ನಮ್ಮ ಬಗ್ಗೆ

ವಿಶ್ವದಾದ್ಯಂತ ತಲುಪುತ್ತಿರುವ ‘ಸನಾತನ ಪ್ರಭಾತ’ ಮಾಧ್ಯಮ ಸಮೂಹದ ಪ್ರೇರಣೆ !

ಸಂಸ್ಥಾಪಕ ಸಂಪಾದಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರು ಏಪ್ರಿಲ್ ೧೯೯೮ ರಲ್ಲಿ ‘ಸನಾತನ ಪ್ರಭಾತ’ದ ಸಸಿಯನ್ನು ನೆಟ್ಟರು. ಈಶ್ವರನ ಕೃಪೆಯಿಂದ ಇದರ ವೇಗದ ವಿಸ್ತರಣೆಯಾಗುತ್ತಿದ್ದು, ಇಂದು ಸನಾತನ ಪ್ರಭಾತದ ತೇಜಸ್ವಿ ವಿಚಾರಗಳು ವಿಶ್ವದಾದ್ಯಂತ ಲಕ್ಷಾಂತರ ಹಿಂದೂಗಳ ಮನಸ್ಸಿನಲ್ಲಿ ಧರ್ಮ ಮತ್ತು ರಾಷ್ಟ್ರ ತೇಜಸ್ಸಿನ ವಟವೃಕ್ಷವನ್ನೇ ನಿರ್ಮಿಸಿವೆ. ಸನಾತನ ಪ್ರಭಾತದ ವಿವಿಧ ಭಾಷೆಗಳ ನಿಯತಕಾಲಿಕೆಗಳು ಭಾರತದ ೨೨ ರಾಜ್ಯಗಳಲ್ಲಿ ತಲುಪುತ್ತಿವೆ, ಹಾಗೂ ಆನ್‌ಲೈನ್ ಮೂಲಕ ವಿಶ್ವದಾದ್ಯಂತ ಧರ್ಮ ಮತ್ತು ರಾಷ್ಟ್ರ ಸಂಘಟನೆಯ ಪ್ರಸಾರವಾಗುತ್ತಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

೧೯೯೮ ರಿಂದ ಬಿಸಿಲು-ಮಳೆ, ಧರ್ಮದ್ರೋಹಿ ವಿಚಾರವಾದಿಗಳು ಮತ್ತು ರಾಜಕಾರಣಿಗಳ ವಿರೋಧವನ್ನು ಲೆಕ್ಕಿಸದೆ ಸನಾತನ ಪ್ರಭಾತ ಪ್ರತಿದಿನ ವರ್ಷದ ೩೬೫ ದಿನಗಳು ನಿರಂತರವಾಗಿ ನಡೆಯುತ್ತಿದೆ. ನಾವು ಮರಾಠಿ ದಿನಪತ್ರಿಕೆ (೪ ಆವೃತ್ತಿಗಳು), ಮರಾಠಿ ಮತ್ತು ಕನ್ನಡ ವಾರಪತ್ರಿಕೆ, ಹಾಗೂ ಹಿಂದಿ ಮತ್ತು ಇಂಗ್ಲಿಷ್ ಪಾಕ್ಷಿಕವನ್ನು ಪ್ರಕಟಿಸುತ್ತೇವೆ. ಇದರೊಂದಿಗೆ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರತಿದಿನ ಆನ್‌ಲೈನ್‌ನಲ್ಲಿ ದೇಶ-ವಿದೇಶಗಳ ಪ್ರಮುಖ ಘಟನಾವಳಿಗಳನ್ನು ಪ್ರಕಟಿಸಲಾಗುತ್ತದೆ. ‘ಎಕ್ಸ್’, ‘ಟೆಲಿಗ್ರಾಂ’, ‘ಯೂಟ್ಯೂಬ್’ ಮುಂತಾದ ಸಾಮಾಜಿಕ ಮಾಧ್ಯಮಗಳ ಮೂಲಕವೂ ಲಕ್ಷಾಂತರ ಜನರಿಗೆ ಹಿಂದೂ ರಾಷ್ಟ್ರದ ತೇಜಸ್ವಿ ವಿಚಾರವನ್ನು ತಲುಪಿಸಲು ನಾವು ಪ್ರತಿದಿನ ಕ್ರಿಯಾಶೀಲರಾಗಿದ್ದೇವೆ.

ನಮ್ಮ ಉದ್ದೇಶ !

  • ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವುದು ಮತ್ತು ಧರ್ಮಕ್ಕಾಗಿ ಸಂಘಟಿತರಾಗಲು ದಾರಿ ತೋರಿಸುವುದು
  • ರಾಷ್ಟ್ರ, ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು
  • ಧರ್ಮದ್ರೋಹಿ ವಿಚಾರಗಳನ್ನು ಖಂಡಿಸುವುದು
  • ರಾಷ್ಟ್ರ-ಧರ್ಮ ರಕ್ಷಣೆಯ ನ್ಯಾಯಾಂಗ ಮಾರ್ಗಗಳನ್ನು ತಿಳಿಸುವುದು
  • ‘ಹಿಂದೂ ರಾಷ್ಟ್ರ ಸ್ಥಾಪನೆ’ಗೆ ದಾರಿ ತೋರಿಸುವುದು
  • ಹಿಂದೂಗಳ ‘ಇಕೋಸಿಸ್ಟಮ್’ ಸಿದ್ಧಪಡಿಸಲು ಪ್ರಯತ್ನಿಸುವುದು

‘ಸನಾತನ ಪ್ರಭಾತ’ದ ಏಕೈಕ ಅನನ್ಯ ವೈಶಿಷ್ಟ್ಯಗಳು

  • ಧರ್ಮಜಾಗೃತಿ, ಹಿಂದೂ ಸಂಘಟನೆ ಮತ್ತು ರಾಷ್ಟ್ರರಕ್ಷಣೆಗಾಗಿ ಸಾಧನೆ ಎಂದು ಆರ್ಥಿಕ ನಷ್ಟ ಅನುಭವಿಸಿದರೂ ನಡೆಸಲ್ಪಡುತ್ತಿರುವ ಏಕೈಕ ಮಾಧ್ಯಮ ಸಮೂಹ !
  • ಹಿಂದೂ ಸಮಾಜದ ಹಿತದ ವಾಸ್ತವ, ವಸ್ತುನಿಷ್ಠ ಮತ್ತು ಆದರ್ಶ ಪತ್ರಿಕೋದ್ಯಮ !
  • ಸುದ್ದಿಯೊಂದಿಗೆ ಸೂಕ್ತ ದೃಷ್ಟಿಕೋನ ನೀಡಿ ಓದುಗರನ್ನು ಕ್ರಿಯಾಶೀಲರನ್ನಾಗಿ ಮಾಡುವ ಸುದ್ದಿಗಳು ಮತ್ತು ಲೇಖನಗಳು !
  • ರಾಷ್ಟ್ರಪ್ರೇಮ, ಧರ್ಮಾಚರಣೆ ಮತ್ತು ಸಾಧನೆಯ ಸಂಸ್ಕಾರ ನೀಡುವ ಬರವಣಿಗೆ (ವಿಷಯ) !
  • ವಿತರಕರು, ವರದಿಗಾರರು, ಸಂಪಾದಕರು ಮುಂತಾದ ಎಲ್ಲರೂ ವೇತನವಿಲ್ಲದೆ ಸೇವೆಯಲ್ಲಿದ್ದಾರೆ !
  • ವರದಿಗಾರರು ಕೇವಲ ಸುದ್ದಿ ಕಳುಹಿಸುವವರಲ್ಲ, ಬದಲಿಗೆ ಧರ್ಮರಕ್ಷಣೆಗಾಗಿ ಸ್ವತಃ ಕ್ರಿಯಾಶೀಲರು !
  • ಸಂಪಾದಕ ಮಂಡಳಿ, ವರದಿಗಾರರು, ಅನುವಾದಕರು, ಅಪ್‌ಲೋಡರ್, ಸೋಶಿಯಲ್ ಮೀಡಿಯಾ ಪ್ರಸಾರಕರು ಮುಂತಾದ ೧೫೦ ಕ್ಕೂ ಹೆಚ್ಚು ಮಂದಿ ಸೇವಾರೂಪದಲ್ಲಿ ಪ್ರತಿದಿನ ಕಾರ್ಯನಿರತರಾಗಿದ್ದಾರೆ !

