ಜರ್ಮನಿಯ ‘ಎಲ್ ಜಿಬಿಟಿಕ್ಯೂ’ ಸಮುದಾಯದ ಮೇಲಿನ ದಾಳಿಯ ಪ್ರಕರಣ

(‘ಎಲ್ ಜಿಬಿಟಿಕ್ಯೂ’ ಸಮುದಾಯ ಎಂದರೆ ಸಲಿಂಗಕಾಮಿಗಳು, ಹಾಗೂ ಲಿಂಗಪರಿವರ್ತನೆ ಮಾಡಿಕೊಂಡ ಜನರು)
ಬರ್ಲಿನ (ಜರ್ಮನಿ) – ಇಲ್ಲಿ ಜುಲೈ ೨೫ ರಂದು ಬರ್ಲಿನ್ ನ ಟಿಯರ್ ಗಾರ್ಟನ್ ಪರಿಸರದಲ್ಲಿ ‘ಎಲ್ ಜಿಬಿಟಿಕ್ಯೂ’ ಸಮುದಾಯದ ‘ಕ್ರಿಸ್ಟೋಫರ್ ಸ್ಟ್ರೀಟ್ ಡೇ ಪ್ರೈಡ್’ ಕಾರ್ಯಕ್ರಮಕ್ಕೆ ಕಾರು ನುಗ್ಗಿಸಿದ ಜಿಹಾದಿ ಅಬ್ದುಲ್ ಬಲ್ಲೌಟ್ ನನ್ನು ಜರ್ಮನ್ ಪೊಲೀಸರು ೨೪ ಗಂಟೆಗಳ ಒಳಗೆ ಹೊಡೆದುರುಳಿಸಿದ್ದಾರೆ. ಅಬ್ದುಲ್ ಜುಲೈ ೨೫ ರಂದು ನಡೆಸಿದ ದಾಳಿಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, ೨೯ ಜನರು ಗಾಯಗೊಂಡಿದ್ದಾರೆ.
🚨 Islamist terror attack at Berlin Pride parade!
A van was driven into an LGBTQ+ parade in Germany, killing 1 and injuring 16.
Suspect Abdul Ballout, a German citizen of Lebanese origin, was shot dead by police.
🇩🇪 Interior Minister Alexander Dobrindt: “Everything we see here… pic.twitter.com/tP1NASt7ss
— Sanatan Prabhat (@SanatanPrabhat) July 27, 2026
ಸ್ಪ್ಯಾಂಡೌ ಪ್ರದೇಶದಲ್ಲಿ ಪೊಲೀಸರು ಆತನನ್ನು ಸುತ್ತುವರೆದಾಗ, ಆತ ಆಯುಧದೊಂದಿಗೆ ಅವರ ಕಡೆಗೆ ಧಾವಿಸಿದನು. ತದನಂತರ ನಡೆದ ಗುಂಡಿನ ಚಕಮಕಿಯಲ್ಲಿ ಆತ ಮೃತಪಟ್ಟಿದ್ದಾನೆ. ಜರ್ಮನಿಯ ಚಾನ್ಸೆಲರ್ (ದೇಶದ ಮುಖ್ಯಸ್ಥ) ಫ್ರೆಡರಿಕ್ ಮರ್ಜ್ ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅದರ ನಂತರ ೨೪ ಗಂಟೆಗಳ ಒಳಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಬಲ್ಲೌಟ್ ಜರ್ಮನಿಯ ನಾಗರಿಕನಾಗಿದ್ದು, ಆತನಿಗೆ ಲೆಬನಾನ್ ನೊಂದಿಗೆ ಸಂಪರ್ಕವಿತ್ತು. ಆತ ಈ ಹಿಂದೆ ಇಸ್ಲಾಮಿಕ್ ಸ್ಟೇಟ್ ನಂತಹ ಕಟ್ಟಾ ಜಿಹಾದಿ ಭಯೋತ್ಪಾದಕ ಸಂಘಟನೆಯಲ್ಲಿ ಸೇರಲು ಯತ್ನಿಸಿದ್ದನು. ಆತನ ಮೇಲೆ ಈ ಸಂಘಟನೆಯ ಪ್ರಚಾರ ಮತ್ತು ಹಿಂಸಾತ್ಮಕ ಕೃತ್ಯಗಳಿಗೆ ಸಿದ್ಧತೆ ನಡೆಸಿದ ಆರೋಪಗಳೂ ಇದ್ದವು.
ನೇಪಾಳ: ಮುಸ್ಲಿಂರಿಂದ ಹಿಂದೂಗಳ ಮೇಲೆ ದಾಳಿ! – ಪೊಲೀಸರ ಗುಂಡೇಟಿಗೆ ಓರ್ವ ಹಿಂದೂ ಯುವಕ ಬಲಿ
ಸಿಯಾಟಲ್ (ಅಮೆರಿಕ) ಇಲ್ಲಿನ ಆಹಾರ ಮೇಳದಲ್ಲಿ ಗುಂಡಿನ ದಾಳಿ: ೨ ಜನರು ಸಾವು
ಕೆನಡಾ-ಅಮೆರಿಕ ಗಡಿಯಲ್ಲಿ (1,700 ಕಿಲೋಗ್ರಾಂ) ಮಾದಕ ಪದಾರ್ಥ ಜಪ್ತಿ
ಜರ್ಮನಿ: ‘ಎಲ್ಜಿಬಿಟಿಕ್ಯೂ’ ಸಮುದಾಯದ ಮೆರವಣಿಗೆಗೆ ವ್ಯಾನ್ ನಿಂದ ಡಿಕ್ಕಿ ಹೊಡೆದ ಜಿಹಾದಿ – ಓರ್ವ ವ್ಯಕ್ತಿ ಸಾವು, ೧೬ ಮಂದಿಗೆ ಗಾಯ
‘ಪೇಟ್ರಿಯಾಟ್ ಇಂಟರ್ಸೆಪ್ಟರ್’ ಕ್ಷಿಪಣಿಗಳ ಕೊರತೆ; ಇರಾನ್ ಮೇಲಿನ ಬೃಹತ್ ದಾಳಿಯನ್ನು ತಡೆದ ಟ್ರಂಪ್
ಬಾಗಲಕೋಟೆ : ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ !