ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ
ವಿಶಿಷ್ಟ ರೋಗಗಳು ಬರಬಾರದು ಎಂದು ಲಸಿಕೆ ಹಾಕಲಾಗುತ್ತದೆ. ಅಂತೆಯೇ, ಮೂರನೆಯ ಮಹಾಯುದ್ಧದ ಸಮಯದಲ್ಲಿ, ರಕ್ಷಿಸಿಕೊಳ್ಳಲು ಸಾಧನೆಯೇ ನಿಜವಾದ ಲಸಿಕೆಯಾಗಿದೆ.
ವಿಶಿಷ್ಟ ರೋಗಗಳು ಬರಬಾರದು ಎಂದು ಲಸಿಕೆ ಹಾಕಲಾಗುತ್ತದೆ. ಅಂತೆಯೇ, ಮೂರನೆಯ ಮಹಾಯುದ್ಧದ ಸಮಯದಲ್ಲಿ, ರಕ್ಷಿಸಿಕೊಳ್ಳಲು ಸಾಧನೆಯೇ ನಿಜವಾದ ಲಸಿಕೆಯಾಗಿದೆ.
‘ರಾಜಕೀಯ ನಾಯಕರು ಮತ್ತು ಕಾರ್ಯಕರ್ತರಿಗೆ ಯಾರಿಂದಾದರೂ ಹಣ ಅಥವಾ ಪದವಿ ದೊರೆಯುವುದಾದರೆ ತಕ್ಷಣ ಇನ್ನೊಂದು ಪಕ್ಷಕ್ಕೆ ಹೋಗಿಬಿಡುತ್ತಾರೆ. ಇದಕ್ಕೆ ವಿರುದ್ಧವಾಗಿ ಭಕ್ತನು ಭಗವಂತನ ಪಕ್ಷ ಬಿಟ್ಟು, ಭಗವಂತನ ಚರಣದಲ್ಲಿನ ತನ್ನ ಸ್ಥಾನವನ್ನು ಬಿಟ್ಟು ಇನ್ನೆಲ್ಲಿಗೂ ಹೋಗುವುದಿಲ್ಲ !’
‘ನಿರ್ವಿಚಾರ’ ಈ ನಾಮಜಪವು ‘ನಿರ್ಗುಣ’ ಸ್ಥಿತಿಗೆ ಕರೆದೊಯ್ಯುತ್ತದೆ. ಆದುದರಿಂದ ಕುಲದೇವತೆಯ ನಾಮಜಪವನ್ನು ಮಾಡುವ ಸಾಧಕರಿಗೆ ಅಥವಾ ಶೇ. ೬೦ ಕ್ಕಿಂತ ಕಡಿಮೆ ಆಧ್ಯಾತ್ಮಿಕ ಮಟ್ಟವಿರುವ ಸಾಧಕರಿಗೆ ಈ ನಾಮಜಪವನ್ನು ಮಾಡುವುದು ಕಠಿಣವಾಗಬಹುದು. ಇದಕ್ಕಾಗಿ ಅವರು ತಮ್ಮ ಯಾವಾಗಲೂ ಮಾಡುವ ಜಪದೊಂದಿಗೆ ಈ ನಾಮಜಪವನ್ನು ಮಾಡಲು ಪ್ರಯತ್ನಿಸಬೇಕು.
ಭಕ್ತನು ಭಗವಂತನೊಂದಿಗೆ ಏಕರೂಪವಾದ ನಂತರ ಬಿಂಬದ ಪ್ರತಿಬಿಂಬ ಮೂಡುತ್ತದೆ. ಭಕ್ತನ ಕಣ್ಣುಗಳಲ್ಲಿ ಭಾವಾಶ್ರು ಬಂದರೆ ಭಗವಂತನ ಕಣ್ಣುಗಳಿಂದ ಕೂಡ ಭಾವಾಶ್ರು ಬರುತ್ತವೆ. ಭಕ್ತನಿಗೆ ವೇದನೆಯಾದರೆ, ಭಗವಂತನಿಗೂ ವೇದನೆಯಾಗುತ್ತದೆ. ಭಕ್ತನು ಭಗವಂತನೊಂದಿಗೆ ಏಕರೂಪವಾಗಿದ್ದರೆ ಮಾತ್ರ ಈ ರೀತಿ ಘಟಿಸುತ್ತದೆ. ಅವನು ವಿಭಕ್ತನಾಗಿದ್ದರೆ, ಏನೂ ಘಟಿಸುವುದಿಲ್ಲ. ಭಗವಂತನು ನಿರ್ಗುಣ-ನಿರಾಕಾರನಿದ್ದಾನೆ.
ವಿಜ್ಞಾನವೆಂದರೆ ಶಿಶುವಿಹಾರದ ಶಿಕ್ಷಣ ಅಧ್ಯಾತ್ಮದ ಅಭ್ಯಾಸ ಹಾಗೂ ಸಾಧನೆ ಮಾಡಿದ ನಂತರ ವಿಜ್ಞಾನವು ಶಿಶು ವಿಹಾರದ ಶಿಕ್ಷಣದಂತೆ ಎಂದು ತಿಳಿಯುತ್ತದೆ.
