ಸಚಿವ ಪ್ರಿಯಾಂಕ್ ಖರ್ಗೆ ಅವರ ವ್ಯಂಗ್ಯ ಹೇಳಿಕೆ
ಬೆಂಗಳೂರಿನಲ್ಲಿ ‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ಪ್ರತಿಭಟನೆಗೆ ಪೋಲಿಸ್ ನೆರವು ನೀಡಿದ ಕುರಿತು ಹೇಳಿಕೆ.

ಬೆಂಗಳೂರು – ನಗರದ ‘ಫ್ರೀಡಂ ಪಾರ್ಕ್’ನಲ್ಲಿ ‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರಿಗೆ ನನ್ನ ಇಲಾಖೆಯಿಂದ ಪೂರ್ಣ ಸಹಕಾರ ನೀಡಲಾಗುತ್ತಿದೆ. ಯಾವುದೇ ದೌರ್ಜನ್ಯವಿಲ್ಲದೆ ಅತ್ಯಂತ ಶಿಸ್ತಿನಿಂದ ಪ್ರತಿಭಟನೆ ನಡೆಯುತ್ತಿದೆ. ಪ್ರಧಾನಿ ಮೋದಿಯವರಿಗೆ ಬೆಂಗಳೂರಿನ ಪ್ರತಿಭಟನೆಯ ರೀಲ್ಸ್ (ಸಣ್ಣ ವೀಡಿಯೊಗಳನ್ನು) ಕಳುಹಿಸಿಕೊಡಿ. ದೌರ್ಜನ್ಯಗಳಿಲ್ಲದೆ ಗೃಹ ಇಲಾಖೆಯನ್ನು ಸುಸೂತ್ರವಾಗಿ ಹೇಗೆ ನಡೆಸುವುದು ಎಂಬುದನ್ನು ಅಮಿತ್ ಶಹಾ ಅವರು ಕರ್ನಾಟಕದಿಂದ ಕಲಿಯಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ ಹೇಳಿಕೆ ನೀಡಿದ್ದಾರೆ.
ಪ್ರತಿಭಟನಾಕಾರರು ಉಮರ್ ಖಾಲಿದ್ ಪರವಾಗಿ ಘೋಷಣೆಗಳನ್ನು ಕೂಗಿದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಖರ್ಗೆ, “ಅವನು ದೇಶದ್ರೋಹಿ ಎಂದು ನ್ಯಾಯಾಲಯ ಹೇಳಿದೆಯೇ? ಕೇಂದ್ರ ಸರಕಾರಕ್ಕೆ ಇದುವರೆಗೆ ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಲು ಕೂಡ ಸಾಧ್ಯವಾಗಿಲ್ಲ” ಎಂದರು. (ಯಾವುದೇ ಮುಸ್ಲಿಂ ಆರೋಪಿಯ ವಿಷಯ ಬಂದಾಗ, ಕಾಂಗ್ರೆಸ್ ನಾಯಕರಿಗೆ ಪ್ರಜಾಪ್ರಭುತ್ವ, ನ್ಯಾಯಾಂಗ ವ್ಯವಸ್ಥೆ ಇತ್ಯಾದಿಗಳು ನೆನಪಾಗುತ್ತವೆ. ಇನ್ನೊಂದೆಡೆ ಹಿಂದೂ ರಾಷ್ಟ್ರಕ್ಕೆ ಆಗ್ರಹಿಸುವ ಹಿಂದುತ್ವನಿಷ್ಠರನ್ನು ಇದೇ ಕಾಂಗ್ರೆಸಿಗರು ದೇಶದ್ರೋಹಿಗಳು ಎಂದು ನಿಂದಿಸಿ ಸುಮ್ಮನಾಗುತ್ತಾರೆ! – ಸಂಪಾದಕರು)
‘ಕನ್ಫರ್ಮ್ ಟಿಕೆಟ್’ ಸಂಸ್ಥೆಯು ಶ್ರೀ ಗಣೇಶನಿಗೆ ಅವಮಾನ ಮಾಡಿದ ಜಾಹೀರಾತು ಹಿಂಪಡೆದಿದೆ
ಶಾಂತಿಯುತವಾಗಿ ಪ್ರತಿಭಟನೆ; ನಾಗರಿಕರಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕು! – ಸುಪ್ರೀಂ ಕೋರ್ಟ್
ಅಶ್ಲೀಲ ವಿಡಿಯೋ ಮೂಲಕ ೯ ಲಕ್ಷ ರೂಪಾಯಿ ಸುಲಿಗೆ ಮಾಡಿ ಕಾಲೇಜು ವಿದ್ಯಾರ್ಥಿಗೆ ವಂಚನೆ!
ಕಾಂಚೀಪುರಂ (ತಮಿಳುನಾಡು) ನಲ್ಲಿರುವ ಶ್ರೀ ಕಲ್ಯಾಣ ವರದ ದೇವಾಲಯದಲ್ಲಿ ಅರಳಿ ಮರ ನೆಟ್ಟಿದ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡ್ಗೀಳ್ !
ಆಂಧ್ರಪ್ರದೇಶ: ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ನಾಯಕ ಜೋಗಿ ರಮೇಶ್ ಅವರ ಸೊಸೆಯಿಂದ ಕೌಟುಂಬಿಕ ಹಿಂಸಾಚಾರದ ದೂರು
ಕಾಕ್ರೋಚ್ ಜನತಾ ಪಕ್ಷದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ‘ಇ-೨೦ ಜನತಾ ಪಕ್ಷ’ದ ಸ್ಥಾಪನೆ