ನಮ್ಮ ಧೇಯ

  • ಸಮಾಜ, ರಾಷ್ಟ್ರ ಮತ್ತು ಧರ್ಮದ ಉತ್ಥಾನಕ್ಕಾಗಿ ಜಾತ್ಯತೀತ ವ್ಯವಸ್ಥೆಯಲ್ಲಿ ಪರಿವರ್ತನೆ ಮಾಡಲು ಹಿಂದೂ ಸಮಾಜವನ್ನು ಪ್ರೇರೇಪಿಸುವುದು
  • ಹಿಂದೂ ಸಂಘಟನೆ ಮಾಡಿ ಹಿಂದೂ ರಾಷ್ಟ್ರದ ಸ್ಥಾಪನೆಗೆ ಕಟಿಬದ್ಧವಾಗಿರುವುದು
  • ರೋಮರೋಮಗಳಲ್ಲಿ ಹಿಂದೂತೇಜವನ್ನು ಜಾಗೃತಗೊಳಿಸುವ ಏಕೈಕ ‘ಸನಾತನ ಪ್ರಭಾತ’ದಲ್ಲಿನ ಅಂಕಣಗಳ ವಿಷಯಗಳು
  • ರಾಷ್ಟ್ರ ಮತ್ತು ಧರ್ಮದ ರಕ್ಷಣೆಯ ಬಿರುಗಾಳಿ : ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ ಕುರಿತಾದ ಬರವಣಿಗೆ; ಪಾಶ್ಚಿಮಾತ್ಯ ದುರಾಚಾರಗಳಿಗೆ ವಿರೋಧ ಮತ್ತು ಹಿಂದೂ ಸಂಸ್ಕೃತಿಯ ರಕ್ಷಣೆ; ರಾಷ್ಟ್ರೀಯ ಭಾಷೆಗಳ ರಕ್ಷಣೆಗಾಗಿ ವೈಚಾರಿಕ ಚಳವಳಿ

ಧರ್ಮಶಿಕ್ಷಣ ಮತ್ತು ಸಾಧನೆ : ಹಬ್ಬಗಳು, ಧಾರ್ಮಿಕ ಉತ್ಸವಗಳು, ವ್ರತಗಳು ಮುಂತಾದವುಗಳ ಬಗ್ಗೆ ಧರ್ಮಶಿಕ್ಷಣ ಹಾಗೂ ಈಶ್ವರಪ್ರಾಪ್ತಿಗಾಗಿ ಸೂಕ್ತ ಸಾಧನೆ ಯಾವುದು ಮಾಡಬೇಕು ಎಂಬುದರ ಕುರಿತು ಮಾರ್ಗದರ್ಶನ !

ಸಂತರು ಮತ್ತು ಹಿಂದುತ್ವನಿಷ್ಠರಿಗೆ ಮಹತ್ವ : ರಾಜಕಾರಣಿಗಳಿಗಲ್ಲ, ಬದಲಾಗಿ ಮಾನವಜಾತಿಗೆ ಚಿರಂತನ ಆನಂದ ನೀಡುವ ಸಂತರು ಹಾಗೂ ಧರ್ಮರಕ್ಷಣೆ ಮಾಡುವ ಹಿಂದುತ್ವನಿಷ್ಠರಿಗೆ ಹೆಚ್ಚಿನ ಮಹತ್ವ !

ವ್ಯಂಗ್ಯಚಿತ್ರವಲ್ಲ, ಬೋಧಚಿತ್ರಗಳ ಅಂಕಣ : ಸಮರ್ಥ


‘ಸನಾತನ ಪ್ರಭಾತ’ವೇ ಏಕೆ ? (Why Sanatan Prabhat ?)

‘ವಿಕಸಿತ ಭಾರತ’ ನಿರ್ಮಾಣಕ್ಕೆ ಕೊಡುಗೆ ನೀಡಲು ನಮ್ಮ ಓದುಗರಾಗಿ!