ಸಕ್ಕರೆಯ ಸವಿಯನ್ನು ಹೇಗೆ ಶಬ್ದದಿಂದ ಹೇಳಲು ಸಾಧ್ಯವಿಲ್ಲವೋ, ಹಾಗೆಯೇ ಭಾವವನ್ನು ಸಹ ಶಬ್ದದಿಂದ ವ್ಯಕ್ತಪಡಿಸಲು ಸಾಧ್ಯವಿಲ್ಲ. ಸತತ ಭಗವಂತನ ಅನುಸಂಧಾನದಲ್ಲಿರುವ ಸುಲಭವಾದ ಮಾರ್ಗವೆಂದರೆ ಸತತ ಭಾವಾವಸ್ಥೆಯಲ್ಲಿರಲು ಪ್ರಯತ್ನಿಸುವುದು.
ಸಪ್ತರ್ಷಿಗಳು ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ ಈ ಧ್ವಜದ ಮೇಲೆ ಒಂದು ಬದಿಗೆ ಪ್ರಭು ಶ್ರೀರಾಮನ ಚಿತ್ರ ಮತ್ತು ಇನ್ನೊಂದು ಬದಿಗೆ ಪರಾತ್ಪರ ಗುರು ಡಾ. ಆಠವಲೆಯವರ ಪ್ರಭು ಶ್ರೀರಾಮನ ರೂಪದಲ್ಲಿನ ಚಿತ್ರವನ್ನು ಹಾಕಲು ಆಜ್ಞೆಯನ್ನು ಮಾಡಿದ್ದರು. ಅದಕ್ಕನುಸಾರ ಈ ಬಟ್ಟೆಯ ಧ್ವಜವನ್ನು ತಯಾರಿಸಲಾಯಿತು.
ಇಂತಹ ಹಿಂದೂಗಳು ಹಿಂದೂ ಧರ್ಮದಲ್ಲಿ ಬೇಡ ಹಿಂದೂಗಳು ಈಶ್ವರಪ್ರಾಪ್ತಿಗಾಗಿ ಅಲ್ಲ ಆರ್ಥಿಕ ಸುಖ- ಸೌಲಭ್ಯಗಳಿಗಾಗಿ ಮತಾಂತರವಾಗುತ್ತಾರೆ. ಅಂತಹವರು ಹಿಂದೂ ಧರ್ಮದಲ್ಲಿ ಇಲ್ಲದಿದ್ದರೆ ಒಳಿತು.
ಸೂರ್ಯದೆಶೆಯಲ್ಲಿ ಸನಾತನದ ಮೂವರೂ ಗುರುಗಳ ಜನ್ಮವು ಆಗಿದೆ ಯುಗಾನು ಯುಗಗಳವರೆಗೆ ಸೂರ್ಯನ ಅಸ್ತಿತ್ವವಿದೆ. ಅವನು ಭೂತ, ಭವಿಷ್ಯ ಹಾಗೂ ವರ್ತಮಾನ ಹೀಗೆ ಮೂರೂ ಕಾಲಗಳನ್ನು ನೋಡುತ್ತಾನೆ. ಮೂವರೂ ಗುರುಗಳು ಸೂರ್ಯನಂತೆ ಭೂತ, ಭವಿಷ್ಯ ಹಾಗೂ ವರ್ತಮಾನ ಹೀಗೆ ಮೂರೂ ಕಾಲಗಳನ್ನು ಅರಿತಿದ್ದಾರೆ.
‘ಪ.ಪೂ. ಡಾಕ್ಟರರು ಸ್ವತಃ ಮಹಾವಿಷ್ಣುವಾಗಿದ್ದಾರೆ. ಅವರ ದೇಹವಲ್ಲ, ಅವರಲ್ಲಿನ ಸೂಕ್ಷ್ಮ ಆತ್ಮವೆಂದರೆ ಮಹಾವಿಷ್ಣು. ಪಂಚಮಹಾಭೂತಗಳಿಂದ ನಿರ್ಮಾಣವಾದ ದೇಹದಲ್ಲಿ ಮಹಾವಿಷ್ಣು ರೂಪಿ ತತ್ತ್ವವಿರುವುದರಿಂದ ಅವರಿಗೆ ತೊಂದರೆ ಖಂಡಿತವಾಗಿಯೂ ಆಗುತ್ತದೆ. ದೀಪದಲ್ಲಿ ಸ್ವಯಂಪ್ರಕಾಶಿ ಜ್ಯೋತಿಯೆಂದರೆ ಮಹಾವಿಷ್ಣು, ಅಂದರೆ ಪ.ಪೂ. ಡಾಕ್ಟರರಾಗಿದ್ದಾರೆ.