರ ಕೇಂದ್ರ ಸರಕಾರಕ್ಕೆ ಯಾವುದೇ ಸಮಾಜವನ್ನು ಅಲ್ಪಸಂಖ್ಯಾತವೆಂದು ಘೋಷಣೆ ಮಾಡುವ ಅಧಿಕಾರ ಸಿಕ್ಕಿತು. ಆದ್ದರಿಂದ ಕೇಂದ್ರ ಸರಕಾರ ೧೯೯೩ ರಲ್ಲಿ ಅದಕ್ಕೆ ಸಿಕ್ಕಿದ ಅಧಿಕಾರದ ಲಾಭ ಪಡೆದು ಮುಸಲ್ಮಾನ, ಕ್ರೈಸ್ತದ , ಬೌದ್ಧ, ಸಿಕ್ಪ್ಖ್ಪ್ ಮತ್ತು ಪಾರ್ಸಿ ಈ ಸಮಾಜದವರನ್ನು ಅಲ್ಪಸಂಖ್ಯಾತರು ಎಂದು ಘೋಷಣೆ ಮಾಡಿತು. ೨೦೦೫ ರಲ್ಲಿ ಜೈನಪಂಥದವರನ್ನೂ ಅಲ್ಪಸಂಖ್ಯಾತರೆಂದು ಘೋಷಣೆ ಮಾಡಿತು.
ಈ. ಇಲ್ಲಿ ಒಂದು ಮಹತ್ವದ ವಿಷಯವನ್ನು ಗಮನಿಸಬೇಕು, ಸಂವಿಧಾನದ ಪರಿಚ್ಛೇದ ೨೫ (೨) ಈ ಕಲಂನಲ್ಲಿ ಖಂಡ (೨) ರ ಉಪಖಂಡ (ಖ) ದಲ್ಲಿ ‘ಹಿಂದೂ’ ಈ ಶಬ್ದದ ಉಲ್ಲೇಖದಲ್ಲಿ ಸಿಕ್ಖ, ಜೈನ ಅಥವಾ ಬೌದ್ಧ ಧರ್ಮದ ಉಲ್ಲೇಖವಿದೆ, ಅದರ ಅನ್ವಯಾರ್ಥವನ್ನು ಮಾಡಲಾಗುವುದು ಮತ್ತು ಹಿಂದೂ ಧಾರ್ಮಿಕ ಸಂಸ್ಥೆಗಳ ಉಲ್ಲೇಖದ ಅನ್ವಯಾರ್ಥವನ್ನೂ ಅದಕ್ಕನುಸಾರವೇ ಮಾಡಲಾಗುವುದು’, ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದ್ದರಿಂದ ಕೇಂದ್ರ ಸರಕಾರ ೧೯೯೨ ರ ನಂತರ ಸಿಕ್ಖ, ಜೈನ ಮತ್ತು ಬೌದ್ಧ ಪಂಥೀಯರನ್ನು ಅಲ್ಪಸಂಖ್ಯಾತರೆಂದು ಘೋಷಣೆ ಮಾಡುವುದು ಸಂವಿಧಾನದ ಉಲ್ಲಂಘನೆಯಾಗಿದೆ.
ಉ. ಕೇಂದ್ರ ಸರಕಾರ ‘ಅಲ್ಪಸಂಖ್ಯಾತ ಆಯೋಗ ಅಧಿನಿಯಮ ೧೯೯೨’ರಲ್ಲಿ ‘ಅಲ್ಪಸಂಖ್ಯಾತ’ ಶಬ್ದದ ವ್ಯಾಖ್ಯೆಯನ್ನು ಮಾಡಿಲ್ಲ. ಅದೇ ರೀತಿ ಅವರ ಜನಸಂಖ್ಯೆಯಲ್ಲಿನ ಶೇಕಡಾವಾರು ಮತ್ತು ಅವರನ್ನು ಯಾವ ಆಧಾರದಲ್ಲಿ ‘ಅಲ್ಪಸಂಖ್ಯಾತ’ರೆಂದು ನಿರ್ಣಯಿಸಬೇಕು ಎಂಬುದರ ಯಾವುದೇ ಅಂಕಿಂಶಗಳನ್ನು ಕೊಟ್ಟಿಲ್ಲ.
