ಚೀನಾದ ಪ್ರತಿಯೊಬ್ಬ ನಾಗರಿಕನ ಮೇಲೆ 6 ಲಕ್ಷ 80 ಸಾವಿರದ 696 ರೂಪಾಯಿಯಷ್ಟು ಸಾಲ

ಚೀನಾದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ 6 ಲಕ್ಷ 80 ಸಾವಿರದ 696 ರೂಪಾಯಿಯಷ್ಟು ಸಾಲವಿದೆ. ಚೀನಾದ ಜನಸಂಖ್ಯೆ 144 ಕೋಟಿ 47 ಲಕ್ಷ ಇದೆ. ಚೀನಾ ಪ್ರಗತಿ ಮಾಡಿದೆ, ಎಂದು ಹೇಳಲಾಗುತ್ತಿದ್ದರೂ, ಅದು ದೊಡ್ಡ ಪ್ರಮಾಣದಲ್ಲಿ ವಿದೇಶಿ ಸಾಲ ಪಡೆದಿದೆ.

ದೇಶದಲ್ಲಿನ ಪ್ರತಿಯೊಬ್ಬ ನಾಗರೀಕರ ಮೇಲೆ 32 ಸಾವಿರ ರೂಪಾಯಿಗಳ ವಿದೇಶಿ ಸಾಲ !

2021 ರಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನ ಮೇಲೆ ವಿದೇಶಿ ಸಾಲವು ಹೆಚ್ಚಾಗಿ 32 ಸಾವಿರ ರೂಪಾಯಿಗಳು ಆಗಿವೆ. 2021ರಲ್ಲಿ ಭಾರತದ ಮೇಲೆ 43 ಲಕ್ಷ 32 ಸಾವಿರ ಕೋಟಿಗಳ ವಿದೇಶಿ ಸಾಲವಿದೆ. ಈ ರೀತಿಯಲ್ಲಿ ಒಟ್ಟು ಸಾಲವು 147 ಲಕ್ಷ ಕೋಟಿ ರೂಪಾಯಿಗಳಷ್ಟು ಆಗಿದೆ.

ನೇಪಾಳದ ಲುಂಬಿನೀ ನಗರದವರೆಗೂ ರೈಲ್ವೇ ಹಾಗೂ ರಸ್ತೆ ನಿರ್ಮಿಸಲಿರುವ ಚೀನಾ !

ಇಂತಹ ಘಟನೆಗಳಿಂದ ಭಾರತದ ವಿದೇಶಾಂಗ ನೀತಿಯು ಸತತವಾಗಿ ಸೋಲುತ್ತಿದೆ ಎಂದು ಸಿದ್ಧವಾಗುತ್ತದೆ. ಚೀನಾವು ನೆರೆ ರಾಷ್ಟ್ರಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವಾಗ ಭಾರತವು ಮತ್ತಷ್ಟು ಆಕ್ರಮಕವಾಗುವುದಿಲ್ಲ, ಎಂಬುದು ಚಿಂತಾಜನಕವಾಗಿದೆ !

ಧರ್ಮದ ಆಧಾರದಲ್ಲಾದ ಭಾರತದ ವಿಭಜನೆಯು ಐತಿಹಾಸಿಕ ತಪ್ಪಾಗಿದೆ ! – ರಕ್ಷಣಾಮಂತ್ರಿ ರಾಜನಾಥ ಸಿಂಗ್

1971 ರ ಯುದ್ಧವು ಧರ್ಮದ ಆಧಾರದಲ್ಲಾದ ಭಾರತದ ವಿಭಜನೆಯನ್ನು ಐತಿಹಾಸಿಕ ತಪ್ಪು, ಎಂಬುದನ್ನು ಹೇಳುತ್ತದೆ. ಪಾಕಿಸ್ತಾನವು ಒಂದು ಧರ್ಮದ ಹೆಸರಿನಲ್ಲಿ ಜನಿಸಿದೆ; ಆದರೆ ಅದನ್ನು ತಡೆಯಲು ಸಾಧ್ಯವಾಗಲಿಲ್ಲ, ಎಂದು ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ರವರು ಹೇಳಿಕೆ ನೀಡಿದ್ದಾರೆ.

ಸಿಂಧ ಹಾಗೂ ಬಲುಚಿಸ್ತಾನವನ್ನು ಪಾಕನಿಂದ ಸ್ವಾತಂತ್ರ‍್ಯಗೊಳಿಸಿ !

ಸಂಯುಕ್ತ ರಾಷ್ಟ್ರದಲ್ಲಿ ಪಾಕನ ರಾಜಕೀಯ ಪಕ್ಷ ‘ಮುತ್ತಾಹಿದಾ ಕೌಮೀ ಮೂವಮೆಂಟ’ನ ಅಧ್ಯಕ್ಷರಾದ ಅಲ್ತಾಫ ಹುಸೇನರ ಬೇಡಿಕೆ

೪೦ ವರ್ಷಗಳ ಹಿಂದೆ ಕಳ್ಳತನ ಮಾಡಿದ್ದ ಶ್ರೀ ಯೋಗಿನಿ ದೇವಿಯ ಪ್ರಾಚೀನ ಮೂರ್ತಿಯನ್ನು ಬ್ರಿಟನ್ ಭಾರತಕ್ಕೆ ಹಿಂತಿರುಗಿಸಲಿದೆ !

ಉತ್ತರಪ್ರದೇಶದ ಬಾಂದಾ ಜಿಲ್ಲೆಯ ಲೋಕಾರಿ ಗ್ರಾಮದ ಮಂದಿರದಿಂದ ೪೦ ವರ್ಷಗಳ ಹಿಂದೆ ಕಳ್ಳತನ ಮಾಡಿದ್ದ ಶ್ರೀ ಯೋಗಿನಿ ದೇವಿಯ ಪ್ರಾಚೀನ ಮೂರ್ತಿಯನ್ನು ಬ್ರಿಟನ್ ಭಾರತಕ್ಕೆ ಹಿಂತಿರುಗಿಸಲಿದೆ.

‘ಭಾರತೀಯ ಸೈನಿಕರ ಕೈಗಳಿಗೆ ರಕ್ತ ಬಳಿಯುತ್ತಿದ್ದಾರೆ!’(ಅಂತೆ)

ಭಾರತದ ಮೂರೂ ಸೈನ್ಯ ದಳಗಳ ಮುಖ್ಯಸ್ಥ ಬಿಪಿನ್ ರಾವತ್ ಇವರ ಮತ್ತು ಚೀನಾದ ಪ್ರಖರ ವಿರೋಧಿಯಾಗಿದ್ದ ತೈವಾನಿನ ಸೇನಾದಳದ ಮುಖ್ಯಸ್ಥ ಇವರ ಅಪಘಾತದಲ್ಲಿ ಸಾಮ್ಯತೆಯಿದೆ, ಎಂದು ಭಾರತದ ಸಂರಕ್ಷಣಾ ತಜ್ಞ ಬ್ರಹ್ಮ ಚೇಲಾನಿ ಇವರು ದಾವೆ ಮಾಡಿದ ನಂತರ ಚೀನಾದ ಸರಕಾರಿ ಮುಖವಾಣಿ ‘ಗ್ಲೋಬಲ್ ಟೈಮ್ಸ್’ ಟೀಕೆ ಮಾಡಿತ್ತು.

‘ಭಾರತದಲ್ಲಿ ರಾ. ಸ್ವ. ಸಂಘದ ಬ್ರಾಹ್ಮಣವಾದಿ ಸಿದ್ಧಾಂತವು ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿದೆ !’ (ಅಂತೆ)

ಭಾರತದಲ್ಲಿ ಏನು ನಡೆಯುತ್ತಿದೆ, ಎಂಬುದು ಕೇವಲ ನಮ್ಮ ಅಥವಾ ವಿಶೇಷವಾಗಿ ಕಾಶ್ಮೀರದಷ್ಟೇ ಆಗಿಲ್ಲ. ಬದಲಾಗಿ ಇದು ಎಲ್ಲಾ ಭಾರತೀಯರ ದುರ್ದೈವವೇ ಆಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬ್ರಾಹ್ಮಣವಾದಿ ಸಿದ್ಧಾಂತವು ಭಾರತದಲ್ಲಿರುವ ಶೇಕಡಾ ೫೦ ರಿಂದ ೬೦ ಕೋಟಿ ಅಲ್ಪಸಂಖ್ಯಾತ ಸಮುದಾಯವನ್ನು ಕಡೆಗಣಿಸುತ್ತಿದೆ.

‘ಹೆಲಿಕಾಪ್ಟರ್ ನ ಅಪಘಾತದ ಹಿಂದೆ ಭಾರತೀಯ ಸೈನ್ಯದ ಅಶಿಸ್ತೇ ಕಾರಣ ! (ವಂತೆ)

ಇಂತಹ ಸುಳ್ಳು ಆರೋಪಗಳನ್ನು ಮಾಡಿ ಭಾರತೀಯ ಸೈನ್ಯ ಮತ್ತು ಭಾರತೀಯ ನಾಗರೀಕರ ಮಾನಸಿಕವಾಗಿ ತಗ್ಗಿಸುವ ಚೀನಾದ ಈ ಪ್ರಯತ್ನವು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂಬುದನ್ನು ಚೀನಾವು ಗಮನದಲ್ಲಿಡಬೇಕು !

‘ನಾವು ಭಾರತದ ಹಾಗೆ ಹಿಂಸಾತ್ಮಕ ಘಟನೆಗಳನ್ನು ನಿರ್ಲಕ್ಷಿಸುವುದಿಲ್ಲ !’ (ವಂತೆ)

ಭಾರತದಲ್ಲಿ ಹಿಂಸಾಚಾರ ನಡೆಸುತ್ತಿರುವ ಹಫೀಸ್ ಸಯಿದ್‍ನಂತಹ ಅಸಂಖ್ಯಾತ ಜಿಹಾದಿ ಉಗ್ರರನ್ನೂ ಪೋಷಿಸುವ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ ಚೌಧರಿ ಇವರ ಹಾಸ್ಯಾಸ್ಪದ ಹೇಳಿಕೆ !