ಫ್ರಾನ್ಸ್ : ಮುಸ್ಲಿಂ ವ್ಯಕ್ತಿಯಿಂದ ಗರ್ಭಿಣಿ ಮಹಿಳೆ ಸೇರಿದಂತೆ ಮೂವರ ಮೇಲೆ ಚಾಕುವಿನಿಂದ ದಾಳಿ

ಪ್ಯಾರಿಸ್ (ಫ್ರಾನ್ಸ್) – ಇಲ್ಲಿನ ಪೋರ್ಟ್ ಡಿ ಕ್ಲಿಚಿ ಪ್ರದೇಶದಲ್ಲಿ ಮುಂಜಾನೆ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಹೋಗುತ್ತಿದ್ದ ೩ ಮಹಿಳೆಯರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಇದರಲ್ಲಿ ಒಬ್ಬ ಗರ್ಭಿಣಿ ಮಹಿಳೆಯೂ ಸೇರಿದ್ದಾಳೆ. ಈ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರಿದಿದೆ.

ಈ ದಾಳಿಯ ನಂತರ ನಾಗರಿಕರು ತಕ್ಷಣ ಪ್ರತಿಕ್ರಿಯಿಸಿ ಆರೋಪಿಯನ್ನು ಬೆನ್ನಟ್ಟಿದರು. ಒಬ್ಬ ವ್ಯಕ್ತಿ ಸೂಟ್‌ಕೇಸ್ ಎಸೆದಿದ್ದರಿಂದ ಆರೋಪಿಯ ಕೈಯಲ್ಲಿದ್ದ ಚಾಕು ಕೆಳಗೆ ಬಿದ್ದಿತು ಮತ್ತು ಅಲ್ಲಿದ್ದವರು ಆತನನ್ನು ಹಿಡಿದಿಟ್ಟುಕೊಂಡರು. ಘಟನಾ ಸ್ಥಳದ ಬಳಿಯಿದ್ದ ಪೊಲೀಸ್ ಅಧಿಕಾರಿಯೊಬ್ಬರು ಆರೋಪಿಯನ್ನು ಬಂಧಿಸಿದರು. ಆತನಿಂದ ೨ ಹರಿತವಾದ ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ಸಾಧ್ಯತೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಮಹಿಳೆಯರನ್ನೇ ಗುರಿಯಾಗಿಸಿಕೊಂಡಿದ್ದರ ಹಿಂದಿನ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸರು ಈ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

‘ಇದು ಅಲ್ಲಾನ ಆಜ್ಞೆಯಾಗಿತ್ತು !’(ಅಂತೆ)

ಘಟನೆಯ ನಂತರ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ಆತ ಮೊದಲು ಪೊಲೀಸರ ಮುಂದೆ ಮತ್ತು ನಂತರ ನ್ಯಾಯಾಲಯದಲ್ಲಿ ತನ್ನ ಹೇಳಿಕೆಯನ್ನು ಪುನರಾವರ್ತಿಸಿ, ‘ಇದು ಅಲ್ಲಾನ ಆಜ್ಞೆಯಾಗಿತ್ತು’, ಎಂದು ಹೇಳಿದನು. ಆರೋಪಿಯ ಗುರುತು ಅಥವಾ ಆತನಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

ಸಂಪಾದಕೀಯ ನಿಲುವು

ಇಂತಹವರನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಿ ‘ಇದೂ ಸಹ ದೇವರ ಆಜ್ಞೆಯಾಗಿತ್ತು’, ಎಂದು ಹೇಳಬೇಕು, ಆಗಷ್ಟೇ ಇಂತಹ ಕೃತ್ಯವನ್ನು ಮತ್ತೆ ಯಾರೂ ಮಾಡಲು ಧೈರ್ಯ ಮಾಡುವುದಿಲ್ಲ !