ಸಾಧಕರ ಮುಂದೆ ಭಾವದ ಆದರ್ಶವನ್ನಿಡುವ ಪರಾತ್ಪರ ಗುರು ಡಾ. ಆಠವಲೆ !

ತಮ್ಮದೇ ಮಾರ್ಗದರ್ಶನದಿಂದ ತಯಾರಾದ ಸನಾತನದ ಸಂತರ ಬಗ್ಗೆ ಪರಾತ್ಪರ ಗುರು ಡಾಕ್ಟರರಲ್ಲಿರುವ ಭಾವ !

ಪರಾತ್ಪರ ಗುರು. ಡಾ. ಆಠವಲೆ

ಡಾ. ಚಾರುದತ್ತ ಪಿಂಗಳೆಯವರು ಸಂತಪದವಿಯನ್ನು ತಲುಪಿದ ನಂತರ ಅವರನ್ನು ‘ಪೂ. ಪಿಂಗಳೆಕಾಕಾ ಎಂದು ಸಂಬೋಧಿಸುವುದು

ಕೆಲವು ವರ್ಷಗಳ ಹಿಂದೆ ಪ.ಪೂ. ಡಾಕ್ಟರರಿಗೆ ಕಡಿಮೆ ರಕ್ತದೊತ್ತಡದ ತೊಂದರೆ ಇತ್ತು. ಆ ಸಮಯದಲ್ಲಿ ಡಾ. ಚಾರುದತ್ತ ಪಿಂಗಳೆ ಕಾಕಾರವರು ವೈದ್ಯಕೀಯ ವಿಭಾಗದಲ್ಲಿ ಸೇವೆ ಮಾಡುತ್ತಿದ್ದರು. ಆ ಸಮಯದಲ್ಲಿ ಕಾಕಾ ಸಂತರಾಗಿರಲಿಲ್ಲ. ಪ.ಪೂ. ಡಾಕ್ಟರರಿಗೆ ತೊಂದರೆ ಆರಂಭವಾದಾಗ ರಕ್ತದೊತ್ತಡವನ್ನು ಪರೀಕ್ಷಿಸಲು ಡಾ. ಪಿಂಗಳೆಕಾಕಾರವರನ್ನು ಕರೆಯುತ್ತಿದ್ದರು. ಕಾಕಾರವರು ಸಂತರಾದ ಮೇಲೆ ಪ.ಪೂ. ಡಾಕ್ಟರರು ಅವರಿಗಾಗಿ ವೈದ್ಯಕೀಯ ವಿಭಾಗಕ್ಕೆ ದೂರವಾಣಿ ಕರೆ ಮಾಡಿದರು. ಆಗ ಅಲ್ಲಿ ಸೇವೆ ಮಾಡುವ ಓರ್ವ ಸಾಧಕಿಯು ಕರೆಯನ್ನು ಎತ್ತಿದರು. ಆ ಸಮಯದಲ್ಲಿ ಪ.ಪೂ. ಡಾಕ್ಟರರು ‘ಪೂ. ಪಿಂಗಳೆಕಾಕಾ ಇದ್ದಾರಾ ? ಅವರು ಇಲ್ಲಿ ಬರಬಹುದೇ ? ಎಂದು ಕೇಳಿದರು. ಇದರ ಬಗ್ಗೆ ಓರ್ವ ಸಾಧಕಿಯು ಪರಾತ್ಪರ ಗುರು ಡಾ. ಆಠವಲೆಯವರಿಗೆ ಕೇಳಿದಾಗ, “ಈಗ ಅವರು ಸಂತರಾಗಿದ್ದಾರೆ. ಆದ್ದರಿಂದ ಹೀಗೆ ಕೇಳಬೇಕು ಎಂದು ಹೇಳಿದರು.

ಪೂ. ಪೃಥ್ವಿರಾಜ ಹಜಾರೆಯವರ ಜುಬ್ಬದ ನೂಲನ್ನು ಜತನ ಮಾಡುವ ಪರಾತ್ಪರ ಗುರು ಡಾ. ಆಠವಲೆ !

ಒಂದು ದಿನ ಪೂ. ಹಜಾರೆಕಾಕಾರವರು ಪರಾತ್ಪರ ಗುರು ಡಾ. ಆಠವಲೆಯವರೊಂದಿಗೆ ಮಾತನಾಡುತ್ತಿದ್ದರು. ಅವರು ಧರಿಸಿದ್ದ ಜುಬ್ಬದ ನೂಲು ಹೊರಗೆ ಬಂದಿತ್ತು. ಪ.ಪೂ. ಡಾಕ್ಟರರು ಕತ್ತರಿಯಿಂದ ಆ ನೂಲನ್ನು ಕತ್ತರಿಸಿ, “ನೀವು ಜುಬ್ಬವನ್ನು ಧರಿಸಿರುವುದರಿಂದ ಆ ನೂಲಿನಲ್ಲಿಯೂ ಚೈತನ್ಯ ಬಂದಿದೆ, ನಾವು ಇದನ್ನು ಜತನ ಮಾಡೋಣ ! ಎಂದು ಹೇಳಿದರು.

