ಸಾಧಕರ ಮುಂದೆ ಭಾವದ ಆದರ್ಶವನ್ನಿಡುವ ಪರಾತ್ಪರ ಗುರು ಡಾ. ಆಠವಲೆ !

ಭಕ್ತನು ಭಗವಂತನೊಂದಿಗೆ ಏಕರೂಪವಾದ ನಂತರ ಬಿಂಬದ ಪ್ರತಿಬಿಂಬ ಮೂಡುತ್ತದೆ. ಭಕ್ತನ ಕಣ್ಣುಗಳಲ್ಲಿ ಭಾವಾಶ್ರು ಬಂದರೆ ಭಗವಂತನ ಕಣ್ಣುಗಳಿಂದ ಕೂಡ ಭಾವಾಶ್ರು ಬರುತ್ತವೆ. ಭಕ್ತನಿಗೆ ವೇದನೆಯಾದರೆ, ಭಗವಂತನಿಗೂ ವೇದನೆಯಾಗುತ್ತದೆ. ಭಕ್ತನು ಭಗವಂತನೊಂದಿಗೆ ಏಕರೂಪವಾಗಿದ್ದರೆ ಮಾತ್ರ ಈ ರೀತಿ ಘಟಿಸುತ್ತದೆ. ಅವನು ವಿಭಕ್ತನಾಗಿದ್ದರೆ, ಏನೂ ಘಟಿಸುವುದಿಲ್ಲ. ಭಗವಂತನು ನಿರ್ಗುಣ-ನಿರಾಕಾರನಿದ್ದಾನೆ.

ಕಾಳಿಮಾತೆಯ ಮಹಾನ್ ಭಕ್ತ ರಾಮಕೃಷ್ಣ ಪರಮಹಂಸರಿಗೆ ದೇವರ ದರ್ಶನದ ಬಗ್ಗೆ ಇದ್ದ ಉತ್ಕಟ ಭಾವ !

ದೈವೀತತ್ತ್ವದ ವಿವಿಧ ರೂಪಗಳನ್ನು ಹಾಗೂ ಭಕ್ತಿಯ ವಿವಿಧ ಪದ್ಧತಿಗಳನ್ನು ತಿಳಿದುಕೊಳ್ಳಲು ರಾಮಕೃಷ್ಣರು ಅನೇಕ ರೀತಿಯಲ್ಲಿ ಪ್ರಯತ್ನಿಸಿದರು. ರಾಮಾಯಣದ ಸಮಯದಲ್ಲಿ ಶ್ರೀರಾಮನ ದರ್ಶನಕ್ಕಾಗಿ ಹೇಗೆ ಹನುಮಂತನು ಪರಿತಪಿಸಿದ್ದನೋ ಅದೇ ರೀತಿಯ ಸ್ಥಿತಿಯನ್ನು ರಾಮಕೃಷ್ಣರು ಅನುಭವಿಸಿದರು.

ಭಗವಂತನ ಭಾವವಿಶ್ವವನ್ನು ಅನುಭವಿಸುವ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಅಮೂಲ್ಯ ಮಾರ್ಗದರ್ಶನ !

ಸಕ್ಕರೆಯ ಸವಿಯನ್ನು ಹೇಗೆ ಶಬ್ದದಿಂದ ಹೇಳಲು ಸಾಧ್ಯವಿಲ್ಲವೋ, ಹಾಗೆಯೇ ಭಾವವನ್ನು ಸಹ ಶಬ್ದದಿಂದ ವ್ಯಕ್ತಪಡಿಸಲು ಸಾಧ್ಯವಿಲ್ಲ. ಸತತ ಭಗವಂತನ ಅನುಸಂಧಾನದಲ್ಲಿರುವ ಸುಲಭವಾದ ಮಾರ್ಗವೆಂದರೆ ಸತತ ಭಾವಾವಸ್ಥೆಯಲ್ಲಿರಲು ಪ್ರಯತ್ನಿಸುವುದು.

ನವವಿಧ ಭಕ್ತಿ

ಭಗವಂತನ ನಾಮ-ಗುಣ-ಲೀಲೆಗಳನ್ನು ಸದಾ ಧ್ಯಾನಿಸುವುದು ಹಾಗೂ ಅದರಲ್ಲಿಯೇ ಮಗ್ನರಾಗಿರುವುದು ಎಂದರೆ ಸ್ಮರಣ ಭಕ್ತಿ. ಗುರುಗಳು ಅಥವಾ ಈಶ್ವರನ ಸ್ಥೂಲ ರೂಪವನ್ನು (ಮೂರ್ತಿ/ಚಿತ್ರ) ಮತ್ತು ನಾಮಜಪದ ಮೂಲಕ ಸೂಕ್ಷ್ಮ ರೂಪವನ್ನು ಸತತ ಸ್ಮರಿಸುವುದೇ ಸ್ಮರಣ ಭಕ್ತಿ

ಭಗವಂತನ ಭೇಟಿಗಾಗಿ ವ್ಯಾಕುಲರಾದ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರ ಭಾವಸ್ಪರ್ಶಿ ಆತ್ಮಚಿಂತನೆ !

ಜಗತ್ತೆಲ್ಲ ಈಗ ಶೂನ್ಯವೆನಿಸುತ್ತದೆ. ಈಗ ‘ಜೀವ ಬೇಡುತ್ತಿದೆ ದರ್ಶನ ಎನ್ನುವ ಸ್ಥಿತಿಯಾಗಿದೆ. ಆದ್ದರಿಂದ ನಿನ್ನ ಬಳಿ ಮತ್ತೇನನ್ನು ಬೇಡಲಿ ? ಬೇಡಿದರೂ ಅದು ನನ್ನ ದತ್ತಾತ್ರೇಯನ ಮನಮೋಹಕ ವಿಶ್ವ ರೂಪವನ್ನೇ ಬೇಡುತ್ತೇನೆ. ಕೇವಲ ಅದೇ ಬೇಕಾಗಿದೆ.