ಹಿಂದೂ ಜನಜಾಗೃತಿ ಸಮಿತಿಯ ವಿರೋಧಕ್ಕೆ ಸಿಕ್ಕ ಜಯ!

(ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಧಾರ್ಮಿ ಭಾವನೆಗೆ ನೋವನ್ನು ತರುವುದಾಗಿರದೇ ನೈಜ ಸ್ಥಿತಿ ತಿಳಿಸುವುದಾಗಿದೆ)
ಮುಂಬಯಿ – ರೈಲ್ವೆ ಟಿಕೆಟ್ ಗಳನ್ನು ಕಾಯ್ದಿರಿಸುವ ‘ಕನ್ಫರ್ಮ್ ಟಿಕೆಟ್’ ಸಂಸ್ಥೆಯ ಜಾಹೀರಾತಿನಲ್ಲಿ ಶ್ರೀ ಗಣೇಶನ ಚಿತ್ರವನ್ನು ಬಳಸಲಾಗಿತ್ತು. ಹಿಂದೂ ಜನಜಾಗೃತಿ ಸಮಿತಿಯು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಸಿದ ತೀವ್ರ ವಿರೋಧದ ನಂತರ, ಈ ಸಂಸ್ಥೆಯು ಆ ಜಾಹೀರಾತನ್ನು ಹಿಂಪಡೆದಿದೆ.
🔥 Victory for HJS Protest!
Congratulations to @HinduJagrutiOrg
Following HJS’s protest, @ConfirmTkt has removed the advertisement that insulted Shri Ganesha. 🙏
HJS now demands a public apology and assurance that Hindu deities will never again be used for commercial… pic.twitter.com/iIbXhM6bs0
— Sanatan Prabhat (@SanatanPrabhat) July 27, 2026
ಹಿಂದೂಗಳ ದೇವತೆಗಳ ಚಿತ್ರಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವುದು ಮತ್ತು ಅವರ ಶ್ರದ್ಧೆಗೆ ಧಕ್ಕೆ ತರುವಂತಹ ಜಾಹೀರಾತುಗಳನ್ನು ಯಾವುದೇ ಪರಿಸ್ಥಿತಿಯಲ್ಲೂ ಸಹಿಸಲು ಸಾಧ್ಯವಿಲ್ಲ ಎಂದು ಹಿಂದೂ ಜನಜಾಗೃತಿ ಸಮಿತಿಯು ಸ್ಪಷ್ಟಪಡಿಸಿತ್ತು. ಸಮಿತಿಯ ಕರೆಯ ಮೇರೆಗೆ ಅನೇಕ ಹಿಂದೂ ಸಂಘಟನೆಗಳು ಮತ್ತು ಧರ್ಮಪ್ರೇಮಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ವಿರೋಧವನ್ನು ದಾಖಲಿಸಿದ್ದರು.
@HinduJagrutiOrg तथा हिन्दुओं के संगठित विरोध के बाद Confirm Tkt ने भगवान गणेशजी का अनादर करनेवाला विज्ञापन हटाया!#हिंदू एकजुटता की #जीत,कंपनी को झुकना पडा।संगठित, शांतिपूर्ण व वैधानिक विरोध से #धर्म एवं श्रद्धा की रक्षा संभव है।यही जागरूक हिंदू समाज की वास्तविक शक्ति है।
🚩🚩 pic.twitter.com/3X7aqMcS4s— HJS_Delhi-NCR (@HJS_Delhi) July 24, 2026
ಹಿಂದೂ ಜನಜಾಗೃತಿ ಸಮಿತಿಯ ಮುಖ್ಯ ಬೇಡಿಕೆಗಳು೧. ‘ಕನ್ಫರ್ಮ್ ಟಿಕೆಟ್’ ಸಂಸ್ಥೆಯು ಈ ಜಾಹೀರಾತನ್ನು ಎಲ್ಲಾ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳಿಂದ ತಕ್ಷಣವೇ ತೆಗೆದುಹಾಕಬೇಕು. ೨. ಭವಿಷ್ಯದಲ್ಲಿ ಹಿಂದೂಗಳ ದೇವತೆಗಳ ಚಿತ್ರಗಳನ್ನು ಯಾವುದೇ ವಾಣಿಜ್ಯ ಪ್ರಚಾರಕ್ಕಾಗಿ ಬಳಸುವುದಿಲ್ಲ ಎಂದು ಸಾರ್ವಜನಿಕವಾಗಿ ಘೋಷಿಸಬೇಕು. ೩. ಸಂಸ್ಥೆಯು ಹಿಂದೂ ಸಮಾಜದ ಧಾರ್ಮಿಕ ಭಾವನೆಗಳನ್ನು ಗೌರವಿಸಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. |
ಶಾಂತಿಯುತವಾಗಿ ಪ್ರತಿಭಟನೆ; ನಾಗರಿಕರಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕು! – ಸುಪ್ರೀಂ ಕೋರ್ಟ್
ಅಶ್ಲೀಲ ವಿಡಿಯೋ ಮೂಲಕ ೯ ಲಕ್ಷ ರೂಪಾಯಿ ಸುಲಿಗೆ ಮಾಡಿ ಕಾಲೇಜು ವಿದ್ಯಾರ್ಥಿಗೆ ವಂಚನೆ!
ಕಾಂಚೀಪುರಂ (ತಮಿಳುನಾಡು) ನಲ್ಲಿರುವ ಶ್ರೀ ಕಲ್ಯಾಣ ವರದ ದೇವಾಲಯದಲ್ಲಿ ಅರಳಿ ಮರ ನೆಟ್ಟಿದ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡ್ಗೀಳ್ !
ಆಂಧ್ರಪ್ರದೇಶ: ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ನಾಯಕ ಜೋಗಿ ರಮೇಶ್ ಅವರ ಸೊಸೆಯಿಂದ ಕೌಟುಂಬಿಕ ಹಿಂಸಾಚಾರದ ದೂರು
‘ದೌರ್ಜನ್ಯಗಳಿಲ್ಲದೆ ಗೃಹ ಇಲಾಖೆಯನ್ನು ಸುಸೂತ್ರವಾಗಿ ಹೇಗೆ ನಡೆಸಬೇಕು ಎಂಬುದನ್ನು ಅಮಿತ್ ಶಹಾ ಅವರು ಕರ್ನಾಟಕದಿಂದ ಕಲಿಯಬೇಕು’!
ಕಾಕ್ರೋಚ್ ಜನತಾ ಪಕ್ಷದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ‘ಇ-೨೦ ಜನತಾ ಪಕ್ಷ’ದ ಸ್ಥಾಪನೆ