ಪ. ಪೂ. ಸರಸಂಘಚಾಲಕ ಮೋಹನ್ ಜಿ ಭಾಗವತ್ ಅವರ ಹೇಳಿಕೆ
(ಜೆನ್-ಝೀ ಎಂದರೆ ೧೯೯೭ ರಿಂದ ೨೦೧೧ ರ ನಡುವೆ ಜನಿಸಿದ ಪೀಳಿಗೆ. ಪ್ರಸ್ತುತ ಈ ಪೀಳಿಗೆಯ ವಯಸ್ಸು ೧೫ ರಿಂದ ೨೯ ವರ್ಷಗಳು.)

ಭಾಗ್ಯನಗರ (ತೆಲಂಗಾಣ) – “ಜೆನ್-ಝೀ ಪೀಳಿಗೆಯವರು ಒಳ್ಳೆಯವರು. ಅವರು ಅನುಕರಣಾಪ್ರಿಯರು ಮತ್ತು ಭಾವುಕರು. ಅವರು ಶಾಂತ ಮನಸ್ಸಿನಿಂದ ಯೋಚಿಸುವುದಿಲ್ಲ. ತಮ್ಮ ಮುಂದಿರುವ ಜನರು ಪ್ರಾಮಾಣಿಕರು ಎಂದು ಅನಿಸಿದರೆ, ಅವರು ತಕ್ಷಣವೇ ಪ್ರಭಾವಿತರಾಗುತ್ತಾರೆ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪ. ಪೂ. ಸರಸಂಘಚಾಲಕ ಮೋಹನ್ ಜಿ ಭಾಗವತ್ ಅವರು ಇಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಹೇಳಿದರು.
‘ಎಲ್.ಜಿ.ಬಿ.ಟಿ.ಕ್ಯೂ.’ (LGBTQ) ಸಮುದಾಯದ ಬಗ್ಗೆ ಸಹಾನುಭೂತಿ ಇರಲಿ! – ಪ.ಪೂ. ಸರಸಂಘಚಾಲಕ
ಈ ಸಂದರ್ಭದಲ್ಲಿ ಪ.ಪೂ. ಸರಸಂಘಚಾಲಕರು ‘ಎಲ್.ಜಿ.ಬಿ.ಟಿ.ಕ್ಯೂ.’ ಸಮುದಾಯದ (ಸಮಲಿಂಗಿ, ದ್ವಿಲಿಂಗಿ ಹಾಗೂ ಲಿಂಗ ಪರಿವರ್ತನೆ ಮಾಡಿಕೊಂಡ ಜನರ) ಬಗ್ಗೆಯೂ ಮಾತನಾಡಿದರು. ಅವರು, “ಎಲ್.ಜಿ.ಬಿ.ಟಿ.ಕ್ಯೂ. ಜನರ ಬಗ್ಗೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ, ಸ್ವತಃ ಅವರೂ ಸಹ ಈ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ. ಅವರು ಹಾಗೆಯೇ ಜನಿಸಿದ್ದಾರೆ. ಕೆಲವರು ಮನಸ್ಥಿತಿಯಿಂದಾಗಿ ನಂತರ ಹಾಗಾಗಿದ್ದಾರೆ, ಇನ್ನು ಕೆಲವರು ದೈಹಿಕ ಆಕರ್ಷಣೆಯಿಂದಾಗಿ ಹಾಗಾಗಿದ್ದಾರೆ. ಅವರೂ ಸಹ ಮನುಷ್ಯರು. ಅವರಿಗೂ ಜೀವಿಸುವ ಹಕ್ಕಿದೆ. ಸಮಾಜದಲ್ಲಿ ಅವರಿಗೂ ಒಂದು ವ್ಯವಸ್ಥೆಯಿದೆ. ಅವರನ್ನು ಕೀಳರಿಮೆಯಿಂದ ನೋಡಬೇಡಿ. ಶಿಖಂಡಿ ಒಬ್ಬ ರಾಜನಾಗಿದ್ದ. ಅವನು ಎಲ್ಲ ವೀರರೊಂದಿಗೆ ಯುದ್ಧಭೂಮಿಯಲ್ಲಿ ಹೋರಾಡಲು ಹೋಗಿದ್ದ. ಆದ್ದರಿಂದ ನಮ್ಮಲ್ಲಿ ಅದಕ್ಕೊಂದು ವ್ಯವಸ್ಥೆಯಿತ್ತು. ಇಂತಹ ವಿಷಯಗಳ ಮೇಲೆ ಅನಗತ್ಯವಾಗಿ ಗೊಂದಲ ಸೃಷ್ಟಿಸದೆ ಶಾಂತವಾಗಿ ಅವರಿಗಾಗಿ ಒಂದು ವ್ಯವಸ್ಥೆಯಾಗಬೇಕು, ಇದರಿಂದ ಸಮಾಜಕ್ಕೆ ಅವರ ಮೇಲಿರುವ ಸಹಾನುಭೂತಿ ಉಳಿಯುತ್ತದೆ” ಎಂದು ಹೇಳಿದರು.
ಅಶ್ಲೀಲ ವಿಡಿಯೋ ಮೂಲಕ ೯ ಲಕ್ಷ ರೂಪಾಯಿ ಸುಲಿಗೆ ಮಾಡಿ ಕಾಲೇಜು ವಿದ್ಯಾರ್ಥಿಗೆ ವಂಚನೆ!
ಕಾಂಚೀಪುರಂ (ತಮಿಳುನಾಡು) ನಲ್ಲಿರುವ ಶ್ರೀ ಕಲ್ಯಾಣ ವರದ ದೇವಾಲಯದಲ್ಲಿ ಅರಳಿ ಮರ ನೆಟ್ಟಿದ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡ್ಗೀಳ್ !
ಆಂಧ್ರಪ್ರದೇಶ: ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ನಾಯಕ ಜೋಗಿ ರಮೇಶ್ ಅವರ ಸೊಸೆಯಿಂದ ಕೌಟುಂಬಿಕ ಹಿಂಸಾಚಾರದ ದೂರು
‘ದೌರ್ಜನ್ಯಗಳಿಲ್ಲದೆ ಗೃಹ ಇಲಾಖೆಯನ್ನು ಸುಸೂತ್ರವಾಗಿ ಹೇಗೆ ನಡೆಸಬೇಕು ಎಂಬುದನ್ನು ಅಮಿತ್ ಶಹಾ ಅವರು ಕರ್ನಾಟಕದಿಂದ ಕಲಿಯಬೇಕು’!
ಕಾಕ್ರೋಚ್ ಜನತಾ ಪಕ್ಷದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ‘ಇ-೨೦ ಜನತಾ ಪಕ್ಷ’ದ ಸ್ಥಾಪನೆ
ಕಾಕ್ರೋಚ್ ಜನತಾ ಪಕ್ಷದಿಂದ ಪಂಚತಾರಾ ಹೋಟೆಲ್ ನಲ್ಲಿ ನೃತ್ಯ-ಗಾಯನದೊಂದಿಗೆ ಔತಣಕೂಟ!