೩. ಸಂವಿಧಾನದಲ್ಲಿನ ವಿಶೇಷ ಏರ್ಪಾಡಿನಿಂದಾಗಿ ತಥಾಕಥಿತ ‘ಅಲ್ಪಸಂಖ್ಯಾತ’ ಮತ್ತು ‘ಬಹುಸಂಖ್ಯಾತ’ ಸಮಾಜದಲ್ಲಿ ದೊಡ್ಡ ಬಿರುಕು
ಧರ್ಮವನ್ನು ಆಧರಿಸಿ ವಿಶೇಷ ಲಾಭವನ್ನು ನೀಡುವ ಸಂವಿಧಾನದಲ್ಲಿನ ಈ ವ್ಯವಸ್ಥೆಯಿಂದ ದೇಶದಲ್ಲಿ ಗಂಭೀರ ಸಮಸ್ಯೆಗಳು ಉದ್ಭವವಾಗಿವೆ. ಸಮಾಜದಲ್ಲಿನ ತಥಾಕಥಿತ ‘ಅಲ್ಪಸಂಖ್ಯಾತ’ ಮತ್ತು ‘ಬಹುಸಂಖ್ಯಾತ’ ಸಮಾಜದಲ್ಲಿ ದೊಡ್ಡ ಒಡಕುಂಟಾಗಿದೆ. ೨೦೦೬ ರಲ್ಲಿ ಕೇಂದ್ರ ಸರಕಾರ ಅಲ್ಪಸಂಖ್ಯಾತ ಸಮಾಜದ ಸಮಸ್ಯೆಗಳನ್ನು ನಿವಾರಿಸಲು ಬೇರೆಯೆ ಒಂದು ಅಲ್ಪಸಂಖ್ಯಾತ ಸಚಿವಾಲಯವನ್ನು ಸ್ಥಾಪಿಸಿತು. ಪ್ರತಿವರ್ಷ ಈ ಸಚಿವಾಲಯದ ವತಿಯಿಂದ ಅಲ್ಪಸಂಖ್ಯಾತರಿಗೆ ಸಹಾಯ ಮಾಡುವ ಹೆಸರಿನಲ್ಲಿ ಕೋಟಿಗಟ್ಟಲೆ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತದೆ. ೨೦೨೧-೨೨ ರಲ್ಲಿ ಈ ಸಚಿವಾಲಯದ ಅಂದಾಜು ಮುಂಗಡಪತ್ರ (ಬಜೆಟ್) ೫ ಸಾವಿರ ಕೋಟಿ ರೂಪಾಯಿಗಳದ್ದಾಗಿತ್ತು. ಈ ಸಚಿವಾಲಯದ ವತಿಯಿಂದ ೪೩ ಅಲ್ಪಸಂಖ್ಯಾತ ಕಲ್ಯಾಣ ಯೋಜನೆಗಳನ್ನು ನಡೆಸಲಾಗುತ್ತದೆ. ಅವುಗಳಲ್ಲಿ ಆರ್ಥಿಕ ಮತ್ತು ಶೈಕ್ಷಣಿಕ ಸಹಾಯ, ವಿವಿಧ ಪ್ರಕಾರದ ಶಿಷ್ಯವೃತ್ತಿ, ನೌಕರಿಯನ್ನು ಪಡೆಯಲು ಮತ್ತು ಕೇಂದ್ರೀಯ ಜನಸೇವಾ ಆಯೋಗದ ಪರೀಕ್ಷೆಗಳಲ್ಲಿ ಸಹಾಯ ಈ ಸ್ವರೂಪದ ಸಹಾಯವನ್ನು ಮಾಡಲಾಗುತ್ತದೆ. ತಥಾಕಥಿತ ಅಲ್ಪಸಂಖ್ಯಾತ ಸಮಾಜಕ್ಕೆ ಈ ಲಾಭ ಸಿಗುತ್ತಿರುವಾಗ ತಥಾಕಥಿತ ಬಹುಸಂಖ್ಯಾತರಾಗಿರುವ ಹಿಂದೂ ಸಮಾಜ ಮಾತ್ರ ಈ ಲಾಭದಿಂದ ವಂಚಿತವಾಗಿದೆ.
ಇದರಲ್ಲಿ ಇನ್ನೂ ಒಂದು ವಿಸಂಗತಿ ಎಂದರೆ ಭಾರತದಲ್ಲಿ ಇಂತಹ ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿವೆ, ಅಲ್ಲಿ ತಥಾಕಥಿತ ಅಲ್ಪಸಂಖ್ಯಾತ ಸಮಾಜದ ಸಂಖ್ಯೆ ತಥಾಕಥಿತ ಬಹುಸಂಖ್ಯಾತ ಸಮಾಜಕ್ಕಿಂತ ತುಂಬಾ ಹೆಚ್ಚಿದೆ; ಆದರೆ ತಥಾಕಥಿತ ಅಲ್ಪಸಂಖ್ಯಾತ ಸಮಾಜಕ್ಕೆ ಸಿಗುವ ಎಲ್ಲ ಲಾಭಗಳು ಬಹುಸಂಖ್ಯಾತ ಸಮಾಜಕ್ಕೆ ಸಿಗುವುದಿಲ್ಲ. ಇದು ಅತ್ಯಂತ ಗಂಭೀರ ವಿಸಂಗತಿ ಆಗಿದೆ.
