ಭಾರತ ಮತ್ತು ಚೀನಾ ನಡುವೆ ‘ಸ್ಯಾಂಡ್‌ವಿಚ್’ ಆಗುವುದಿಲ್ಲ ! – ಶ್ರೀಲಂಕಾದ ನೂತನ ಚುನಾಯಿತ ಅಧ್ಯಕ್ಷ ಅನುರಾ ಕುಮಾರ ದಿಸಾನಾಯಕೆ

ಶ್ರೀಲಂಕಾದ ನೂತನ ಚುನಾಯಿತ ಅಧ್ಯಕ್ಷ ಅನುರಾ ಕುಮಾರ ದಿಸಾನಾಯಕೆ ಅವರ ಹೇಳಿಕೆ

(‘ಸ್ಯಾಂಡ್‌ವಿಚ್’ ಆಗುವುದಿಲ್ಲ’ ಎಂದರೆ ಎರಡೂ ದೇಶಗಳ ಒತ್ತಡ ಸ್ವೀಕರಿಸುವುದಿಲ್ಲ.)

ಕೊಲಂಬೊ (ಶ್ರೀಲಂಕಾ) – ಶ್ರೀಲಂಕಾವು ಯಾವುದೇ ಜಾಗತಿಕ ರಾಜಕೀಯ ಯುದ್ಧದಲ್ಲಿ ಭಾಗಿಯಾಗಲು ಬಯಸುವುದಿಲ್ಲ. ನಾವು ಯಾವುದೇ ರೀತಿಯ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ ಅಥವಾ ಪ್ರಾಬಲ್ಯಕ್ಕಾಗಿ ಹೋರಾಡುವ ಯಾವುದೇ ದೇಶವನ್ನು ಬೆಂಬಲಿಸುವುದಿಲ್ಲ. ನಾವು ಭಾರತ ಮತ್ತು ಚೀನಾ ನಡುವೆ ‘ಸ್ಯಾಂಡ್‌ವಿಚ್’ ಆಗುವುದಿಲ್ಲ, ಎಂದು ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅನುರಾ ಕುಮಾರ ದಿಸಾನಾಯಕೆ ಹೇಳಿದ್ದಾರೆ. ‘ಎರಡೂ ದೇಶಗಳು ನಮ್ಮ ಉತ್ತಮ ಸ್ನೇಹಿತರು. ಭವಿಷ್ಯದಲ್ಲಿ ನಮ್ಮ ಪಾಲುದಾರಿಕೆ ಉತ್ತಮವಾಗಿ ಇರುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ಅವರು ಈ ಬಾರಿ ಸ್ಪಷ್ಟಪಡಿಸಿದರು. ‘ಮೊನೋಕಲ್’ ದಿನ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ದಿಸಾನಾಯಕೆ ಮುಂದೆ ಮಾತನಾಡಿ, ನಾವು ಯುರೋಪಿಯನ್ ಯೂನಿಯನ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳುತ್ತೇವೆ. ಶ್ರೀಲಂಕಾದ ವಿದೇಶಾಂಗ ನೀತಿ ನಿಷ್ಪಕ್ಷಪಾತವಾಗಿರುತ್ತದೆ. ನಮ್ಮ ಮೇಲೆ 28 ಲಕ್ಷ ಕೋಟಿ ರೂಪಾಯಿಗೂ ಹೆಚ್ಚ ಸಾಲವಿದೆ. ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಹೊರತರುವುದು ನನ್ನ ಆದ್ಯತೆ ಇದೆ ಎಂದೂ ಹೇಳಿದರು.