ನಾವು ಯಾರ ವಿರುದ್ಧವೂ ಇಲ್ಲ: ಕ್ವಾಡ’ ಸಭೆಯ ನಂತರ ಪ್ರಧಾನಿ ಮೋದಿಯವರ ಹೇಳಿಕೆ

ಡೆಲಾವೆರ್ (ಅಮೇರಿಕಾ) – ಜಗತ್ತು ಸಂಘರ್ಷದಲ್ಲಿರುವಾಗ ‘ಕ್ವಾಡ್’ ಸಭೆಯು ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕ್ವಾಡ್ ಒಂದುಗೂಡುವ ಅಗತ್ಯವಿದೆ. ನಾವು ಯಾರ ವಿರುದ್ಧವೂ ಇಲ್ಲ. ನಾವು ನಿಯಮಾಧಾರಿತ ಅಂತರಾಷ್ಟ್ರೀಯ ಸುವ್ಯವಸ್ಥೆ, ಪ್ರಾದೇಶಿಕ ಸಮಗ್ರತೆ ಮತ್ತು ಎಲ್ಲಾ ಸಮಸ್ಯೆಗಳ ಶಾಂತಿಯುತ ಪರಿಹಾರವನ್ನು ಬೆಂಬಲಿಸುತ್ತೇವೆ ಎಂದು ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನುಡಿದರು.

1. ಈ ಸಭೆಯ ನಂತರ, ಅಮೇರಿಕೆಯ ಅಧ್ಯಕ್ಷ ಜೋ ಬೈಡನ್ ಅವರನ್ನು ಚುನಾವಣೆಯ ನಂತರ ಸಂಘಟನೆಯ ಅಸ್ತಿತ್ವದ ಬಗ್ಗೆ ಪ್ರಶ್ನಿಸಲಾಯಿತು. ಇದಕ್ಕೆ ಬೈಡನ್ ಅವರು ಪ್ರಧಾನಿ ಮೋದಿಯವರ ಹೆಗಲ ಮೇಲೆ ಕೈಯಿಟ್ಟು, ಚುನಾವಣೆಯ ಬಳಿಕವೂ ಸಂಘಟನೆ ಮುಂದುವರಿಯಲಿದೆ’ ಎಂದು ಸ್ಪಷ್ಟಪಡಿಸಿದರು.

2. ಪ್ರಧಾನಿ ಮೋದಿ ಅವರು ಇಂಡೋ-ಪೆಸಿಫಿಕ್ (ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರದ ಸಮುದ್ರತೀರದ ದೇಶಗಳು) ದೇಶಗಳಿಗೆ 4 ಕೋಟಿ ರೂಪಾಯಿಗಳ ಉಚಿತ ಲಸಿಕೆಗಳನ್ನು ನೀಡುವುದಾಗಿ ಘೋಷಿಸಿದರು. ಶೃಂಗಸಭೆ ಮೊದಲು ಪ್ರಧಾನಿ ಮೋದಿ ಅವರು ರಾಷ್ಟ್ರಾಧ್ಯಕ್ಷ ಬೈಡನ್ ಅವರನ್ನು ಡೆಲಾವೇರ್‌ನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದರು. ಬೈಡನ್ ಮೋದಿ ಅವರನ್ನು ಸ್ವಾಗತಿಸಿದರು. ಇದಾದ ಬಳಿಕ ಇಬ್ಬರ ನಡುವೆ ದ್ವಿಪಕ್ಷೀಯ ಸಭೆ ನಡೆಯಿತು. ಪ್ರಧಾನಿ ಮೋದಿ ಜಪಾನ್ ಮತ್ತು ಆಸ್ಟ್ರೇಲಿಯಾದ ಪ್ರಧಾನಮಂತ್ರಿಗಳೊಂದಿಗೆ ದ್ವಿಪಕ್ಷೀಯ ಚರ್ಚೆ ಕೂಡ ನಡೆಸಿದರು.