೨೯೭ ಪ್ರಾಚೀನ ಭಾರತೀಯ ವಸ್ತುಗಳನ್ನು ಹಿಂದಿರುಗಿಸಿದ ಅಮೇರಿಕಾ

ಪ್ರಧಾನಮಂತ್ರಿ ಮೋದಿ ಅವರ ಅಮೇರಿಕಾ ಪ್ರವಾಸ

ವಾಷಿಂಗ್ಟನ್ (ಅಮೇರಿಕಾ) – ಪ್ರಧಾನಮಂತ್ರಿ ನರೇಂದ್ರ ಮೋದಿ ಈಗ ಅಮೇರಿಕಾ ಪ್ರವಾಸದಲ್ಲಿದ್ದು ಭಾರತೀಯ ಸಂಸ್ಕೃತಿಗೆ ಸಂಬಂಧಪಟ್ಟ ೨೯೭ ಪ್ರಾಚೀನ ವಸ್ತುಗಳನ್ನು ಅಮೇರಿಕಾ ಹಿಂತಿರುಗಿಸಿದೆ. ಈ ವಸ್ತುಗಳು ಭಾರತದಿಂದ ಕಳ್ಳ ಸಾಗಾಣಿಕೆಯ ಮೂಲಕ ಹೊರಗೆ ಹೋಗಿದ್ದವು. ಮೋದಿ ಪ್ರಧಾನಮಂತ್ರಿ ಆದಾಗಿನಿಂದ ಇಲ್ಲಿಯವರೆಗೆ ಭಾರತವು ತನ್ನ ೬೪೦ ಪ್ರಾಚೀನ ವಸ್ತುಗಳನ್ನು ಹಿಂಪಡೆದಿದೆ.

೨೦೨೧ ರಲ್ಲಿ ಪ್ರಧಾನಮಂತ್ರಿ ಮೋದಿ ಅಮೇರಿಕಾಕ್ಕೆ ಹೋಗಿದ್ದಾಗ ೧೫೭ ವಸ್ತುಗಳನ್ನು ಹಿಂಪಡೆದಿದ್ದರು. ಅದರಲ್ಲಿ ೧೨ ನೆಯ ಶತಮಾನದಲ್ಲಿನ ನಟರಾಜನ ಮೂರ್ತಿ ಕೂಡ ಇತ್ತು. ಅದರ ನಂತರ ೨೦೨೩ ರಲ್ಲಿ ಪ್ರಧಾನಮಂತ್ರಿ ಮೋದಿಯವರ ಪ್ರವಾಸದ ನಂತರ ಅಮೇರಿಕಾ ೧೦೫ ವಸ್ತುಗಳನ್ನು ಭಾರತಕ್ಕೆ ಹಿಂತಿರುಗಿಸಿತ್ತು. ಈ ರೀತಿ ಇಲ್ಲಿಯವರೆಗೆ ಅಮೇರಿಕಾ ಒಟ್ಟು ೫೫೯ ಪ್ರಾಚೀನ ಮತ್ತು ಅಮೂಲ್ಯವಾದ ವಸ್ತುಗಳನ್ನು ಭಾರತಕ್ಕೆ ಹಿಂತಿರುಗಿಸಿದೆ. ಅಮೇರಿಕಾ ಅಷ್ಟೇ ಅಲ್ಲ, ಬ್ರಿಟನ್ ೧೬ ವಸ್ತುಗಳು ಮತ್ತು ಆಸ್ಟ್ರೇಲಿಯಾ ೧೪ ಕಲಾ ಕೃತಿಗಳನ್ನು ಹಿಂತಿರುಗಿಸಿದೆ. ಪ್ರಧಾನಮಂತ್ರಿ ಮೋದಿ ಅವರು ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡುತ್ತಾ, ಅಮೇರಿಕಾದ ಅಧ್ಯಕ್ಷ ಜೋ ಬೈಡನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಕಳ್ಳ ಸಾಗಾಣಿಕೆಯ ವಿರುದ್ಧದ ಹೋರಾಟ ಇನ್ನಷ್ಟು ತೀವ್ರವಾಗಲಿದೆ ಎಂದು ಕೂಡ ಅವರು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಭಾರತದಲ್ಲಿನ ಪ್ರಾಚೀನ ಮೂರ್ತಿಗಳು ಮತ್ತು ವಸ್ತುಗಳ ಕಳ್ಳ ಸಾಗಾಣಿಕೆಯಾಗಿ ದೇಶದ ಹೊರಗೆ ಹೇಗೆ ಹೋಗುತ್ತವೆ ? ಪುರಾತತ್ವ ಇಲಾಖೆ ನಿದ್ರಿಸುತ್ತಿದೆಯೇ? ಈ ಪ್ರಾಚೀನ ವಸ್ತುಗಳನ್ನು ಕಾಪಾಡದೇ ಇರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು!