ಕಾಕ್ರೋಚ್ ಜನತಾ ಪಕ್ಷದಿಂದ ಪಂಚತಾರಾ ಹೋಟೆಲ್‌ ನಲ್ಲಿ ನೃತ್ಯ-ಗಾಯನದೊಂದಿಗೆ ಔತಣಕೂಟ!

ಜಂತರಮಂತರನ ಆಂದೋಲನ ಮತ್ತು ಔತಣಕೂಟದ ವೆಚ್ಚವನ್ನು ಯಾರು ಭರಿಸಿದವರು ?, ಎಂಬುದು ಹೊರಬರಬೇಕು ! - ನ್ಯಾಯವಾದಿ ಮಹೇಶ ಜೇಠಮಲಾನಿಯವರ ಬೇಡಿಕೆ

ನವ ದೆಹಲಿ – ಜಂತರಮಂತರನಲ್ಲಿ ಕಾಕ್ರೋಚ್ ಜನತಾ ಪಕ್ಷದ ಹಲವು ದಿನಗಳ ಕಾಲ ನಡೆದ ಪ್ರತಿಭಟನೆಗಳ ನಂತರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನರವರನ್ನು ರಾಜೀನಾಮೆ ನೀಡಲು ಬಾಧ್ಯಗೊಳಿಸಲಾಯಿತು. ಅನಂತರ ಈ ವಿಜಯದ ಸಂಭ್ರಮಕ್ಕಾಗಿ ಈಗ ಕಾಕ್ರೋಚ್ ಜನತಾ ಪಕ್ಷವು ಪಂಚತಾರಾ ಹೋಟೆಲ್‌ನಲ್ಲಿ ಔತಣಕೂಟವನ್ನು ಆಯೋಜಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.

ಈ ವಿಡಿಯೋದಲ್ಲಿ ಸಂಭ್ರಮಾಚರಣೆಯ ವಾತಾವರಣ ಕಾಣಿಸುತ್ತಿದ್ದು, ಅಲ್ಲಿ ನೃತ್ಯ ಮತ್ತು ಗಾಯನವೂ ನಡೆಯುತ್ತಿದೆ. ಈ ವಿಡಿಯೋವನ್ನು ಹಿರಿಯ ನ್ಯಾಯವಾದಿಗಳಾದ ಮಹೇಶ ಜೇಠಮಲಾನಿ ಯವರು ತಮ್ಮ ‘ಎಕ್ಸ್’ ಖಾತೆಯಿಂದ ಹಂಚಿಕೊಂಡಿದ್ದಾರೆ. ಅವರು ಇದನ್ನು ಪ್ರಶ್ನಿಸುತ್ತಾ, ಕಾಕ್ರೋಚ್ ಜನತಾ ಪಕ್ಷದ ಜಂತರಮಂತರನ ಆಂದೋಲನದ ವೆಚ್ಚವನ್ನು ಯಾರು ಭರಿಸಿದರು? ಪ್ರಯಾಣ, ಆಹಾರ ಮತ್ತು ವಸತಿ, ಹಾಗೆಯೇ ಈ ಔತಣಕೂಟದ ವೆಚ್ಚವನ್ನು ಯಾರು ಭರಿಸಿದರು? ಈ ಪಕ್ಷದ ಹಿಂದೆ ಯಾರಿದ್ದಾರೆ?, ಎಂಬುದರ ತನಿಖೆ ನಡೆಯಬೇಕು” ಎಂದು ಹೇಳಿದ್ದಾರೆ.

ಆತ್ಮಹತ್ಯೆಯ ಹೆಸರಿನಲ್ಲಿ ಆಂದೋಲನ ಮಾಡುವವರು ಸಂಭ್ರಮಾಚರಣೆ ಮಾಡುತ್ತಿದ್ದಾರೆ ! – ಭಾಜಪ ನಾಯಕ ಅಮಿತ ಮಾಲವೀಯ

ಭಾಜಪ ನಾಯಕರಾದ ಅಮಿತ ಮಾಲವೀಯರವರು ಪೋಸ್ಟ್ ಮಾಡಿ,

ಪ್ರತಿಯೊಬ್ಬರಿಗೂ ಶ್ರಮದ ನಂತರ ವಿಶ್ರಾಂತಿ ಪಡೆಯುವ ಮತ್ತು ಸಂಭ್ರಮಿಸುವ ಹಕ್ಕಿದೆ; ಆದರೆ ಅದಕ್ಕಾಗಿ ಸಮಯ ಮತ್ತು ಸ್ಥಳಕ್ಕೂ ಮಹತ್ವವಿರುತ್ತದೆ. ವಿದ್ಯಾರ್ಥಿಗಳಿಗಾಗಿ ನ್ಯಾಯದ ಹೋರಾಟವೆಂದು ಒಂದು ಆಂದೋಲನವನ್ನು ಮಾಡಲಾಗುತ್ತದೆ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ಅದರ ನೈತಿಕ ಅಡಿಪಾಯವೆಂದು ಉಲ್ಲೇಖಿಸಲಾಗುತ್ತದೆ, ಅದರ ಬೆನ್ನಲ್ಲೇ ಸಂಭ್ರಮಾಚರಣೆ ಮಾಡುವಂತಹ ದೃಶ್ಯಗಳು ಅನೇಕ ಜನರಿಗೆ ಅಸಂವೇದನಾಶೀಲವಾಗಿ ಕಾಣಿಸಬಹುದು, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಯಾರು ಏನು ಮಾಡಬೇಕು?, ಎಂಬುದು ಪ್ರತಿಯೊಬ್ಬರ ವೈಯಕ್ತಿಕ ಅಧಿಕಾರವಾಗಿದ್ದರೂ, 'ನೀಟ್' ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅದರಿಂದಾದ ೨೧ ವಿದ್ಯಾರ್ಥಿಗಳ ಆತ್ಮಹತ್ಯೆಯ ವಿರುದ್ಧದ ಆಂದೋಲನದಲ್ಲಿ ಸಿಕ್ಕ ಜಯವನ್ನು ಈ ರೀತಿ ಆಚರಿಸುತ್ತಿದ್ದರೆ ಅದು ನೈತಿಕತೆ ಮತ್ತು ಸಮಂಜಸವಾಗಿದೆಯೇ ?, ಎಂಬ ಪ್ರಶ್ನೆ ಉದ್ಭವವಾಗುತ್ತದೆ.