‘ಇನ್ಫೋಸಿಸ್’ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರ ಅಧ್ಯಕ್ಷತೆಯಲ್ಲಿ ೬ ಸದಸ್ಯರ ಕಾರ್ಯಪಡೆ

ನವದೆಹಲಿ – ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ೬ ಸದಸ್ಯರ ಉನ್ನತ ಮಟ್ಟದ ಕಾರ್ಯಪಡೆಯನ್ನು ಸ್ಥಾಪಿಸಿದ್ದಾರೆ. ‘ಇನ್ಫೋಸಿಸ್’ ನ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಪಡೆ ಕೆಲಸ ಮಾಡಲಿದೆ ಎಂದು ಜುಲೈ ೨೬ ರಂದು ಮೋದಿ ಅವರು ಘೋಷಿಸಿದರು.
ಸಮಿತಿಯಲ್ಲಿ ಯಾರಿದ್ದಾರೆ?
ಪರೀಕ್ಷಾ ವ್ಯವಸ್ಥೆಯಲ್ಲಿ, ಮುಖ್ಯವಾಗಿ ತಂತ್ರಜ್ಞಾನದ ಮೂಲಕ ಸುಧಾರಣೆಗಳನ್ನು ತರಲು ವಿವಿಧ ಕ್ಷೇತ್ರಗಳ ತಜ್ಞರನ್ನು ಈ ಸಮಿತಿಯಲ್ಲಿ ಸೇರಿಸಲಾಗಿದೆ. ಸಮಿತಿಯ ಸದಸ್ಯರು ಈ ಕೆಳಗಿನಂತಿದ್ದಾರೆ:
೧. ತಂತ್ರಜ್ಞಾನ ತಜ್ಞ ನಂದನ್ ನಿಲೇಕಣಿ
೨. ‘ಇಸ್ರೋ’ ಮಾಜಿ ಅಧ್ಯಕ್ಷ ಎಸ್. ಸೋಮನಾಥ್
೩. ಗೂಢಚಾರ ಸಂಸ್ಥೆಯ (ಐಬಿ) ಮಾಜಿ ನಿರ್ದೇಶಕ ತಪನ್ ಡೇಕಾ
೪. ‘ಐಐಟಿ ಚೆನ್ನೈ’ನ ಅಧ್ಯಕ್ಷ ವಿ. ಕಾಮಕೋಟಿ
೫. ಮಾಜಿ ಶಿಕ್ಷಣ ಕಾರ್ಯದರ್ಶಿ ಅನಿತಾ ಕರ್ವಾಲ್
೬. ಲಾಜಿಸ್ಟಿಕ್ಸ್ (ಸಾರಿಗೆ, ದಾಸ್ತಾನು ಇತ್ಯಾದಿಗಳ ನಿರ್ವಹಣೆ) ತಜ್ಞ ಅಮೃತ್ ಲಾಲ್ ಮೀನಾ
ಈ ಸಮಿತಿಯು ಮುಂಬರುವ ಪರೀಕ್ಷೆಗಳನ್ನು ಸುರಕ್ಷಿತಗೊಳಿಸಲು ತುರ್ತು ಕ್ರಮಗಳ ಕುರಿತು ಶಿಫಾರಸುಗಳನ್ನು ಸಲ್ಲಿಸಲಿದೆ. ಭಾರತದ ರಾಷ್ಟ್ರೀಯ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುರಕ್ಷಿತ ಹಾಗೂ ‘ಪ್ರಶ್ನೆಪತ್ರಿಕೆ ಸೋರಿಕೆ’ ಮುಕ್ತವಾಗಿ ಮಾಡಲು ಅದರಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದು ಈ ಸಮಿತಿಯ ಪ್ರಮುಖ ಕಾರ್ಯವಾಗಿರುತ್ತದೆ.
ಅಶ್ಲೀಲ ವಿಡಿಯೋ ಮೂಲಕ ೯ ಲಕ್ಷ ರೂಪಾಯಿ ಸುಲಿಗೆ ಮಾಡಿ ಕಾಲೇಜು ವಿದ್ಯಾರ್ಥಿಗೆ ವಂಚನೆ!
ಕಾಂಚೀಪುರಂ (ತಮಿಳುನಾಡು) ನಲ್ಲಿರುವ ಶ್ರೀ ಕಲ್ಯಾಣ ವರದ ದೇವಾಲಯದಲ್ಲಿ ಅರಳಿ ಮರ ನೆಟ್ಟಿದ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡ್ಗೀಳ್ !
ಆಂಧ್ರಪ್ರದೇಶ: ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ನಾಯಕ ಜೋಗಿ ರಮೇಶ್ ಅವರ ಸೊಸೆಯಿಂದ ಕೌಟುಂಬಿಕ ಹಿಂಸಾಚಾರದ ದೂರು
‘ದೌರ್ಜನ್ಯಗಳಿಲ್ಲದೆ ಗೃಹ ಇಲಾಖೆಯನ್ನು ಸುಸೂತ್ರವಾಗಿ ಹೇಗೆ ನಡೆಸಬೇಕು ಎಂಬುದನ್ನು ಅಮಿತ್ ಶಹಾ ಅವರು ಕರ್ನಾಟಕದಿಂದ ಕಲಿಯಬೇಕು’!
ಕಾಕ್ರೋಚ್ ಜನತಾ ಪಕ್ಷದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ‘ಇ-೨೦ ಜನತಾ ಪಕ್ಷ’ದ ಸ್ಥಾಪನೆ
ಕಾಕ್ರೋಚ್ ಜನತಾ ಪಕ್ಷದಿಂದ ಪಂಚತಾರಾ ಹೋಟೆಲ್ ನಲ್ಲಿ ನೃತ್ಯ-ಗಾಯನದೊಂದಿಗೆ ಔತಣಕೂಟ!