ಪ್ರಧಾನಮಂತ್ರಿ ಮೋದಿ ಅವರು ಭಾರತದ ಜನರ ಮುಂದೆ ೨೦೪೭ ರ ವೇಳೆಗೆ ‘ವಿಕಸಿತ ಭಾರತ’ ನಿರ್ಮಿಸುವ ಗುರಿಯನ್ನು ಇಟ್ಟಿದ್ದಾರೆ. ಸಮಾಜದಲ್ಲಿ ಪ್ರಸ್ತುತ ಇರುವ ಭ್ರಷ್ಟಾಚಾರ, ಅನೈತಿಕತೆ, ದಬ್ಬಾಳಿಕೆ ಮತ್ತು ಸ್ವಾರ್ಥದ ವಾತಾವರಣದಲ್ಲಿ ಇದು ನಿಜವಾಗಿಯೂ ಸಾಧ್ಯವೇ ?

ಸ್ವಾಮಿ ವಿವೇಕಾನಂದರು ಹೇಳಿದ್ದರು: “ಎಲ್ಲಿಯವರೆಗೆ ಲಕ್ಷಾಂತರ ಜನರು ಹಸಿವು ಮತ್ತು ಅಜ್ಞಾನದಲ್ಲಿ ಜೀವಿಸುತ್ತಿದ್ದಾರೋ, ಅಲ್ಲಿಯವರೆಗೆ ಅವರ ಹಣದಿಂದ ಶಿಕ್ಷಣ ಪಡೆದರೂ ಅವರ ಬಗ್ಗೆ ಸ್ವಲ್ಪವೂ ಗಮನ ಹರಿಸದ ಪ್ರತಿಯೊಬ್ಬ ವ್ಯಕ್ತಿಯನ್ನು ನಾನು ದೇಶದ್ರೋಹಿ ಎಂದು ಪರಿಗಣಿಸುತ್ತೇನೆ. ಯಾವುದೇ ವ್ಯಕ್ತಿ ಅಥವಾ ರಾಷ್ಟ್ರವನ್ನು ಮಹಾನ್ ಮಾಡಲು ಮೂರು ತತ್ವಗಳು ಅಗತ್ಯವಾಗಿವೆ: ಒಳ್ಳೆಯತನದ ಶಕ್ತಿಯಲ್ಲಿ ನಂಬಿಕೆ, ಮನಸ್ಸಿನಲ್ಲಿ ಅಸೂಯೆ ಅಥವಾ ಸಂಶಯವನ್ನು ಇಟ್ಟುಕೊಳ್ಳದಿರುವುದು ಮತ್ತು ಒಳ್ಳೆಯವರಾಗಲು ಹಾಗೂ ಒಳ್ಳೆಯ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಿರುವ ಎಲ್ಲರಿಗೂ ಸಹಾಯ ಮಾಡುವುದು.”

ಸಂಕ್ಷೇಪವಾಗಿ ಹೇಳುವುದಾದರೆ, ಸಮಾಜವು ವ್ಯಾಪಕ ದೃಷ್ಟಿಕೋನವನ್ನು ಸ್ವೀಕರಿಸುವುದು ಕಾಲದ ಅಗತ್ಯವಾಗಿದೆ. ನಿಸ್ವಾರ್ಥ ಭಾವನೆಯಿಂದ ರಾಷ್ಟ್ರಹಿತಕ್ಕಾಗಿ ಕೆಲಸ ಮಾಡುವುದು ಅಗತ್ಯವಾಗಿದೆ. ರಾಷ್ಟ್ರದ ಬಗ್ಗೆ ಸಮರ್ಪಣಾ ಭಾವನೆಯನ್ನು ಬೆಳೆಸಿಕೊಳ್ಳಲು ‘ಸನಾತನ ಪ್ರಭಾತ’ ನಿಮಗೆ ಸಹಾಯ ಮಾಡುತ್ತದೆ. ‘ಸನಾತನ ಪ್ರಭಾತ’ವೇ ಏಕೆ ? ನಿಮಗೆ ‘ವಿಕಸಿತ ಭಾರತ’ದ ಕನಸನ್ನು ನನಸು ಮಾಡಬೇಕಿದ್ದರೆ, ಇಂದೇ ‘ಸನಾತನ ಪ್ರಭಾತ’ದ ಓದುಗರಾಗಿ !

