ಕಾಂಚೀಪುರಂ (ತಮಿಳುನಾಡು) ನಲ್ಲಿರುವ ಶ್ರೀ ಕಲ್ಯಾಣ ವರದ ದೇವಾಲಯದಲ್ಲಿ ಅರಳಿ ಮರ ನೆಟ್ಟಿದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡ್ಗೀಳ್ !

ಸ್ಥಳೀಯ ಭಕ್ತರು ಮತ್ತು ಅರ್ಚಕರೊಂದಿಗೆ ಅರಳಿ ಮರಕ್ಕೆ ನೀರೆರೆಯುತ್ತಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್‌

ಕಾಂಚೀಪುರಂ (ತಮಿಳುನಾಡು) – ೨೬ ಜುಲೈ ೨೦೨೬ ರಂದು ಇಲ್ಲಿನ ಬ್ರಹ್ಮದೇಶಂ ಗ್ರಾಮದಲ್ಲಿರುವ ಶ್ರೀ ಕಲ್ಯಾಣ ವರದ ದೇವಾಲಯದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗಿಳ್‌ ಅವರ ಅಮೃತ ಹಸ್ತದಿಂದ ಅರಳಿ ಗಿಡವನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಗಾಡಗಿಳ್‌ ಅವರು ಅರಳಿ ಗಿಡದ ಪೂಜೆ ಮಾಡಿ ಆರತಿ ಬೆಳಗಿದರು. ಅದಕ್ಕೂ ಮುನ್ನ ದೇವಾಲಯದ ಅರ್ಚಕರು ಶ್ರೀಚಿತ್‌ಶಕ್ತಿ (ಸೌ.) ಗಾಡಗಿಳ್‌ ಅವರಿಂದ ಈ ಪೂಜೆಯ ಸಂಕಲ್ಪ ಮಾಡಿಸಿದರು. ಶ್ರೀ ಕಲ್ಯಾಣ ವರದ ದೇವಾಲಯವು ಶ್ರೀವಿಷ್ಣುವಿನ ದೇವಾಲಯವಾಗಿದ್ದು, ಈ ಕಾರ್ಯಕ್ರಮದ ವೇಳೆ ಸ್ಥಳೀಯ ಭಕ್ತರು ಮತ್ತು ಮಹಿಳೆಯರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್‌ ಅವರ ವಂದನೀಯ ಉಪಸ್ಥಿತಿಯಲ್ಲಿ ಶ್ರೀ ವಿಷ್ಣುಸಹಸ್ರನಾಮ ಪಠಣ ಮಾಡಿದರು. ನಂತರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್‌ ಅವರು ಉಪಸ್ಥಿತರಿದ್ದವರಿಗೆ ಅರಳಿ ಮರದ ಕುರಿತು ಮಾರ್ಗದರ್ಶನ ಮಾಡಿದರು. ಕಲ್ಯಾಣ ವರದ ದೇವಾಲಯದ ಕುಂಭಾಭಿಷೇಕ ಕಾರ್ಯಕ್ರಮ ಆಗಸ್ಟ್ ೨೩ ರಂದು ನಡೆಯಲಿದ್ದು, ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್‌ ಅವರಿಗೆ ಕಾರ್ಯಕ್ರಮಕ್ಕಾಗಿ ಆಹ್ವಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಶ್ರೀ. ವಿನಾಯಕ್ ಶಾನ್‌ಭಾಗ್ ಅವರೂ ಉಪಸ್ಥಿತರಿದ್ದರು.

ಅರಳಿ ಮರ ಶ್ರೀವಿಷ್ಣುವಿನ ಸಂಕೇತ! – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗಿಳ್‌

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗಿಳ್‌ ಅವರು ಮಾತನಾಡುತ್ತಾ, ‘‘ಸ್ಥಳರೂಪಿ ಅರಳಿ ಮರವು ಶ್ರೀವಿಷ್ಣುವಿನ ಸಂಕೇತವಾಗಿದೆ. ಈ ವೃಕ್ಷದಲ್ಲಿ ಬ್ರಹ್ಮಾಂಡದ ವಿಷ್ಣುವಿನ ಚೈತನ್ಯ ಅಡಗಿದೆ. ಗರ್ಭಗುಡಿಯಲ್ಲಿರುವ ಶ್ರೀವಿಷ್ಣುವಿನ ಮೂರ್ತಿಯ ಚೈತನ್ಯವನ್ನು ಎಲ್ಲೆಡೆ ಹರಡುವ ಕೆಲಸವನ್ನು ಅರಳಿ ವೃಕ್ಷ ಮಾಡುತ್ತದೆ. ಇದರಿಂದಾಗಿ ಸ್ವಯಂಚಾಲಿತವಾಗಿ ದೇವಾಲಯದ ಆವರಣವೂ ದೇವತೆಯ ಚೈತನ್ಯದಿಂದ ಆವೃತವಾಗುತ್ತದೆ. ಅರಳಿ ಮರಕ್ಕೆ ಪ್ರಾರ್ಥನೆ ಸಲ್ಲಿಸಿದರೆ, ‘ನಿಸರ್ಗದೇವೋ ಭವ ।’ ಎಂಬಂತೆ ಗರ್ಭಗುಡಿಯಲ್ಲಿರುವ ದೇವತೆಯ ಮೂರ್ತಿಯ ಶಕ್ತಿಯ ಲಾಭ ನಮಗೆ ಸಿಗುತ್ತದೆ. ಅರಳಿ ಮರಕ್ಕೆ ಅಷ್ಟೊಂದು ಮಹತ್ವವಿದೆ. ‘ಈ ಅರಳಿ ಮರದಲ್ಲಿರುವ ಚೈತನ್ಯವು ನಮಗೆಲ್ಲರಿಗೂ ಸಿಗಲಿ’, ಎಂದು ಶ್ರೀ ಕಲ್ಯಾಣ ವರದ ಶ್ರೀ ವಿಷ್ಣುವಿನ ಚರಣಗಳಲ್ಲಿ ಪ್ರಾರ್ಥನೆ!’’ ಎಂದು ನುಡಿದರು.