‘ನಿರ್ವಿಚಾರ’ ನಾಮಜಪವು ಎಲ್ಲ ಮಟ್ಟದ ಸಾಧಕರಿಗಾಗಿ ಏಕಿದೆ ?

ಪರಾತ್ಪರ ಗುರು ಡಾ. ಆಠವಲೆ

ಸಾಪ್ತಾಹಿಕ ಸನಾತನ ಪ್ರಭಾತದ https://sanatanprabhat.org/kannada/42979.html ಲಿಂಕ್ ಯಲ್ಲಿ ‘ನಿರ್ವಿಚಾರ’ ಈ ನಾಮಜಪಕ್ಕೆ ಸಂಬಂಧಿಸಿದ ಚೌಕಟ್ಟು ಪ್ರಕಾಶಿತಗೊಂಡಿತ್ತು. ಗುರುಕೃಪಾಯೋಗದಲ್ಲಿ ‘ಸಾಧನೆಯ ಆರಂಭದಲ್ಲಿ ಕುಲದೇವತೆ ಮತ್ತು ದತ್ತ ಇವರ ನಾಮಜಪವನ್ನು ಮಾಡಬೇಕು’, ಎಂದು ಹೇಳಲಾಗಿದೆ. ಹಾಗೆಯೇ ಗುರುಕೃಪಾಯೋಗದ ಒಂದು ತತ್ತ್ವವೆಂದರೆ ‘ಮಟ್ಟಕ್ಕನುಸಾರ ಸಾಧನೆ.’ ಹೀಗಿರುವಾಗ ‘ನಿರ್ವಿಚಾರ’ ಇದು ‘ಗುರುಕೃಪಾಯೋಗದಲ್ಲಿನ ಎಲ್ಲಕ್ಕಿಂತ ಕೊನೆಯ ನಾಮಜಪ’ವನ್ನು ‘ಆರಂಭದ ಸಾಧಕರಿಂದ ಸಂತರವರೆಗಿನ ಯಾರೂ ಮಾಡಬಹುದು’, ಎಂದು ಏಕೆ ಕೊಡಲಾಗಿದೆ ?’, ಎಂಬ ಪ್ರಶ್ನೆಯು ಕೆಲವರ ಮನಸ್ಸಿನಲ್ಲಿ ಬರಬಹುದು. ಇದರ ಉತ್ತರವು ಮುಂದಿನಂತಿದೆ.

ಅಧ್ಯಾತ್ಮದಲ್ಲಿ ಪ್ರಗತಿ ಮಾಡಿಕೊಳ್ಳಲು ಸಾಧನೆಯ ವಿವಿಧ ಹಂತಗಳನ್ನು ಪೂರ್ಣ ಮಾಡಬೇಕಾಗುತ್ತದೆ. ಉದಾ. ಸ್ವಭಾವ ದೋಷ-ನಿರ್ಮೂಲನೆ, ಅಹಂ-ನಿರ್ಮೂಲನೆ, ನಾಮಜಪ, ಸತ್ಸಂಗ, ಸತ್ಸೇವೆ, ಭಾವಜಾಗೃತಿ, ತ್ಯಾಗ ಮತ್ತು ಪ್ರೀತಿ. ‘ನಾಮಜಪ’ ಈ ಹಂತವನ್ನು ಪೂರ್ಣ ಮಾಡಿ ‘ಅಖಂಡವಾಗಿ ನಾಮಜಪ ಆಗುವುದು’ ಈ ಸ್ಥಿತಿಗೆ ಬರಲು ಸಾಧಕನಿಗೆ ೧೦ ರಿಂದ ೧೫ ವರ್ಷಗಳು ಬೇಕಾಗುತ್ತವೆ. ಇದರಲ್ಲಿ ೪-೫ ವರ್ಷಗಳಲ್ಲಿ ಕೇವಲ ಶೇಕಡಾ ೪-೫ ರಷ್ಟು ಪ್ರಗತಿಯಾಗಬಹುದು. ಅನಂತರ ಅವನು ಸಾಧನೆಯ ‘ಸತ್ಸಂಗ’ದ ಹಂತಕ್ಕೆ ಬರುತ್ತಾನೆ. ಈ ವೇಗದಿಂದ ಸಾಧನೆಯಲ್ಲಿ ಮುಂದೆ ಹೋಗಲಿಕ್ಕಿದ್ದರೆ ಒಂದು ಜನ್ಮದಲ್ಲಿ ಸಾಧನೆಯು ಪೂರ್ಣತ್ವಕ್ಕೆ ಹೋಗಲು ಸಾಧ್ಯವಿಲ್ಲ. ಇದಕ್ಕಾಗಿ ಸಾಧಕನು ಸಾಧನೆಯ ಯಾವ ಮಟ್ಟದಲ್ಲಿರುವನೋ, ಅದರ ಮುಂದಿನ ಹಂತದ ಸ್ವಲ್ಪ ಸ್ವಲ್ಪ ಪ್ರಯತ್ನವನ್ನು ಮಾಡುತ್ತಿದ್ದರೆ ಸಾಧಕನ ಪ್ರಗತಿಯಾಗುವ ಪ್ರಮಾಣವು ಹೆಚ್ಚಾಗುತ್ತದೆ, ಉದಾ. ನಾಮಜಪವನ್ನು ಮಾಡುವಾಗಲೇ ‘ಸತ್ಸಂಗ’ ಈ ಹಂತದ ಪ್ರಯತ್ನ ವನ್ನೂ ಮಾಡಿದರೆ, ಆಧ್ಯಾತ್ಮಿಕ ಪ್ರಗತಿಯ ವೇಗವು ಹೆಚ್ಚಾಗುತ್ತದೆ. ಇದೇ ತತ್ತ್ವದ ಆಧಾರದಲ್ಲಿ ಗುರುಕೃಪಾಯೋಗದಲ್ಲಿ ಪ್ರಾಥಮಿಕ ಹಂತದ ಸಾಧಕನಿಗೆ ಸ್ವಭಾವದೋಷ-ನಿರ್ಮೂಲನೆ, ಅಹಂ-ನಿರ್ಮೂಲನೆ, ನಾಮ, ಸತ್ಸಂಗ, ಸತ್ಸೇವೆ, ಭಾವಜಾಗೃತಿ, ತ್ಯಾಗ ಮತ್ತು ಪ್ರೀತಿ ಈ ಎಂಟು ಹಂತಗಳನ್ನು ಒಟ್ಟಾಗಿ ಪ್ರಯತ್ನವನ್ನು ಮಾಡಲು ಹೇಳಲಾಗುತ್ತದೆ. ಆದುದರಿಂದ ಈ ಯೋಗದಲ್ಲಿ ಇತರ ಸಾಧನಾಮಾರ್ಗಗಳಿಗಿಂತ ಬೇಗನೆ ಪ್ರಗತಿಯು ಆಗುತ್ತದೆ.

ಇದೇ ವಿಷಯವು ‘ನಿರ್ವಿಚಾರ’ ಈ ನಾಮಜಪದ ಬಗ್ಗೆಯೂ ಅನ್ವಯಿಸುತ್ತದೆ. ಈ ಜಪವಾಗಲು ಸಾಧಕನ ಆಧ್ಯಾತ್ಮಿಕ ಮಟ್ಟವು ಕಡಿಮೆಪಕ್ಷ ಶೇ. ೬೦ ರಷ್ಟಿರುವುದು, ಅಂದರೆ ಅವನ ಮನೋಲಯ ಆರಂಭವಾಗುವುದು ಆವಶ್ಯಕವಾಗಿದೆ. ಅನಂತರ ಆ ಸಾಧಕನು ನಿರ್ವಿಚಾರ ಸ್ಥಿತಿಗೆ ಹೋಗಬಹುದು; ಆದರೆ ಅವನು ಪ್ರಾರಂಭದಿಂದಲೇ ‘ನಿರ್ವಿಚಾರ’ ಈ ನಾಮಜಪವನ್ನು ಆರಂಭಿಸಿದರೆ, ಅವನ ಮನಸ್ಸಿನ ಮೇಲೆ ಈ ನಾಮಜಪದ ಅಲ್ಪಸ್ವಲ್ಪ ಸಂಸ್ಕಾರವು ಬೇಗನೆ ಒಂದೊಂದಾಗಿ ಎಂಟು ಹಂತಗಳ ಸಾಧನೆಯನ್ನು ಮಾಡಿ ಮುಂದೆ ಮನೋಲಯದ ಹಂತಕ್ಕೆ ಹೋಗಲು ಬೇಕಾಗುವ ಕಾಲಾವಧಿಯ ತುಲನೆಯಲ್ಲಿ ಕಡಿಮೆ ಸಮಯದಲ್ಲಿ ಅವನು ಈ ಹಂತವನ್ನು ತಲುಪಬಹುದು.