ಭಾರತದ ವಿಕಾಸ ಕೇವಲ ಆರ್ಥಿಕವಾಗಿ ಮಾತ್ರವಲ್ಲದೆ, ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಕೋನದಿಂದಲೂ ಆಗಬೇಕು. ಕಳೆದ ೭೫ ವರ್ಷಗಳಲ್ಲಿ ನಾವು ನಮ್ಮ ಆಧ್ಯಾತ್ಮಿಕ ವಿಚಾರಧಾರೆ, ದೈವಿ ಮೌಲ್ಯಗಳು ಮತ್ತು ಹಿಂದೂ ತತ್ತ್ವಜ್ಞಾನವನ್ನು ಮರೆತಿದ್ದೇವೆ. ಈ ಜ್ಞಾನದ ಪುನರುಜ್ಜೀವನವೇ ನಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಣಾಮಕಾರಿ ಉಪಾಯವಾಗಿದೆ. ಇದನ್ನು ಹೇಗೆ ಸಾಧಿಸುವುದು ಎಂಬುದರ ಮಾರ್ಗದರ್ಶನವನ್ನು ‘ಸನಾತನ ಪ್ರಭಾತ’ ನಿಮಗೆ ಮಾಡುತ್ತದೆ.

ನಮ್ಮ ಎಲ್ಲಾ ಪತ್ರಕರ್ತರು, ಸಂಪಾದಕರು, ವಿತರಕರು, ಜಾಹೀರಾತು ಪ್ರತಿನಿಧಿಗಳು ಆಧ್ಯಾತ್ಮಿಕ ಸಾಧಕರಾಗಿದ್ದಾರೆ. ೧೯೯೮ ರಿಂದ ಅವರು ಯಾವುದೇ ಆರ್ಥಿಕ ಲಾಭದ ನಿರೀಕ್ಷೆಯಿಲ್ಲದೆ ರಾಷ್ಟ್ರದ ಸೇವೆ ಮಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಪರಿಣಾಮವಾಗಿ, ಅವರ ಬರವಣಿಗೆಯಲ್ಲಿ ಮತ್ತು ಸೇವಾಕಾರ್ಯದಲ್ಲಿ ರಾಷ್ಟ್ರೋನ್ನತಿಯ ಭಾವನೆಯು ತುಂಬಿ ತುಳುಕುತ್ತಿರುತ್ತದೆ. ಆದ್ದರಿಂದಲೇ ‘ಸನಾತನ ಪ್ರಭಾತ’ವು ಕೇವಲ ಓದಲು ಮಾತ್ರವಲ್ಲ; ಬದಲಿಗೆ ಅವರಂತೆಯೇ ನಿಷ್ಠಾವಂತ ರಾಷ್ಟ್ರಸೇವಕರನ್ನು ರೂಪಿಸಲು ಸಮರ್ಪಿತವಾಗಿದೆ. ಭಾರತದ ಈ ಅದ್ವಿತೀಯ ಮಾಧ್ಯಮ ಸಮೂಹದ ಭಾಗವಾಗಿ !

ಕರೆ !

  • ‘ಸನಾತನ ಪ್ರಭಾತ’ಕ್ಕೆ ಸ್ಥಳೀಯ ಸುದ್ದಿಗಳನ್ನು ತಿಳಿಸಿ !
  • ‘ಸನಾತನ ಪ್ರಭಾತ’ವು ಹಿಂದೂಗಳ ವೇದಿಕೆಯಾಗಿದೆ. ಹಿಂದೂಹಿತವನ್ನು ಸಾಧಿಸುವ, ಹಾಗೂ ರಾಷ್ಟ್ರ ಮತ್ತು ಧರ್ಮಜಾಗೃತಿ ಮೂಡಿಸುವ ನಿಮ್ಮ ಪರಿಸರದ ಸುದ್ದಿಗಳನ್ನು ‘ಸನಾತನ ಪ್ರಭಾತ’ಕ್ಕೆ ತಪ್ಪದೇ ತಿಳಿಸಿ !

‘ಸನಾತನ ಪ್ರಭಾತ’ಕ್ಕೆ ಜಾಹೀರಾತು ನೀಡುವುದು ಧರ್ಮದಾನವೇ ಸರಿ !

ಸಂತರಿಗೆ, ಹಾಗೂ ರಾಷ್ಟ್ರ ಮತ್ತು ಧರ್ಮ ಕಾರ್ಯ ಮಾಡುವವರಿಗೆ ಅರ್ಪಣೆ ನೀಡುವುದು ಧರ್ಮಕಾರ್ಯದಲ್ಲಿನ ಭಾಗವಹಿಸುವಿಕೆಯೇ ಆಗಿರುತ್ತದೆ. ‘ಸನಾತನ ಪ್ರಭಾತ’ಕ್ಕೆ ನಿಯಮಿತವಾಗಿ ಜಾಹೀರಾತು ನೀಡುವುದು ಸಹ ಧರ್ಮದಾನವೇ ಆಗಿದೆ !

‘ಸನಾತನ ಪ್ರಭಾತ’ವನ್ನು ಪ್ರಾಯೋಜಿಸುವುದು ಧರ್ಮಪ್ರಸಾರವೇ ಸರಿ !

ಸಂಬಂಧಿಕರು, ಮಿತ್ರರು, ಪರಿಚಿತ ಹಿಂದುತ್ವನಿಷ್ಠರು, ವಾಚನಾಲಯಗಳು, ಸಾರ್ವಜನಿಕ ಮಂಡಳಿಗಳು, ದೇವಾಲಯಗಳು ಮುಂತಾದವರಿಗೆ ‘ಸನಾತನ ಪ್ರಭಾತ’ದ ಬಗ್ಗೆ ಮಾಹಿತಿ ನೀಡಿ ಮತ್ತು ಅವರಿಗಾಗಿ ಸಂಚಿಕೆಗಳ ಪ್ರಾಯೋಜಕರಾಗಿ !

‘ಸನಾತನ ಪ್ರಭಾತ’ದ ಬೋಧನೆಯ ಸಾರ

‘ಬ್ರಾಹ್ಮತೇಜ’ ಮತ್ತು ‘ಕ್ಷಾತ್ರತೇಜ’ !

ಬ್ರಾಹ್ಮತೇಜದಿಂದಾಗಿ ಹಿಂದೂ ಸಮಾಜವು ನೀತಿವಂತ, ಧರ್ಮನಿಷ್ಠ ಮತ್ತು ಆತ್ಮಬಲಸಂಪನ್ನವಾಗುತ್ತದೆ, ಹಾಗೂ ಕ್ಷಾತ್ರತೇಜದಿಂದಾಗಿ ಹಿಂದೂ ಸಮಾಜದ ಮೇಲಿನ ಅನ್ಯಾಯ ಮತ್ತು ರಾಷ್ಟ್ರವನ್ನು ಅಧೋಗತಿಗೆ ಕೊಂಡೊಯ್ಯುವ ವ್ಯವಸ್ಥೆಯ ವಿರುದ್ಧ ವೈಧ ಮಾರ್ಗದಲ್ಲಿ ಹೋರಾಡುವ ಬಲ ಸಿಗುತ್ತದೆ. ‘ಬ್ರಾಹ್ಮತೇಜ’ ಮತ್ತು ‘ಕ್ಷಾತ್ರತೇಜ’ ‘ಸನಾತನ ಪ್ರಭಾತ’ದ ಬೋಧನೆಯ ಸಾರ ಹಾಗೂ ‘ಧರ್ಮಾಧಾರಿತ ಹಿಂದೂ ರಾಷ್ಟ್ರ ಸ್ಥಾಪನೆ’ಯ ಅಡಿಪಾಯವಾಗಿದೆ. – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಸಂಸ್ಥಾಪಕ-ಸಂಪಾದಕ, ಸನಾತನ ಪ್ರಭಾತ ಮಾಧ್ಯಮ ಸಮೂಹ