೪. ಕಳೆದ ೩ ವರ್ಷಗಳಲ್ಲಿ ಸರಕಾರ ಅನುದಾನ ನೀಡುವ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳಿಗೆ ೫ ಸಾವಿರ ಕೋಟಿ ರೂಪಾಯಿಗಳ ಹೆಚ್ಚಳ !
ಅ. ಸಂವಿಧಾನದ ಪರಿಚ್ಛೇದ ೩೦ ರಲ್ಲಿನ ವ್ಯವಸ್ಥೆಗನುಸಾರ ತಥಾಕಥಿತ ಅಲ್ಪಸಂಖ್ಯಾತ ಸಮಾಜಕ್ಕೆ ತಮ್ಮ ಶಾಲೆ, ಮಹಾವಿದ್ಯಾಲಯ, ವ್ಯವಸ್ಥಾಪನೆಯ ಶಿಕ್ಷಣ ನೀಡುವ ಸಂಸ್ಥೆ, ವೈದ್ಯಕೀಯ ಮಹಾವಿದ್ಯಾಲಯ ಇತ್ಯಾದಿಗಳನ್ನು ಸ್ಥಾಪಿಸುವ ಸ್ವಾತಂತ್ರ್ಯವನ್ನು ನೀಡಲಾಗಿದೆ. ಅದೇ ರೀತಿ ಇಂತಹ ಸಂಸ್ಥೆಗಳಿಂದ ಅಲ್ಪಸಂಖ್ಯಾತರಿಗೆ ತಮ್ಮ ಧರ್ಮ ಮತ್ತು ಸಂಸ್ಕೃತಿಯ, ಹಾಗೆಯೇ ಇತರ ಯಾವುದೇ ವಿಷಯದ ಶಿಕ್ಷಣ ನೀಡಲು ಅವಕಾಶವನ್ನು ನೀಡಲಾಗಿದೆ. ಯಾವ ಶೈಕ್ಷಣಿಕ ಸಂಸ್ಥೆ ಯಾವ ಧರ್ಮ ಅಥವಾ ಭಾಷೆಯ ಅಲ್ಪಸಂಖ್ಯಾತರ ಗುಂಪಿನಲ್ಲಿ ಬರುತ್ತದೆ, ಅವುಗಳಿಗೆ ಸ್ವತಂತ್ರ ಅಲ್ಪಸಂಖ್ಯಾತ ಸಂಸ್ಥೆಯ ದರ್ಜೆಯನ್ನು ನೀಡಲಾಗಿದೆ. ಈ ಸಂಸ್ಥೆಗಳಿಂದ ಅಲ್ಪಸಂಖ್ಯಾತರು ತಮ್ಮ ಸಂಸ್ಕೃತಿ ಮತ್ತು ಧರ್ಮ ಇವುಗಳ ಸಂವರ್ಧನೆ ಮಾಡುವ ದೃಷ್ಟಿಯಿಂದ ಯಾವುದೇ ಪ್ರಯತ್ನವನ್ನು ಮಾಡಬಹುದು.
ಆ. ಸಂವಿಧಾನದ ಪರಿಚ್ಛೇದ ೨೮ (೧) ರಲ್ಲಿ ‘ಸಂಪೂರ್ಣವಾಗಿ ರಾಜ್ಯದ ನಿಧಿಯಿಂದ ನಡೆಸಲಾಗುವ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಯಾವುದೇ ಧಾರ್ಮಿಕ ಶಿಕ್ಷಣವನ್ನು ನೀಡುವಂತಿಲ್ಲ’, ಎಂದು ಹೇಳಲಾಗಿದೆ; ಆದರೆ ಉಪಪರಿಚ್ಛೇದ (೨) ರಲ್ಲಿ ಮುಂದಿನಂತೆ ನಮೂದಿಸಲಾಗಿದೆ, ‘ಯಾವ ಶೈಕ್ಷಣಿಕ ಸಂಸ್ಥೆಯ ಆಡಳಿತವನ್ನು ರಾಜ್ಯದಿಂದ ನಡೆಸಲಾಗುತ್ತದೆಯೋ, ಆದರೆ ಧಾರ್ಮಿಕ ಶಿಕ್ಷಣ ನೀಡಲು ಆವಶ್ಯಕವಿರುವ ಯಾವುದೇ ದಾನನಿಧಿ ಅಥವಾ ನ್ಯಾಸದ ಮೂಲಕ ಅದನ್ನು ಸ್ಥಾಪಿಸಲಾಗಿದ್ದರೆ, ಅದಕ್ಕೆ ಖಂಡ (೧) ರಲ್ಲಿನ ಯಾವುದೇ ವಿಷಯ ಅನ್ವಯಸುವುದಿಲ್ಲ.’
ಇ. ಸಂವಿಧಾನದ ಪರಿಚ್ಛೇದ (ಕಲಂ) ೩೦ ರಲ್ಲಿನ ಉಪಪರಿಚ್ಛೇದ ೨ ಕ್ಕನುಸಾರ ‘ಶೈಕ್ಷಣಿಕ ಸಂಸ್ಥೆಗಳಿಗೆ ಸಹಾಯವನ್ನು ನೀಡುವಾಗ ರಾಜ್ಯ, ಯಾವುದಾದರೊಂದು ಶೈಕ್ಷಣಿಕ ಸಂಸ್ಥೆಯು ಧರ್ಮ ಅಥವಾ ಭಾಷೆಯ ಆಧಾರದಲ್ಲಿ ಅಲ್ಪಸಂಖ್ಯಾತವಾಗಿರುವ ಯಾವುದಾದರೊಂದು ವ್ಯವಸ್ಥಾಪನೆಯಡಿಯಲ್ಲಿದ್ದರೆ, ಅದಕ್ಕೆ ಪ್ರತಿಕೂಲವಾಗುವಂತಹ ಭೇದಭಾವವನ್ನು ಮಾಡಲಾಗುವುದಿಲ್ಲ.’ ತಾತ್ಪರ್ಯವೇನೆಂದರೆ, ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಅವರಿಗೆ ಸಂಬಂಧಪಟ್ಟ ಪಂಥ ಮತ್ತು ಸಂಸ್ಕೃತಿಯ ಶಿಕ್ಷಣವನ್ನು ನೀಡುವಾಗ ಸರಕಾರದ ಅನುದಾನ ಸಿಗುವುದು; ಆದರೆ ಹಿಂದೂಗಳು ಅವರ ಶೈಕ್ಷಣಿಕ ಸಂಸ್ಥೆಗಳಲ್ಲಿ ಧರ್ಮದ ಶಿಕ್ಷಣವನ್ನು ನೀಡಿದರೆ ಅವರಿಗೆ ಯಾವುದೇ ಅನುದಾನ ಅಥವಾ ಸಹಾಯ ಸಿಗುವುದಿಲ್ಲ. ವರ್ಷ ೨೦೧೯ ರಲ್ಲಿ ಸರಕಾರ ಅನುದಾನ ನೀಡುವ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳ ಸಂಖ್ಯೆ ೧೩ ಸಾವಿರದಿಂದ ೨೦೨೨ ರಲ್ಲಿ ಅದು ೧೮ ಸಾವಿರವಾಯಿತು. ಈ ವಿಷಯ ವಿಚಾರ ಮಾಡುವಂತಹದ್ದಾಗಿದೆ.
೫. ಸಂವಿಧಾನದಲ್ಲಿನ ಕೆಲವು ವಿಶೇಷ ವ್ಯವಸ್ಥೆಗಳಿಂದಾಗಿ ಅಲ್ಪಸಂಖ್ಯಾತ ಸಮಾಜಕ್ಕೆ ಖಾಸಗಿ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸಲು ವಿಶೇಷಾಧಿಕಾರ
ಅ. ಸಂವಿಧಾನದಲ್ಲಿನ ಪರಿಚ್ಛೇದ ೩೦ ರ ಉದ್ದೇಶವು ಅಲ್ಪಸಂಖ್ಯಾತರ ರಕ್ಷಣೆಯಾಗಬೇಕು ಮತ್ತು ಅವರಿಗೆ ಸಮಾನ ವರ್ತನೆ ಸಿಗಬೇಕು ಎಂಬುದಾಗಿದೆ. ಹೀಗಿದ್ದರೂ ಅಲ್ಪಸಂಖ್ಯಾತ ಸಮಾಜಕ್ಕೆ ಪರಿಚ್ಛೇದ ೩೦ ರಿಂದ ವಿಶೇಷಾಧಿಕಾರ ಸಿಕ್ಕಿದೆ, ಹಾಗೆಯೇ ಅವರಿಗೆ ಕೆಲವು ವಿಶಿಷ್ಟ ಲಾಭಗಳೂ ಸಿಕ್ಕಿವೆ. ಇದರ ಒಂದು ಉದಾಹರಣೆಯನ್ನು ನೋಡೋಣ. ಒಂದು ವೇಳೆ ಸರಕಾರ ಶಿಕ್ಷಣವನ್ನು ಸರಕಾರೀಕರಣ ಮಾಡಲು ನಿರ್ಧರಿಸಿದರೆ, ಇಂತಹ ಪ್ರಸಂಗದಲ್ಲಿ ಖಾಸಗಿ ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪಿಸಿ ಅದನ್ನು ನಡೆಸಲು ಸರಕಾರದ ಅನುಮತಿ ಸಿಗಲಾರದು. ಬಹುಸಂಖ್ಯಾತ ಸಮಾಜದ ಸಂಸ್ಥೆಗಳಿಗೆ ಈ ನಿಯಮ ಅನ್ವಯವಾಗುವುದು; ಆದರೆ ಸಂವಿಧಾನದ ಪರಿಚ್ಛೇದ ೩೦ ರಲ್ಲಿನ ವಿಶೇಷ ವ್ಯವಸ್ಥೆಯಿಂದಾಗಿ ಅಲ್ಪಸಂಖ್ಯಾತ ಸಮಾಜಕ್ಕೆ ಈ ನಿಯಮ ಅನ್ವಯಿಸಲಾರದು ಮತ್ತು ಅವರು ತಮ್ಮ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳನ್ನು ನಡೆಸಲು ಅವರಿಗೆ ಅವರ ಮೂಲಭೂತ ಅಧಿಕಾರವಿರುವುದು. ಅದೇ ರೀತಿ ಪರಿಚ್ಚೇದ ೩೦ ರಲ್ಲಿ ಅಲ್ಪಸಂಖ್ಯಾತರಿಗೆ ಒಂದು ವಿಶೇಷ ಸಂರಕ್ಷಣೆಯನ್ನು ನೀಡಲಾಗಿದೆ. ಅದಕ್ಕನುಸಾರ ಸರಕಾರ ಬಹುಸಂಖ್ಯಾತರ ಶೈಕ್ಷಣಿಕ ಸಂಸ್ಥೆಗಳನ್ನು ವಶಪಡಿಸಿಕೊಳ್ಳಬಹುದು; ಆದರೆ ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆಗಳನ್ನು ವಶಪಡಿಸಿಕೊಳ್ಳಲು ಬರುವುದಿಲ್ಲ.
ಆ. ೨೦೦೯ ರಲ್ಲಿ ಭಾರತ ಸರಕಾರ ಮಕ್ಕಳಿಗಾಗಿ ‘ಉಚಿತ’ ಮತ್ತು ಕಡ್ಡಾಯ ಶಿಕ್ಷಣದ ಅಧಿಕಾರ ಮಸೂದೆ’ಯನ್ನು ಜಾರಿಗೊಳಿಸಿತು. ಇದರ ಹಿಂದೆ ಸರಕಾರಿ ಅಥವಾ ಖಾಸಗಿ ಶಾಲೆಗಳಿಂದ ಮಕ್ಕಳಿಗೆ ಉಚಿತ ಶಿಕ್ಷಣ ಸಿಗಬೇಕು, ಎನ್ನುವ ಉದ್ದೇಶವಿತ್ತು. ೨೦೧೨ ರಲ್ಲಿ ಈ ಕಾನೂನಿನ ಮೊದಲ ಭಾಗದಲ್ಲಿ ಒಂದು ಸುಧಾರಣೆ ಮಾಡಿ ಅದರಲ್ಲಿ ೪ ಉಪಭಾಗಗಳನ್ನು ಜೋಡಿಸಲಾಯಿತು. ಈ ಅಂಶಕ್ಕನುಸಾರ ‘ಸಂವಿಧಾನದಲ್ಲಿನ ಪರಿಚ್ಛೇದ ೨೯ ಮತ್ತು ೩೦ ರಲ್ಲಿನ ವ್ಯವಸ್ಥೆ ಮತ್ತು ಈ ಕಾನೂನಿನಲ್ಲಿನ ಅಂಶಗಳಿಗನುಸಾರ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಸಿಗುವುದು ಅವರ ಮೂಲಭೂತ ಅಧಿಕಾರವಾಗಿದೆ.’
ಕಾನೂನಿನಲ್ಲಿನ ಈ ವ್ಯವಸ್ಥೆಯಿಂದಾಗಿ ಅಲ್ಪಸಂಖ್ಯಾತರಿಂದ ನಡೆಸಲಾಗುವ ಶೈಕ್ಷಣಿಕ ಸಂಸ್ಥೆಗಳ ಮೇಲೆ ಆರ್ಥಿಕದೃಷ್ಟಿಯಲ್ಲಿ ದುರ್ಬಲವಿರುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ವಿಷಯದಲ್ಲಿ ಯಾವುದೇ ಪ್ರಕಾರದ ನಿರ್ಬಂಧವಿಲ್ಲ. ತದ್ವಿರುದ್ಧ ಬಹುಸಂಖ್ಯಾತ ಸಮಾಜದಿಂದ (ಹಿಂದೂಗಳಿಂದ) ನಡೆಸಲ್ಪಡುವ ಸಂಸ್ಥೆಗಳಿಗೆ ಮಾತ್ರ ಆರ್ಥಿಕ ದೃಷ್ಟಿಯಲ್ಲಿ ದುರ್ಬಲ ವರ್ಗದಲ್ಲಿನ ಶೇ. ೨೫ ರಷ್ಟು ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುವ ನಿರ್ದೇಶನವನ್ನು ನೀಡಲಾಗಿದೆ. ಅಲ್ಪಸಂಖ್ಯಾತ ಸಂಸ್ಥೆಗಳು ಈ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಏಕೆ ನೀಡಬಾರದು ?’, ಎನ್ನುವ ವಿಷಯದಲ್ಲಿ ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ, ಅದೇರೀತಿ ‘ಬಹುಸಂಖ್ಯಾತರ ಸಂಸ್ಥೆಗಳು ಅಲ್ಪಸಂಖ್ಯಾತರ ಗುಂಪಿನ ಮಕ್ಕಳಿಗೆ ಉಚಿತ ಶಿಕ್ಷಣ ಏಕೆ ನೀಡಬೇಕು ?’, ಈ ವಿಷಯದಲ್ಲಿ ಯಾವುದೇ ಸಂದರ್ಭ ಸಿಗುವುದಿಲ್ಲ.
