ಅಶ್ಲೀಲ ವಿಡಿಯೋ ಮೂಲಕ ೯ ಲಕ್ಷ ರೂಪಾಯಿ ಸುಲಿಗೆ ಮಾಡಿ ಕಾಲೇಜು ವಿದ್ಯಾರ್ಥಿಗೆ ವಂಚನೆ!

ಇಬ್ಬರ ವಿರುದ್ಧ ದೂರು ದಾಖಲು; ಆರೋಪಿಗಳ ಶೋಧ ಕಾರ್ಯ ಪ್ರಗತಿಯಲ್ಲಿ!

ಮುಂಬಯಿ – ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯವಾದ ೨೨ ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ‘ಹನಿಟ್ರ್ಯಾಪ್’ (ಮಹಿಳೆಯ ಮೂಲಕ ವ್ಯಕ್ತಿಯನ್ನು ಬಲೆಯಲ್ಲಿ ಸಿಲುಕಿಸುವ) ಜಾಲದಲ್ಲಿ ಸಿಲುಕಿಸಲಾಯಿತು. ಆತನ ಅಶ್ಲೀಲ ವಿಡಿಯೋ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿ ಆತನಿಂದ ೯ ಲಕ್ಷ ೩೦ ಸಾವಿರ ರೂಪಾಯಿ ಸುಲಿಗೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಓರ್ವ ಮಹಿಳೆ ಸೇರಿದಂತೆ ಇಬ್ಬರ ವಿರುದ್ಧ ಸುಲಿಗೆ, ಬೆದರಿಕೆ, ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿಕೊಂಡಿದ್ದು, ಆರೋಪಿಗಳ ಶೋಧ ನಡೆಸುತ್ತಿದ್ದಾರೆ.

ಯುವಕನಿಗೆ ‘ಆಹಾನಾ’ ಎಂಬ ಹೆಸರಿನ ಯುವತಿಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಪರಿಚಯವಾಯಿತು. ಸ್ನೇಹ ಬೆಳೆಯುತ್ತಿದ್ದಂತೆ ಆಕೆ ಆತನಿಗೆ ವಿಡಿಯೋ ಕರೆ ಮಾಡಿ ಬಟ್ಟೆ ಕಳಚುವಂತೆ ಪ್ರಚೋದಿಸಿದಳು. ಆಕೆಯ ಮೇಲೆ ನಂಬಿಕೆ ಇಟ್ಟು ಆತ ತನ್ನ ಅಶ್ಲೀಲ ವಿಡಿಯೋಗಳನ್ನು ಆಕೆಗೆ ಕಳುಹಿಸಿದನು. ಯುವತಿಯು ತನ್ನ ಸಹಚರನ ನೆರವಿನಿಂದ ಈ ವಿಡಿಯೋಗಳನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಳು. ಭಯದಿಂದ ವಿದ್ಯಾರ್ಥಿ ೫೫ ಬಾರಿ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಒಟ್ಟು ೯ ಲಕ್ಷದ ೩೦ ಸಾವಿರ ರೂಪಾಯಿಗಳನ್ನು ಆಕೆಗೆ ಕಳುಹಿಸಿದನು; ಆದರೂ ಆಕೆ ಹಣದ ಬೇಡಿಕೆಯನ್ನು ಮುಂದುವರಿಸಿದಳು. ಕೊನೆಗೆ ಬೇಸತ್ತ ವಿದ್ಯಾರ್ಥಿ ಪೊಲೀಸರಿಗೆ ದೂರು ನೀಡಿದನು.

ಸಂಪಾದಕೀಯ ನಿಲುವು

  • ಅಪರಿಚಿತ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸುವ ಮೊದಲು ಜಾಗ್ರತೆ ವಹಿಸಿ, ಇಲ್ಲದಿದ್ದರೆ ಜೀವನವನ್ನೇ ಹಾಳುಮಾಡಿಕೊಂಡಂತಾಗುತ್ತದೆ!
  • ವಂಚನೆ ಮಾಡುವವರಿಗೆ ಕಠಿಣ ಶಿಕ್ಷೆಯಾಗದಿರುವುದರಿಂದಲೇ ಇಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇಂತಹ ಅಪರಾಧಗಳನ್ನು ಸರಕಾರ ನಿಯಂತ್ರಣಕ್ಕೆ ತರುವುದು ಯಾವಾಗ?