ಇಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಗೆ ವಿರೋಧ
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ ಗಡಕರಿ ಅವರ ರಾಜೀನಾಮೆಗೆ ಆಗ್ರಹ

ನವ ದೆಹಲಿ – ಕಾಕ್ರೋಚ್ ಜನತಾ ಪಕ್ಷದ ಆಂದೋಲನಕ್ಕೆ ಯಶಸ್ಸು ಸಿಕ್ಕ ನಂತರ, ಈಗ ಸಾಮಾಜಿಕ ಮಾಧ್ಯಮಗಳಲ್ಲಿ ‘ಇ-೨೦ ಜನತಾ ಪಕ್ಷ’ ಎಂಬ ಹೆಸರಿನ ಒಂದು ಗುಂಪನ್ನು ರಚಿಸಲಾಗಿದೆ. ‘ಇಥೆನಾಲ್’ ಮಿಶ್ರಿತ ಇಂಧನದೊಂದಿಗೆ ಶೇಕಡಾ 100 ರಷ್ಟು ಶುದ್ಧ ಪೆಟ್ರೋಲ್ ಖರೀದಿಸುವ ಆಯ್ಕೆ ಗ್ರಾಹಕರಿಗೆ ಸಿಗಬೇಕು ಎಂಬ ಬೇಡಿಕೆಗಾಗಿ ಈ ಗುಂಪನ್ನು ಸ್ಥಾಪಿಸಲಾಗಿದೆ. ಈ ಗುಂಪನ್ನು ಯಾರು ನಿರ್ಮಿಸಿದ್ದಾರೆ? ಇದರ ಸಂಸ್ಥಾಪಕರು ಯಾರು? ಎಂಬುದು ತಿಳಿದುಬಂದಿಲ್ಲ; ಆದರೆ ಸರಕಾರವು ಜಾರಿಗೆ ತಂದಿರುವ ಇಥೆನಾಲ್ ಮಿಶ್ರಣ ನೀತಿಯಿಂದಾಗಿ ಈ ಗುಂಪು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ ಗಡಕರಿ ಯವರ ರಾಜೀನಾಮೆಗೆ ಆಗ್ರಹಿಸಿದೆ.
ಈ ಗುಂಪು ಹೇಳಿದ್ದೇನೆಂದರೆ, ನಾವು ಯಾವುದೇ ಸಬ್ಸಿಡಿ, ಉಚಿತ ಇಂಧನ ಅಥವಾ ಇಥೆನಾಲ್ ಮಿಶ್ರಿತ ಪೆಟ್ರೋಲನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಬೇಡಿಕೆ ಇಡುತ್ತಿಲ್ಲ. ಗ್ರಾಹಕರಿಗೆ ತಮ್ಮ ಇಷ್ಟದ ಇಂಧನವನ್ನು ಖರೀದಿಸುವ ಆಯ್ಕೆ ಸಿಗಬೇಕು, ಅಷ್ಟೇ ನಮ್ಮ ಬೇಡಿಕೆಯಾಗಿದೆ.
ಇಥೆನಾಲ್-ಮುಕ್ತ ಇಂಧನ ಸಿಗುವುದು ಕಷ್ಟಕರ!
ಸದ್ಯಕ್ಕೆ ಭಾರತದಲ್ಲಿ ಇಥೆನಾಲ್-ಮುಕ್ತ ಇಂಧನ ಲಭ್ಯವಿದೆ; ಆದರೆ ಅದು ಕೇವಲ ಕೆಲವು ಆಯ್ದ ಪೆಟ್ರೋಲ್ ಬಂಕ್ ಗಳಲ್ಲಿ ಮಾತ್ರ ಸಿಗುತ್ತದೆ ಮತ್ತು ಅದರ ಬೆಲೆ ಅತ್ಯಂತ ಹೆಚ್ಚಾಗಿದೆ. ದೆಹಲಿಯಲ್ಲಿ ಸಾಮಾನ್ಯ ‘ಇ-೨೦’ ಪೆಟ್ರೋಲ್ ಬೆಲೆ ಸುಮಾರು ರೂ. ೧೦೨.೧೨ ಪ್ರತಿ ಲೀಟರ್ ಇದ್ದರೆ, ಅಲ್ಲಿ ಈ ಪ್ರೀಮಿಯಂ ಇಂಧನ ಸುಮಾರು ರೂ ೧೬೯ ಪ್ರತಿ ಲೀಟರ್ ದರದಲ್ಲಿ ಮಾರಾಟವಾಗುತ್ತಿದೆ. ಇದರಿಂದಾಗಿ ಇದು ಸಾಮಾನ್ಯ ಗ್ರಾಹಕರ ಕೈಗೆಟುಕದಂತಾಗಿದೆ. ಇನ್ನೊಂದೆಡೆ, ಇಥೆನಾಲ್ ಮಿಶ್ರಿತ ಇಂಧನದಿಂದ ದೊಡ್ಡ ಪ್ರಮಾಣದಲ್ಲಿ ಸಮಸ್ಯೆಗಳು ಉಂಟಾಗಿವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಸರಕಾರ ಹೇಳಿದೆ.
‘ಕನ್ಫರ್ಮ್ ಟಿಕೆಟ್’ ಸಂಸ್ಥೆಯು ಶ್ರೀ ಗಣೇಶನಿಗೆ ಅವಮಾನ ಮಾಡಿದ ಜಾಹೀರಾತು ಹಿಂಪಡೆದಿದೆ
ಶಾಂತಿಯುತವಾಗಿ ಪ್ರತಿಭಟನೆ; ನಾಗರಿಕರಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕು! – ಸುಪ್ರೀಂ ಕೋರ್ಟ್
ಅಶ್ಲೀಲ ವಿಡಿಯೋ ಮೂಲಕ ೯ ಲಕ್ಷ ರೂಪಾಯಿ ಸುಲಿಗೆ ಮಾಡಿ ಕಾಲೇಜು ವಿದ್ಯಾರ್ಥಿಗೆ ವಂಚನೆ!
ಕಾಂಚೀಪುರಂ (ತಮಿಳುನಾಡು) ನಲ್ಲಿರುವ ಶ್ರೀ ಕಲ್ಯಾಣ ವರದ ದೇವಾಲಯದಲ್ಲಿ ಅರಳಿ ಮರ ನೆಟ್ಟಿದ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡ್ಗೀಳ್ !
ಆಂಧ್ರಪ್ರದೇಶ: ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ನಾಯಕ ಜೋಗಿ ರಮೇಶ್ ಅವರ ಸೊಸೆಯಿಂದ ಕೌಟುಂಬಿಕ ಹಿಂಸಾಚಾರದ ದೂರು
‘ದೌರ್ಜನ್ಯಗಳಿಲ್ಲದೆ ಗೃಹ ಇಲಾಖೆಯನ್ನು ಸುಸೂತ್ರವಾಗಿ ಹೇಗೆ ನಡೆಸಬೇಕು ಎಂಬುದನ್ನು ಅಮಿತ್ ಶಹಾ ಅವರು ಕರ್ನಾಟಕದಿಂದ ಕಲಿಯಬೇಕು’!