ಕಾನೂನಿನಲ್ಲಿನ ಈ ವ್ಯವಸ್ಥೆ ಮತ್ತು ‘ಮಕ್ಕಳಿಗಾಗಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾನೂನು’ (ಆರ್.ಟಿ.ಇ.) ಇದರಿಂದ ದೇಶದ ನಾಗರಿಕರಲ್ಲಿ ಭೇದಭಾವ ನಿರ್ಮಾಣವಾಗಿ ಬಹುಸಂಖ್ಯಾತ ಸಮಾಜಕ್ಕೆ ತುಂಬಾ ಹಾನಿಯಾಗಿದೆ. ಅದರ ಪರಿಣಾಮವೆಂದು ಕಳೆದ ೩ ವರ್ಷಗಳಲ್ಲಿ ಬಹುಸಂಖ್ಯಾತ ಸಮಾಜದವರಿಂದ ನಡೆಸಲ್ಪಡುವ ೪ ಸಾವಿರ ಶೈಕ್ಷಣಿಕ ಸಂಸ್ಥೆಗಳಿಗೆ ದುರ್ಬಲ ಘಟಕದಲ್ಲಿನ ಶೇ. ೨೫ ರಷ್ಟು ಮಕ್ಕಳಿಗೆ ಉಚಿತ ಶಿಕ್ಷಣವನ್ನು ಕೊಡಲು ಸಾಧ್ಯವಾಗದ ಕಾರಣ ಅವುಗಳನ್ನು ಶಾಶ್ವತವಾಗಿ ಮುಚ್ಚಬೇಕಾಯಿತು.
೬. ‘ವಕ್ಫ್ ಕಾನೂನು ೧೯೯೫’ ರಲ್ಲಿನ ಸುಧಾರಣೆ ಮತ್ತು ಭೂಮಿ ಕಾನೂನಿನ ಅಸಮಂಜಸತೆ
ಅ. ಸಂವಿಧಾನದ ಪರಿಚ್ಛೇದ ೧೪ ಮತ್ತು ೧೫ (೧) ರಲ್ಲಿನ ವ್ಯವಸ್ಥೆಗನುಸಾರ ‘ರಾಜ್ಯ ಯಾವುದೇ ವ್ಯಕ್ತಿಗೆ ಪ್ರತಿಕೂಲವಾಗುವಂತಹ, ಧರ್ಮ, ವಂಶ, ಜಾತಿ, ಲಿಂಗ, ಜನ್ಮಸ್ಥಳ ಅಥವಾ ಇವುಗಳಲ್ಲಿ ಯಾವುದೇ ಕಾರಣದಿಂದ ಭೇದಭಾವ ಮಾಡುವುದಿಲ್ಲ’, ಎಂದು ಹೇಳಿದೆ; ಆದರೆ ೨೦೧೩ ರಲ್ಲಿ ‘ವಕ್ಫ್ ಕಾನೂನು ೧೯೯೫’ರಲ್ಲಿ ಮಾಡಿದ ಬದಲಾವಣೆಯು ಈ ಅಧಿಕಾರದ ವಿರುದ್ಧ ಹೋಗುವುದಾಗಿದೆ. ಈ ವಕ್ಫ್ ಕಾನೂನಿಗನುಸಾರ ವಕ್ಫ್ ಬೋರ್ಡಕ್ಕೆ ‘ಯಾವುದೇ ಮುಸಲ್ಮಾನ ಅಥವಾ ಮುಸಲ್ಮಾನೇತರ (ಹಿಂದೂ, ಸಿಕ್ಖ, ಕ್ರೈಸ್ತ, ಬೌದ್ಧ) ವ್ಯಕ್ತಿಯ ಆಸ್ತಿಯನ್ನು ವಕ್ಫ್ ಆಸ್ತಿಯಾಗಿದೆ’, ಎಂದು ಘೋಷಣೆ ಮಾಡುವ ಅಧಿಕಾರವಿದೆ. ಇಂತಹ ನಿರ್ಣಯದ ವಿರುದ್ಧ ದೇಶದ ಉಚ್ಚ ಅಥವಾ ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು ಹಾಕಲಾಗುವುದಿಲ್ಲ, ಅದಕ್ಕೆ ಕೇವಲ ವಕ್ಫ್ ನ್ಯಾಯಾಲಯದಲ್ಲಿ ಮಾತ್ರ ಸವಾಲು ನೀಡಬಹುದು ಮತ್ತು ಅದರ ನಿರ್ಣಯ ಅಂತಿಮವಾಗಿರುವುದು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ದೇಶದ ಸಿವಿಲ್ ಕೋರ್ಟುಗಳು ಭೂಮಿಗೆ ಸಂಬಂಧಿಸಿದ ಎಲ್ಲ ದೂರುಗಳನ್ನು (ಅರ್ಜಿಗಳನ್ನು) ನಿವಾರಿಸಲು ಸಕ್ಷಮವಾಗಿವೆ, ಹಾಗೆಯೇ ಈ ನ್ಯಾಯಾಲಯಗಳಲ್ಲಿ ದೂರು ನೀಡುವವರಿಗೆ ಸಮಾಧಾನವಾಗದಿದ್ದರೆ ಅವರು ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯ ಕೇಳಲು ಅನುಮತಿಯೂ ಇದೆ; ಆದರೆ ವಕ್ಫ್ ಕಾನೂನು ಈ ಅಧಿಕಾರದ ಮೇಲೆ ಪ್ರಹಾರ ಮಾಡಿದೆ. ವಕ್ಫ್ ಬೋರ್ಡ ವಕ್ಫ್ ನ ಆಸ್ತಿಯೆಂದು ಘೋಷಣೆ ಮಾಡಿದ ಭೂಮಿಯ ವಿಷಯದಲ್ಲಿ ಯಾವುದೇ ವಿವಾದವನ್ನು ನಿವಾರಿಸುವ ಅಧಿಕಾರ ಸಿವಿಲ್ (ದಿವಾಣಿ) ಕೋರ್ಟುಗಳಿಗೆ ಇಲ್ಲ. ಈ ಹಿಂದೆ ಯಾವ ಭೂಮಿಯ ಒಡೆತನ ಮುಸಲ್ಮಾನರಲ್ಲಿತ್ತೊ, ಆ ಭೂಮಿಯನ್ನು ಮಾತ್ರ ವಕ್ಫ್ ಬೋರ್ಡ ವಶಪಡಿಸಿಕೊಳ್ಳಲು ಸಾಧ್ಯವಿತ್ತು; ಆದರೆ ಈಗ ವಕ್ಫ್ ಕಾನೂನಿನ ಸುಧಾರಣೆಯಿಂದಾಗಿ ಯಾವುದೇ, ಅಂದರೆ ಮುಸಲ್ಮಾನೇತರರ ಭೂಮಿಯನ್ನು ಕೂಡ ವಕ್ಫ್ ಬೋರ್ಡ ವಶಪಡಿಸಿಕೊಳ್ಳಬಹುದು.
ಆ. ಭೂಮಿಯ ಕಾನೂನಿಗನುಸಾರ ಯಾವುದೇ ಆಸ್ತಿ ಅಖಂಡವಾಗಿ ೨೦ ವರ್ಷಗಳ ವರೆಗೆ ಒಬ್ಬ ವ್ಯಕ್ತಿಯ ವಶದಲ್ಲಿದ್ದರೆ, ಆ ವ್ಯಕ್ತಿ ಕಾನೂನು ಪ್ರಕಾರ ಆ ಆಸ್ತಿಯ ಒಡೆಯನಾಗುತ್ತಾನೆ, ಆ ವ್ಯಕ್ತಿಗೆ ಆ ಆಸ್ತಿಯನ್ನು ಬಿಟ್ಟುಕೊಡಬೇಕೆಂದು ಯಾರು ಕೂಡ ಹೇಳುವ ಹಾಗಿಲ್ಲ, ಸಂವಿಧಾನದಲ್ಲಿ ಇಂತಹ ಒಂದು ವ್ಯವಸ್ಥೆ ಇದೆ. ವಕ್ಫ್ ಬೋರ್ಡ ಪರಿಚ್ಛೇದ ೧೦೭ ಕ್ಕನುಸಾರ ವಕ್ಫ್ ವಶಪಡಿಸಿಕೊಂಡ ಆಸ್ತಿಗೆ ಈ ನಿಯಮ ಅನ್ವಯಿಸುವುದಿಲ್ಲ. ಆದ್ದರಿಂದ ಯಾವುದಾದರೊಂದು ಆಸ್ತಿ ೫೦೦ ವರ್ಷಗಳಿಂದ ಒಬ್ಬ ವ್ಯಕ್ತಿಯ ವಶದಲ್ಲಿದ್ದರೂ ವಕ್ಫ್ ಬೋರ್ಡ ಈ ಆಸ್ತಿಯನ್ನು ತನ್ನದೆಂದು ಹೇಳಬಹುದು ಮತ್ತು ಅದನ್ನು ವಶಪಡಿಸಿಕೊಳ್ಳಬಹುದು.
