Lebanon Pager Explosion : ಲೇಬಿನಾನ್ ಪೇಜರ್ ಸ್ಪೋಟದ ಪ್ರಕರಣದಲ್ಲಿ ಭಾರತೀಯ ಮೂಲದ ರಿನ್ಸನ್ ಜೋಸ್ ನ ಹೆಸರು ಚರ್ಚೆಯಲ್ಲಿ !

ಲೇಬಿನಾನ್ ಗೆ ಜೋಸ್ ನ ಕಂಪನಿಯಿಂದ ಪೇಜರ್ಸ್ ಮಾರಾಟ !

ನವ ದೆಹಲಿ – ಲೇಬಿನಾನ್ ನಲ್ಲಿ ಪೇಜರದ ಸ್ಪೋಟದ ಪ್ರಕರಣದಲ್ಲಿ ಓರ್ವ ಭಾರತೀಯ ಮೂಲದ ವ್ಯಕ್ತಿಯ ಹೆಸರು ಚರ್ಚೆಯಲ್ಲಿದೆ. ಅಂತರಾಷ್ಟ್ರೀಯ ಮಾಧ್ಯಮದಲ್ಲಿ ಬಂದಿರುವ ವಾರ್ತೆಯ ಪ್ರಕಾರ, ಕೇರಳದ ವಾಯನಾಡ್‌ನಲ್ಲಿ ಹುಟ್ಟಿ ಪ್ರಸ್ತುತ ನೋರ್ವೆಯಲ್ಲಿ ವಾಸಿಸುವ ಜೋಸ್ ಇವನು ಲೇಬಿನಾನ್ ಗೆ ಪೇಜರ್ ಪೂರೈಸುವಲ್ಲಿ ಕೈವಾಡ ಇರುವುದೆಂದು ಚರ್ಚಿಸಲಾಗುತ್ತಿದೆ. ಅವನ ಮೂಲಕ ಹಿಜಬುಲ್ಲಾದ ಭಯೋತ್ಪಾದಕರಿಗೆ ಪೇಜರ್ ಗಳು ಪೂರೈಕೆ ಆಗಿದ್ದವು. ‘ಗೋಲ್ಡ್ ಅಪೊಲೋ’ ಈ ಕಂಪನಿಯಿಂದ ತಯಾರಿಸಿರುವ ಪೇಜರ್‌ನಲ್ಲಿ ಇಸ್ರೈಲ್ ಗುಪ್ತಚರ ಸಂಘಟನೆಯಿಂದ ೩ ಗ್ರಾಮ ಸ್ಪೋಟಕ ಇಟ್ಟಿತ್ತು ಎಂದು ಆರೋಪವಿದೆ.

೧. ಜೋಸ ಇವನು ಏಪ್ರಿಲ್ ೨೨ ರಂದು ‘ನೋರ್ಟೋ ಗ್ಲೋಬಲ್ ಲಿಮಿಟೆಡ್’ ಕಂಪನಿಯನ್ನು ಸ್ಥಾಪಿಸಿದ. ಈ ಕಂಪನಿ ಬಲ್ಗೇರಿಯಾದಲ್ಲಿನ ಸೋಫಿಯಾದಲ್ಲಿದೆ. ಇದೇ ಕಂಪನಿಯ ವಿಚಾರಣೆ ಬಲ್ಗೇರಿಯಾದ ಅಂತರಾಷ್ಟ್ರೀಯ ಸುರಕ್ಷಾ ಇಲಾಖೆಯಿಂದ ನಡೆಸಲಾಗುವುದು. ಈ ಕಂಪನಿಯ ಮೂಲಕ ನೂರಾರು ಪೇಜಸ್ ಹಿಜಬುಲ್ಲಾಗೆ ಮಾರಲಾಗಿರುವುದೆಂದು ಬೆಳಕಿಗೆ ಬಂದಿದೆ.

೨. ‘ರೈಟರಸ್’ ವಾರ್ತಾ ಸಂಸ್ಥೆಯು ನೀಡಿರುವ ಸಮಾಚಾರದ ಪ್ರಕಾರ, ನೋರ್ಟೋ ಕಂಪನಿಯ ಬಲ್ಗೆರಿಯಾದಲ್ಲಿನ ಪ್ರಧಾನ ಕಚೇರಿಯ ವಿಳಾಸದಲ್ಲಿ ೨೦೦ ಕಂಪನಿಯ ನೋಂದಣಿ ಆಗಿದೆ; ಆದರೆ ಆ ಸ್ಥಳದಲ್ಲಿ ನೋರ್ಟೋ ಕಂಪನಿಯ ಯಾವುದೇ ಹೆಸರಿನ ಉಲ್ಲೇಖ ಕಾಣುತ್ತಿಲ್ಲ. ರೈಟರ್ಸ್ ಪ್ರತಿನಿಧಿಯ ಮೊಬೈಲ್ ಮೂಲಕ ಜೋಸ ಇವನನ್ನು ಸಂಪರ್ಕಿಸಿದ್ದಾಗ ಪೇಜರ್ ವ್ಯವಹಾರದ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಲಾಯಿತು; ಆದರೆ ಅವನು ಇದರ ಕುರಿತು ಯಾವುದೇ ಪ್ರತಿಕ್ರಿಯೆ ನೀಡದೆ ಮೊಬೈಲ್ ನ್ನು ಸ್ವಿಚ್ ಆಫ್ ಮಾಡಿದನು.