
ಕಾಠ್ಮಂಡು (ನೇಪಾಳ) – ನೇಪಾಳ- ಭಾರತ ಗಡಿಗೆ ಹೊಂದಿಕೊಂಡಿರುವ ಸುನ್ಸರಿ ಜಿಲ್ಲೆಯಲ್ಲಿ ಮತಾಂಧ ಮುಸ್ಲಿಂರು ನಡೆಸಿದ ಗಲಭೆಯ ವೇಳೆ ಪೊಲೀಸರು ನಡೆಸಿದ ಗುಂಡಿನ ಚಕಮಕಿಯಲ್ಲಿ ಓರ್ವ ಹಿಂದೂ ಯುವಕ ಮೃತಪಟ್ಟಿದ್ದು, ಹಿಂಸಾಚಾರದಲ್ಲಿ ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಗಲಭೆಯ ನಂತರ ಆಡಳಿತ ಮಂಡಳಿಯು ಕೆಲವು ಪ್ರದೇಶಗಳಲ್ಲಿ ಅನಿರ್ದಿಷ್ಟಾವಧಿ ನಿರ್ಬಂಧ ಹೇರಿದೆ.
Nepal: Hindu youth killed amid communal violence in Sunsari
A dispute over loudspeakers and religious flags escalated into clashes, with police firing leaving one dead. Several others, including police personnel, were injured
In Hindu-majority Nepal, such communal violence is… pic.twitter.com/q8MXPgXu1l
— Sanatan Prabhat (@SanatanPrabhat) July 27, 2026
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಜುಲೈ ೨೬ ರ ರಾತ್ರಿ ದೇವ್‌ಗಂಜ್ ಗ್ರಾಮೀಣ ಪೌರಸಭೆಯ ಕಪ್ತಾನ್‌ಗಂಜ್ ಪ್ರದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಂರು ಪ್ರತ್ಯೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಆಗ ಧ್ವನಿವರ್ಧಕಗಳ (ಲೌಡ್‌ಸ್ಪೀಕರ್) ಬಳಕೆ ಮತ್ತು ಧಾರ್ಮಿಕ ಧ್ವಜಗಳನ್ನು ಹಾರಿಸುವ ಕುರಿತು ವಿವಾದ ಪ್ರಾರಂಭವಾಯಿತು. ಈ ವಾಗ್ವಾದವು ಮುಂದೆ ಹಿಂಸಾಚಾರಕ್ಕೆ ತಿರುಗಿತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಭದ್ರತಾ ಪಡೆಗಳು ಗುಂಡು ಹಾರಿಸಿದಾಗ, ೨೪ ವರ್ಷದ ಓಂ ಪ್ರಕಾಶ್ ಮೆಹ್ತಾ ಎಂಬುವವರು ಮೃತಪಟ್ಟರು. ಸುನ್ಸರಿ ಜಿಲ್ಲೆಯು ನೇಪಾಳದ ಆಗ್ನೇಯ ಭಾಗದಲ್ಲಿದ್ದು, ಭಾರತದ ಬಿಹಾರ ರಾಜ್ಯದ ಗಡಿಗೆ ತೀರ ಹತ್ತಿರದಲ್ಲಿದೆ. ಈ ಪ್ರದೇಶವು ಎರಡೂ ದೇಶಗಳ ನಡುವಿನ ಪ್ರಮುಖ ವಾಣಿಜ್ಯ ಹಾಗೂ ಸಾರಿಗೆ ಮಾರ್ಗವಾಗಿದೆ.
ಕೆನಡಾದಲ್ಲಿ ಭಾರತೀಯ ಯುವತಿಯ ಗುಂಡಿಕ್ಕಿ ಹತ್ಯೆ
ಜಿಹಾದಿ ಅಬ್ದುಲ್ ಬಲ್ಲೌಟ್ ನನ್ನು ೨೪ ಗಂಟೆಗಳಲ್ಲಿ ಮುಗಿಸಿದ ಪೊಲೀಸರು!
ಸಿಯಾಟಲ್ (ಅಮೆರಿಕ) ಇಲ್ಲಿನ ಆಹಾರ ಮೇಳದಲ್ಲಿ ಗುಂಡಿನ ದಾಳಿ: ೨ ಜನರು ಸಾವು
ಕೆನಡಾ-ಅಮೆರಿಕ ಗಡಿಯಲ್ಲಿ (1,700 ಕಿಲೋಗ್ರಾಂ) ಮಾದಕ ಪದಾರ್ಥ ಜಪ್ತಿ
ಜರ್ಮನಿ: ‘ಎಲ್ಜಿಬಿಟಿಕ್ಯೂ’ ಸಮುದಾಯದ ಮೆರವಣಿಗೆಗೆ ವ್ಯಾನ್ ನಿಂದ ಡಿಕ್ಕಿ ಹೊಡೆದ ಜಿಹಾದಿ – ಓರ್ವ ವ್ಯಕ್ತಿ ಸಾವು, ೧೬ ಮಂದಿಗೆ ಗಾಯ
‘ಪೇಟ್ರಿಯಾಟ್ ಇಂಟರ್ಸೆಪ್ಟರ್’ ಕ್ಷಿಪಣಿಗಳ ಕೊರತೆ; ಇರಾನ್ ಮೇಲಿನ ಬೃಹತ್ ದಾಳಿಯನ್ನು ತಡೆದ ಟ್ರಂಪ್