ಇ. ಕಳೆದ ೧೦ ವರ್ಷಗಳಲ್ಲಿ ವಕ್ಫ್ ಬೋರ್ಡ ಅತ್ಯಂತ ತೀವ್ರ ಗತಿಯಿಂದ ಇತರರ ಭೂಮಿಗಳನ್ನು ಕಬಳಿಸಿ ಅವುಗಳನ್ನು ‘ವಕ್ಫ್ ಆಸ್ತಿ’ ಎಂದು ಘೋಷಣೆ ಮಾಡಿದೆ. ಭಾರತ ಸರಕಾರದ ಅಲ್ಪಸಂಖ್ಯಾತ ಸಚಿವಾಲಯದ ನಿಯಂತ್ರಣದಡಿಯಲ್ಲಿ ‘ವಕ್ಫ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಆಫ್ ಇಂಡಿಯಾ’ ಎಂಬ ಮಂಡಳಿ ಕಾರ್ಯನಿರತವಾಗಿದೆ. ‘ಜುಲೈ ೨೦೨೦ ರ ವರೆಗೆ ಈ ಮಂಡಳದಲ್ಲಿ ೬ ಲಕ್ಷ ೫೯ ಸಾವಿರದ ೮೭೬ ಆಸ್ತಿಗಳು ವಕ್ಫ್ ಆಸ್ತಿಗಳೆಂದು ನೋಂದಣಿ ಆಗಿವೆ’, ಎಂದು ಅವರು ಘೋಷಣೆಯನ್ನು ಮಾಡಿದ್ದಾರೆ. ಆದ್ದರಿಂದ ದೇಶದ ಸುಮಾರು ೮ ಲಕ್ಷ ಎಕರೆ ಭೂಮಿ ವಕ್ಫ್ ಬೋರ್ಡ ಅಧೀನದಲ್ಲಿದೆ. ಭಾರತೀಯ ರೈಲ್ವೆ ಮತ್ತು ಸೈನ್ಯದ ನಂತರ ದೇಶದ ಅತೀ ಹೆಚ್ಚು ಭೂಮಿ ವಕ್ಫ್ ಬೋರ್ಡ ಬಳಿಯಿದೆ.
ಈ ಸಂವಿಧಾನಾತ್ಮಕ ವ್ಯವಸ್ಥೆಯಿಂದಾಗಿ ಭಾರತೀಯ ನಾಗರಿಕರಲ್ಲಿ ಆಳವಾದ ಒಡಕು ನಿರ್ಮಾಣವಾಗಿದೆ. ಸಮಾನ ವರ್ತನೆ ಇದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಅಧಿಕಾರ ವಾಗಿದೆ; ಆದರೆ ಇಂತಹ ವ್ಯವಸ್ಥೆಗಳು ಈ ಅಧಿಕಾರಗಳನ್ನು ಕಾಲಿನಡಿ ತುಳಿಯುತ್ತ್ತಿವೆ. ಆದ್ದರಿಂದ ಸಂವಿಧಾನ ಮತ್ತು ಕಾನೂನಿನಲ್ಲಿನ ಇಂತಹ ವ್ಯವಸ್ಥೆಗಳನ್ನು ತೆಗೆದು ಹಾಕಬೇಕು. ಹಾಗೆ ಮಾಡಿದರೆ ಮಾತ್ರ ನಿಜವಾಗಿಯೂ ಈ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಸಮಾನ ನಡತೆ ಸಿಗಬಹುದು. ಜಗತ್ತಿನ ಇತರ ಯಾವುದೇ ದೇಶದಲ್ಲಿ ಬಹುಸಂಖ್ಯಾತರಿಗೆ ಇಂತಹ ವರ್ತನೆ ಸಿಗುವುದಿಲ್ಲ, ಎಂಬುದನ್ನು ಗಮನಿಸಬೇಕು.’
– ನ್ಯಾಯವಾದಿ ಸುಧೀರ ಗುಪ್ತಾ (ಹಿರಿಯ ನ್ಯಾಯವಾದಿ ಮತ್ತು ಶಿಕ್ಷಣತಜ್ಞರು), ಮುರಾದಾಬಾದ, ಉತ್ತರಪ್ರದೇಶ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು