ವಾಷಿಂಗ್ಟನ್ – ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಭಾರತೀಯ ರಾಯಭಾರಿ ಕಚೇರಿಯಲ್ಲಿ ಅಧಿಕಾರಿಯೊಬ್ಬರ ಶವ ಪತ್ತೆಯಾಗಿದೆ. ಭಾರತೀಯ ರಾಯಭಾರಿ ಕಚೇರಿ ಪ್ರಸ್ತುತ ಮೃತ ಅಧಿಕಾರಿಯ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದೆ. ಅಧಿಕಾರಿಗಳು, ಸಂಬಂಧಪಟ್ಟ ಅಧಿಕಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ. ಕುಟುಂಬದ ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ರಾಯಭಾರಿ ಕಚೇರಿಯು ಮೃತ ಅಧಿಕಾರಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಅಧಿಕಾರಿಯ ಮೃತದೇಹವನ್ನು ಆದಷ್ಟು ಬೇಗನೆ ಭಾರತಕ್ಕೆ ಕಳುಹಿಸಲಾಗುವುದು ಎನ್ನಲಾಗಿದೆ. ಈ ಘಟನೆಯ ಕುರಿತು ಸ್ಥಳೀಯ ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಇದು ಆತ್ಮಹತ್ಯೆ ಪ್ರಕರಣ ಇದ್ದು ಅದರ ಕೂಲಂಕುಷ ತನಿಖೆ ಮುಂದುವರೆದಿದೆ ಎಂದು ಅಲ್ಲಿನ ಪೋಲೀಸರು ಹೇಳಿದ್ದಾರೆ.
ಸನಾತನ ಪ್ರಭಾತ > Post Type > ವಾರ್ತೆಗಳು > ಅಂತರರಾಷ್ಟ್ರೀಯ > ಅಮೇರಿಕಾದಲ್ಲಿ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಯ ಶವ ಪತ್ತೆ
ಅಮೇರಿಕಾದಲ್ಲಿ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಯ ಶವ ಪತ್ತೆ
ಸಂಬಂಧಿತ ಲೇಖನಗಳು
- ಜಮ್ಮು ಕಾಶ್ಮೀರ್ : ಭಯೋತ್ಪಾದಕರು ಅಪಹರಿಸಿದ್ದ ಯೋಧನ ಶವ ಪತ್ತೆ !
- ಅಮೇರಿಕಾದಲ್ಲಿ ಕಳೆದ ೨ ದಶಕಗಳಿಂದ ಯೋಗ ಮಾಡುವವರ ಸಂಖ್ಯೆ ಶೇ. ೫೦೦ ರಷ್ಟು ಏರಿಕೆ !
- ಒಸಾಮಾ ಬಿನ್ ಲಾಡೆನ್ ನ ಮಗನಿಗೆ ಶಾಶ್ವತವಾಗಿ ನಿರ್ಬಂಧ ಹೇರಿದ ಫ್ರಾನ್ಸ್ !
- ಬಾಂಗ್ಲಾದೇಶದ ರಾಜಕೀಯ ಬದಲಾವಣೆಗಳಿಂದ ಭಾರತ ಸಂತೋಷವಾಗಿಲ್ಲ ! – ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮಹಮ್ಮದ್ ಯೂನಸ್
- ‘ಭಾರತದ ಭದ್ರತೆಗೆ ಧಕ್ಕೆಯಾಗುವಂತೆ ಏನೂ ಮಾಡುವುದಿಲ್ಲವಂತೆ !’ – ಮಾಲ್ಡೀವ್ಸ್ ರಾಷ್ಟ್ರಪತಿ ಮುಯಿಜ್ಜೂ
- ಕರಾಚಿ ವಿಮಾನ ನಿಲ್ದಾಣದ ಬಳಿ ಬಾಂಬ್ ಸ್ಫೋಟ; 2 ಚಿನೀ ಕಾರ್ಮಿಕರ ಸಾವು