
ಪುಣೆ – ‘ಪುಣೆ ಸಾರ್ವಜನಿಕ ಸಭಾ’ದ ಸಂಸ್ಥಾಪಕ ದಿವಂಗತ ಗಣೇಶ ವಾಸುದೇವ ಜೋಶಿ ಅಲಿಯಾಸ್ ‘ಸಾರ್ವಜನಿಕ ಕಾಕಾ’ ಅವರ ತಿಥಿ ಪ್ರಕಾರ ಪುಣ್ಯತಿಥಿಯ ನಿಮಿತ್ತ ನೀಡಲಾಗುವ ‘ಸಾರ್ವಜನಿಕ ಕಾಕಾ ಪ್ರಶಸ್ತಿ’ಯನ್ನು ಈ ವರ್ಷ ಹಿಂದೂ ವಿಧಿಜ್ಞ ಪರಿಷತ್ತಿನ ಅಧ್ಯಕ್ಷ ವಕೀಲ ವೀರೇಂದ್ರ ಇಚಲಕರಂಜಿಕರ್ ಅವರಿಗೆ ಘೋಷಿಸಲಾಗಿದೆ. ಈ ಯೋಜಿತ ಸಮಾರಂಭವು ಜುಲೈ 3 ರಂದು ನಡೆಯಬೇಕಿತ್ತು; ಆದರೆ ಈ ಪ್ರಶಸ್ತಿ ವಿತರಣಾ ಸಮಾರಂಭವನ್ನು ಕೆಲವು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿತ್ತು. ಈಗ ಈ ಸಮಾರಂಭವು ಆಗಸ್ಟ್ 2 ರಂದು ಸಂಜೆ 5.30 ಕ್ಕೆ ‘ಸುಪರ್ಣ ಕಾರ್ಯಾಲಯ’, ಅರಣ್ಯೇಶ್ವರ ಚೌಕ, ಪುಣೆ ಇಲ್ಲಿ ನಡೆಯಲಿದೆ. ಹಿರಿಯ ವಕೀಲ ಶ್ರೀ. ನಂದೂ ಫಡ್ಕೆ ಅವರ ಪ್ರಮುಖ ಉಪಸ್ಥಿತಿಯಲ್ಲಿ ಈ ಸಮಾರಂಭ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಪ್ರತಿವರ್ಷದಂತೆ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ವಿದ್ಯಾರ್ಥಿವೇತನವನ್ನೂ ವಿತರಿಸಲಾಗುವುದು. ಆದ್ದರಿಂದ ಎಲ್ಲಾ ಸದಸ್ಯರು, ಧರ್ಮಪ್ರೇಮಿಗಳು ಮತ್ತು ನಾಗರಿಕರು ಈ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ‘ಪುಣೆ ಸಾರ್ವಜನಿಕ ಸಭಾ’ದ ಅಧ್ಯಕ್ಷ ಶ್ರೀ. ವಿದ್ಯಾಧರ ನಾರ್ಗೋಲ್ಕರ್, ಕಾರ್ಯದರ್ಶಿ ಶ್ರೀ. ಶರದ ಗರ್ಭೆ, ಕಾರ್ಯಾಧ್ಯಕ್ಷ ಶ್ರೀ. ಅನಿಲ ಶಿದೋರೆ ಮತ್ತು ಟ್ರಸ್ಟಿ ಹಾಗೂ ಕಾರ್ಯಕಾರಿ ಮಂಡಳಿಯ ಪರವಾಗಿ ಕೋರಲಾಗಿದೆ.
‘ಕನ್ಫರ್ಮ್ ಟಿಕೆಟ್’ ಸಂಸ್ಥೆಯು ಶ್ರೀ ಗಣೇಶನಿಗೆ ಅವಮಾನ ಮಾಡಿದ ಜಾಹೀರಾತು ಹಿಂಪಡೆದಿದೆ
ಶಾಂತಿಯುತವಾಗಿ ಪ್ರತಿಭಟನೆ; ನಾಗರಿಕರಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕು! – ಸುಪ್ರೀಂ ಕೋರ್ಟ್
ಅಶ್ಲೀಲ ವಿಡಿಯೋ ಮೂಲಕ ೯ ಲಕ್ಷ ರೂಪಾಯಿ ಸುಲಿಗೆ ಮಾಡಿ ಕಾಲೇಜು ವಿದ್ಯಾರ್ಥಿಗೆ ವಂಚನೆ!
ಕಾಂಚೀಪುರಂ (ತಮಿಳುನಾಡು) ನಲ್ಲಿರುವ ಶ್ರೀ ಕಲ್ಯಾಣ ವರದ ದೇವಾಲಯದಲ್ಲಿ ಅರಳಿ ಮರ ನೆಟ್ಟಿದ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡ್ಗೀಳ್ !
ಆಂಧ್ರಪ್ರದೇಶ: ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ನಾಯಕ ಜೋಗಿ ರಮೇಶ್ ಅವರ ಸೊಸೆಯಿಂದ ಕೌಟುಂಬಿಕ ಹಿಂಸಾಚಾರದ ದೂರು
‘ದೌರ್ಜನ್ಯಗಳಿಲ್ಲದೆ ಗೃಹ ಇಲಾಖೆಯನ್ನು ಸುಸೂತ್ರವಾಗಿ ಹೇಗೆ ನಡೆಸಬೇಕು ಎಂಬುದನ್ನು ಅಮಿತ್ ಶಹಾ ಅವರು ಕರ್ನಾಟಕದಿಂದ ಕಲಿಯಬೇಕು’!