ಆಶ್ರಮದ ವಾಸ್ತುದೇವತೆಯ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರಲ್ಲಿರುವ ಕೃತಜ್ಞತಾಭಾವ !

ಫೋಂಡಾದಲ್ಲಿ ಸುಖಸಾಗರದ ಆಶ್ರಮವನ್ನು ಬಿಡುವಾಗ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ, “ಈ ಆಶ್ರಮವು ನಮಗೆ ಬಹಳಷ್ಟನ್ನು ನೀಡಿದೆ, ಎಂದರು. ಆಶ್ರಮವನ್ನು ಬಿಟ್ಟು ಬರುವಾಗ ಆಶ್ರಮ, ಅದೇ ರೀತಿ ಎಲ್ಲ ಗೋಡೆ, ಬಾಗಿಲು ಮತ್ತು ಕಿಟಕಿಗಳನ್ನು ಸ್ಪರ್ಶಿಸಿ ಹಾಗೂ ನಮಸ್ಕಾರ ಮಾಡಿ ಬಂದರು. ತದನಂತರ ವಾಸ್ತುದೇವತೆಗೆ ನಮಸ್ಕಾರ ಮಾಡಿ ಕೃತಜ್ಞತೆಯನ್ನೂ ವ್ಯಕ್ತಪಡಿಸಿದರು.

ಭಾವದ ವ್ಯಾಖ್ಯೆ

* ಭಾವಸ್ವರೂಪಕ್ಕೆ ಗುಣಗಳ ಬಂಧನ ಇರುತ್ತದೆ; ಏಕೆಂದರೆ ಗುಣಗಳ ಮಾಧ್ಯಮದಿಂದ ಪ್ರತ್ಯಕ್ಷ ಕಾರ್ಯ ಮಾಡಿದರೆ ಜೀವಕ್ಕೆ ಕೃತಿಸ್ವರೂಪ ಆನಂದದವರೆಗೆ ಹೋಗಲು ಬರುವುದಿಲ್ಲ. ಮನಸ್ಸಿಗೆ ಸತ್‌ನ ವಿಚಾರಗಳ ಆಲಂಬನೆ ಸಾಧ್ಯವಾದರೆ, ಭಾವಜಾಗೃತಿಯ ಹಂತದವರೆಗೆ ಬೇಗನೆ ತಲುಪಲು ಸಾಧ್ಯವಾಗುತ್ತದೆ; ಏಕೆಂದರೆ ಸತ್‌ನ ವಿಚಾರದಲ್ಲಿಯೇ ಚೈತನ್ಯವು ಅಡಗಿರುತ್ತದೆ. ಚೈತನ್ಯದ ಅರಿವೇ ಜೀವವನ್ನು ಭಾವವಿಶ್ವದಲ್ಲಿ ತಲ್ಲೀನಗೊಳಿಸುತ್ತದೆ.

* ‘ಭಾವ’ ಅಂದರೆ ಭಾ + ವ ! ಇದರ ಅರ್ಥ ‘ಭಾ’ ಅಂದರೆ ತೇಜ ಮತ್ತು ‘ವ’ ಅಂದರೆ ವೃದ್ಧಿಗೊಳಿಸುವ.

* ಯಾವುದರ ಜಾಗೃತಿಯಿಂದಾಗಿ ನಮ್ಮಲ್ಲಿ ತೇಜತತ್ತ್ವದ

* ವೃದ್ಧಿ ಆಗುತ್ತದೆಯೋ, ಅದುವೇ ‘ಭಾವ’ !

* ‘ಭಾವ ಅಂದರೆ ಸತತವಾಗಿ ಈಶ್ವರನ ಅಸ್ತಿತ್ವದ ಅರಿವಿರುವುದು. ಭಾವ ಅಂದರೆ ಈಶ್ವರನನ್ನು ಅರಿತುಕೊಳ್ಳಬೇಕೆಂಬ ಜೀವದಲ್ಲಿರುವ ತೀವ್ರ  ತಳಮಳ. ಭಾವ ಅಂದರೆ ಈಶ್ವರಪ್ರಾಪ್ತಿಯ ತೀವ್ರ ಪ್ರೇಮ, ಆತ್ಮೀಯತೆ ಮತ್ತು ಶರಣಾಗತಿಗಳ ಸಂಗಮದಿಂದ ಅಂತಃಕರಣದಲ್ಲಿ ನಿರ್ಮಾಣವಾದ ಆರ್ದ್ರತೆ. ಭಾವ ಎಂದರೆ ಈಶ್ವರನ ಅನುಭೂತಿ ಪಡೆಯುವುದು !

‘ಭಕ್ತಿಯೆಂದು ಸೇವೆ ಮಾಡಿದರೆ, ನಮ್ಮಲ್ಲಿ ಈಶ್ವರನ ಗುಣಗಳು ಬರುತ್ತವೆ. – (ಪೂ.) ಶ್ರೀ. ರಮಾನಂದ ಗೌಡ

ಪೂ. ರಮಾನಂದ ಗೌಡ ಇವರನ್ನು ಅಖಿಲ ಭಾರತೀಯ ಹಿಂದೂ ಅಧಿವೇಶನದಲ್ಲಿ ಸಂತರೆಂದು ಘೋಷಿಸಿದ ನಂತರ ೧. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ೨. ಸದ್ಗುರು (ಕು.) ಸ್ವಾತಿ ಖಾಡ್ಯೆ ಯವರಿಗೆ ಅತ್ಯಂತ ಶರಣಾಗತಭಾವದಿಂದ ವಂದನೆ ಮಾಡುತ್ತಿರುವುದು

 

ಭಗವಂತನ ನೆನಪಿನಿಂದ ಸಾಧಕನ ಭಾವ ಸತತ ಜಾಗೃತವಾಗುತ್ತದೆ ಮತ್ತು ಅವನಿಗೆ ಭಾವಾವಸ್ಥೆ ಪ್ರಾಪ್ತವಾಗುತ್ತದೆ. ಅವನಿಗೆ ಒಂದು ಕ್ಷಣವೂ ಈಶ್ವರ ಮತ್ತು ಗುರುಗಳ ವಿರಹ ಸಹಿಸಲು ಆಗುವುದಿಲ್ಲ. ಅವನು ಮನಸ್ಸಿನಿಂದ ಪೂರ್ಣಪ್ರಮಾಣದಲ್ಲಿ ಅವರಿಗೆ ಸಮರ್ಪಿತನಾಗುತ್ತಾನೆ. ಅವನ ಜೀವನದಲ್ಲಿ ಈಶ್ವರ ಮತ್ತು ಗುರುಗಳ ಪ್ರಾಪ್ತಿಯನ್ನು ಬಿಟ್ಟು ಇನ್ನೊಂದು ಧ್ಯೇಯ ಉಳಿಯುವುದಿಲ್ಲ. ಇಂತಹ ಸಾಧಕರಿಗೆ ಈಶ್ವರ ಮತ್ತು ಗುರುಗಳು ಒಳಗಿನಿಂದ ಮಾರ್ಗದರ್ಶನ ಮಾಡುತ್ತಾರೆ ಹಾಗೂ ಅವರ ಭಾವವನ್ನು ಸತತವಾಗಿ ಜಾಗೃತವಾಗಿಡುತ್ತಾರೆ.

ಸದ್ಗುರು ಮತ್ತು ಸಂತರ ಭಾವವಾಣಿ !

ಭಗವಂತನಿಗೂ ಸಹ ಭಾವಜಾಗೃತಿಯಾಗುತ್ತದೆ ! – (ಪರಾತ್ಪರ ಗುರು) ಡಾ. ಆಠವಲೆ

ಭಕ್ತನು ಭಗವಂತನೊಂದಿಗೆ ಏಕರೂಪವಾದ ನಂತರ ಬಿಂಬದ ಪ್ರತಿಬಿಂಬ ಮೂಡುತ್ತದೆ. ಭಕ್ತನ ಕಣ್ಣುಗಳಲ್ಲಿ ಭಾವಾಶ್ರು ಬಂದರೆ ಭಗವಂತನ ಕಣ್ಣುಗಳಿಂದ ಕೂಡ ಭಾವಾಶ್ರು ಬರುತ್ತವೆ. ಭಕ್ತನಿಗೆ ವೇದನೆಯಾದರೆ, ಭಗವಂತನಿಗೂ ವೇದನೆಯಾಗುತ್ತದೆ. ಭಕ್ತನು ಭಗವಂತನೊಂದಿಗೆ ಏಕರೂಪವಾಗಿದ್ದರೆ ಮಾತ್ರ ಈ ರೀತಿ ಘಟಿಸುತ್ತದೆ. ಅವನು ವಿಭಕ್ತನಾಗಿದ್ದರೆ, ಏನೂ ಘಟಿಸುವುದಿಲ್ಲ. ಭಗವಂತನು ನಿರ್ಗುಣ-ನಿರಾಕಾರನಿದ್ದಾನೆ.

‘ನಾವು ಸತತವಾಗಿ ಭಾವಾವಸ್ಥೆಯಲ್ಲಿ ಮತ್ತು ಈಶ್ವರನ ಅನುಸಂಧಾನದಲ್ಲಿದ್ದರೆ ಗುರುಗಳು ನಮಗೆ ಜೀವನದಲ್ಲಿ ಯಾವುದೇ ಕೊರತೆ ಆಗಲು ಬಿಡುವುದಿಲ್ಲ. ಭಾವದಲ್ಲಿದ್ದರೆ ಪ್ರತಿಯೊಂದು ಕ್ಷಣ ಭಗವಂತನು ಹೇಗೆ ಕಲಿಸುತ್ತಾನೆ, ಎಂಬುದರ ಅನುಭೂತಿಯನ್ನು ಪಡೆಯಲು ಸಾಧ್ಯವಾಗುತ್ತದೆ. –  ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ

‘ಸತತ ಭಾವಾವಸ್ಥೆಯಲ್ಲಿರಬೇಕು. ಭಗವಂತನನ್ನು ಪ್ರಾಪ್ತಮಾಡಿಕೊಂಡರೆ, ಬಾಕಿ ಎಲ್ಲವನ್ನು ಖಂಡಿತ ಸಾಧಿಸಲು ಆಗುತ್ತದೆ . – ಶ್ರೀಸತ್‌ಶಕ್ತಿ ಸೌ. ಬಿಂದಾ ಸಿಂಗಬಾಳ

‘ಶರಣಾಗತ ಭಾವವು ನಿರ್ಮಾಣವಾದ ನಂತರ ಸ್ವತಃ ಭಗವಂತನೇ ಧಾವಿಸಿ ಬಂದು ಅವನ ಕಾರ್ಯವನ್ನು ಮಾಡುತ್ತಾನೆ. – (ಪೂ.) ಕೆ. ಉಮೇಶ ಶೆಣೈ

‘ಎಲ್ಲವೂ ದೇವರೇ ಆಗಿದ್ದಾನೆ’ ಎಂಬ ಭಾವದಿಂದ ಈಶ್ವರನೊಂದಿಗೆ ಹೇಗೆ ಮಾತನಾಡಬೇಕು ?

ಗುರುಗಳ ಅಥವಾ ಭಗವಂತನ ಸ್ಮರಣೆಯಿಂದ ಸಾಧಕನ ಭಾವಜಾಗೃತವಾಗುತ್ತದೆ ಮತ್ತು ಅವನಿಗೆ ಭಾವಾವಸ್ಥೆ ಪ್ರಾಪ್ತವಾಗುತ್ತದೆ. ಅವನು ಅವರಿಗೆ ಆತ್ಮನಿವೇದನೆಯ ಸ್ವರೂಪದಲ್ಲಿ ತನ್ನ ಸ್ಥಿತಿಯನ್ನು ಸತತವಾಗಿ ಹೇಳುತ್ತಾನೆ. ‘ತ್ವಮೇವ ಮಾತಾ ಪಿತಾ ತ್ವಮೇವ, ತ್ವಮೇವ ಸರ್ವಮ್ ಮಮ ದೇವ ದೇವ, ಎಂಬ ಭಾವವಿಟ್ಟು ಪ್ರತಿಯೊಂದು ವಿಷಯವನ್ನು ದೇವರಿಗೆ ಹೇಳಿದುದರಿಂದ ದೇವರ ಬಗೆಗಿನ ಪ್ರೇಮ ಹೆಚ್ಚಾಗುತ್ತದೆ ಮತ್ತು ಇದರಿಂದ ದೇವರ ಬಗ್ಗೆ ಭಾವ ಹೆಚ್ಚಾಗುತ್ತದೆ

ಕೃಷ್ಣರೂಪಿ ಭಾವವಿಶ್ವ !

ಯಾವುದೇ ಕೃತಿಯನ್ನು ಕೃಷ್ಣನಿಗೆ ಜೋಡಿಸಿದರೆ ಆನಂದ ಸಿಗುತ್ತದೆ. ಕೃಷ್ಣನಿಲ್ಲದಿದ್ದರೆ ಆನಂದವಿಲ್ಲ. ಹಾಗಾಗಿ ಕೃತಿಯ ಮೊದಲು ಕೃಷ್ಣ, ಕೃತಿಯಲ್ಲಿ ಕೃಷ್ಣ, ಕೃತಿಯ ಕೊನೆಗೂ ಕೃಷ್ಣನೇ ಇದ್ದರೆ ಆನಂದ ಅನಂದ ಮತ್ತು ಆನಂದ.