ಶೇ. ೬೦ ಕ್ಕಿಂತ ಕಡಿಮೆ ಆಧ್ಯಾತ್ಮಿಕ ಮಟ್ಟದ ಸಾಧಕನು ಯಾವ ನಾಮಜಪವನ್ನು ಮಾಡಬೇಕು ?

‘ನಿರ್ವಿಚಾರ’ ಈ ನಾಮಜಪವು ‘ನಿರ್ಗುಣ’ ಸ್ಥಿತಿಗೆ ಕರೆದೊಯ್ಯುತ್ತದೆ. ಆದುದರಿಂದ ಕುಲದೇವತೆಯ ನಾಮಜಪವನ್ನು ಮಾಡುವ ಸಾಧಕರಿಗೆ ಅಥವಾ ಶೇ. ೬೦ ಕ್ಕಿಂತ ಕಡಿಮೆ ಆಧ್ಯಾತ್ಮಿಕ ಮಟ್ಟವಿರುವ ಸಾಧಕರಿಗೆ ಈ ನಾಮಜಪವನ್ನು ಮಾಡುವುದು ಕಠಿಣವಾಗಬಹುದು. ಇದಕ್ಕಾಗಿ ಅವರು ತಮ್ಮ ಯಾವಾಗಲೂ ಮಾಡುವ ಜಪದೊಂದಿಗೆ ಈ ನಾಮಜಪವನ್ನು ಮಾಡಲು ಪ್ರಯತ್ನಿಸಬೇಕು. ಈ ನಾಮಜಪವನ್ನು ಮಾಡಲು ಸಾಧ್ಯವಾಗತೊಡಗಿದರೆ ಅದನ್ನು ನಿರಂತರ ಮಾಡಬೇಕು. ಏಕೆಂದರೆ ಕೊನೆಗೆ ಸಾಧನೆಯ ಮುಂದಿನ ಮಟ್ಟವನ್ನು ತಲುಪಿ ಪೂರ್ಣ ಸಮಯ ಅದೇ ನಾಮಜಪವನ್ನು ಮಾಡುವುದಿರುತ್ತದೆ.

– (ಪರಾತ್ಪರ ಗುರು) ಡಾ. ಜಯಂತ ಆಠವಲೆ

ಕೇವಲ ‘ನಿರ್ವಿಚಾರ’ ಜಪ ಮಾಡುವುದು ಸಾಧ್ಯವಾಗದಿದ್ದರೆ ‘ಓಂ ನಿರ್ವಿಚಾರ’ ಅಥವಾ ‘ಶ್ರೀ ನಿರ್ವಿಚಾರಾಯ ನಮಃ |’ ಈ ನಾಮಜಪವನ್ನು ಮಾಡಬೇಕು !

‘ಕೆಲವು ಸಾಧಕರಿಗೆ ಕೇವಲ ‘ನಿರ್ವಿಚಾರ’ ಈ ಜಪ ಮಾಡುವುದು ಕಠಿಣವಾಗಬಹುದು. ಆಗ ಅವರು ‘ಓಂ ನಿರ್ವಿಚಾರಾಯ’ ಈ ನಾಮಜಪವನ್ನು ಮಾಡಿ ನೋಡಬೇಕು.

‘ಓಂ’’ ನಲ್ಲಿ ಸಾಮರ್ಥ್ಯ ಮತ್ತು ಶಕ್ತಿ ಇದೆ. ಆದುದರಿಂದ ‘ನಿರ್ವಿಚಾರ’ ಈ ನಾಮಜಪದ ಆರಂಭದಲ್ಲಿ ‘ಓಂ’ ಜೋಡಿಸಿದರೆ ಅದರ ಉಚ್ಚಾರದಿಂದ ‘ನಿರ್ವಿಚಾರ’ ಈ ನಾಮಜಪದಿಂದ ಬೇಗನೆ ಪರಿಣಾಮವಾಗಲು ಸಹಾಯವಾಗುತ್ತದೆ. ಯಾರಿಗೆ ‘ಶ್ರೀ ನಿರ್ವಿಚಾರಾಯ ನಮಃ |’ ಈ ನಾಮ ಜಪವು ಸುಲಭವಾಗಿ ಆಗುತ್ತದೆಯೋ, ಅವರು ಅದೇ ನಾಮ ಜಪವನ್ನು ಮುಂದುವರಿಸಬೇಕು.’

– (ಪರಾತ್ಪರ ಗುರು) ಡಾ. ಜಯಂತ ಆಠವಲೆ