ಭಗವಂತನ ಭಾವವಿಶ್ವವನ್ನು ಅನುಭವಿಸುವ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಅಮೂಲ್ಯ ಮಾರ್ಗದರ್ಶನ !

ನಾವು ದೇವರಲ್ಲಿಗೆ ಹೋಗದೇ ನಮ್ಮ ಹತ್ತಿರ ದೇವರಿಗೇ ಬರಬೇಕೆಂದು ಅನಿಸುವಷ್ಟರ ಮಟ್ಟಿಗೆ ‘ನಮ್ಮ ಭಾವವನ್ನು ಹೆಚ್ಚಿಸಬೇಕು

ಪರಾತ್ಪರ ಗುರು ಡಾ. ಆಠವಲೆ

ಸತತ ಭಾವಸ್ಥಿತಿಯಲ್ಲಿದ್ದರೆ, ಸೇವೆಯಲ್ಲಿ ಶರೀರ, ಮನಸ್ಸು ಮತ್ತು ಬುದ್ಧಿ ಸಹಕರಿಸುವುದಿಲ್ಲವೆಂದು ವಿಚಾರ ಮಾಡದಿರಿ !

ಓರ್ವ ಸಾಧಕ : ಸೇವೆಯಲ್ಲಿ ಶರೀರ ಸಹಕರಿಸುವಾಗ ಮನಸ್ಸು ಮತ್ತು ಬುದ್ಧಿ ಸಹಕರಿಸುವುದಿಲ್ಲ. ಮನಸ್ಸು ಮತ್ತು ಬುದ್ಧಿ ಸಹಕರಿಸುವಾಗ ಶರೀರ ಸಹಕರಿಸುವುದಿಲ್ಲ.

ಪ.ಪೂ. ಡಾಕ್ಟರ್ : ಸತತ ಭಾವದ ಸ್ಥಿತಿಯಲ್ಲಿದ್ದರೆ, ಶರೀರ, ಮನಸ್ಸು, ಬುದ್ಧಿ ಇವುಗಳು ಸಹಕರಿಸುವ ವಿಷಯದಲ್ಲಿ ಅಡಚಣೆ ಬರುವುದಿಲ್ಲ. ಸನಾತನವು ಪ್ರಕಾಶಿಸಿದ ‘ಭಾವಜಾಗೃತಿಗಾಗಿ ಸಾಧನೆ ಈ ಗ್ರಂಥವನ್ನು ಓದಿ ದಿನವಿಡೀ ಭಾವದ ಸ್ಥಿತಿಯಲ್ಲಿರಲು ಪ್ರಯತ್ನಿಸಿರಿ. ನಿಮ್ಮಲ್ಲಿ ಭಾವವಿದೆ. ಭಾವ ಇರುವುದರಿಂದ ಮುಂದೆ ಹೋಗುವಿರಿ. ಭಾವ ಮತ್ತು ಆನಂದದ ಅನುಭೂತಿ ಬರುತ್ತದೆ, ಇನ್ನೇನು ಬೇಕು ? ಶಬ್ದದಿಂದ ಮಾತನಾಡಿ ಏನು ಸಿಗಲಿದೆ ? ಆನಂದ ಮತ್ತು ಭಾವಜಾಗೃತಿ ಇದೇ ಒಳ್ಳೆದಿದೆ.

ಬುದ್ಧಿಯಿಂದ ಅಧ್ಯಾತ್ಮದ ಬಗ್ಗೆ ಏನಾದರೂ ಕಲಿಯುವುದಕ್ಕಿಂತ ಭಾವದ ಸ್ಥಿತಿಯಲ್ಲಿರುವುದು ಮಹತ್ವದ್ದಾಗಿದೆ

ಇದರ ಕಾರಣವೆಂದರೆ ಅಧ್ಯಾತ್ಮವು ಬುದ್ಧಿಯ ಆಚೆಗಿನ ಶಾಸ್ತ್ರವಾಗಿದೆ ಹಾಗೂ ಭಾವವೂ ಬುದ್ಧಿಯ ಆಚೆಗಿನ ವಿಷಯವಾಗಿದೆ.

ಸಾಧಕನು ಭಾವಾವಸ್ಥೆಯಲ್ಲಿದ್ದರೆ ನನಗೆ ಅದೇ ಆನಂದ !

ಪ.ಪೂ. ಡಾಕ್ಟರ್ (ತೀವ್ರ ತೊಂದರೆ ಇದ್ದರೂ ಅನೇಕ ವರ್ಷಗಳಿಂದ ಸಾಧನೆಯಲ್ಲಿರುವ ಹಾಗೂ ಈಗ ಭಾವ ಜಾಗೃತವಾಗಿರುವ ಸಾಧಕನನ್ನು ಉದ್ದೇಶಿಸಿ) : ನೀವು ಭಾವವನ್ನು ಹೇಗೆ ಜಾಗೃತ ಮಾಡಿಕೊಂಡಿರುವಿರಿ ?

ಓರ್ವ ಸಾಧಕ : ನೀವೇ ಎಲ್ಲವನ್ನೂ ಮಾಡಿಸಿಕೊಳ್ಳುತ್ತಿದ್ದೀರಿ. ತುಂಬಿ ತುಂಬಿ ಆನಂದವನ್ನು ನೀಡುತ್ತಿದ್ದೀರಿ; ಆದರೆ ಭಗವಂತಾ, ನಿಮಗೆ ಆನಂದವಾಗುವಂತಹ ಯಾವುದೇ ಪ್ರಯತ್ನ ನನ್ನಿಂದ ಆಗುವುದಿಲ್ಲ.

ಪ.ಪೂ. ಡಾಕ್ಟರ್ : ನೀವು ಭಾವದ ಸ್ಥಿತಿಯಲ್ಲಿದ್ದೀರಿ, ಇದೇ ನನಗೆ ಎಲ್ಲಕ್ಕಿಂತ ದೊಡ್ಡ ಆನಂದವಾಗಿದೆ. (ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರ ಸಾಧನೆಯಾಗಬೇಕು ಹಾಗೂ ಸಾಧಕರು ಆನಂದದಲ್ಲಿರಬೇಕು, ಎಂದು ಅಖಂಡವಾಗಿ ಚಡಪಡಿಸುತ್ತಿರುತ್ತಾರೆ. ಅದರ ಋಣವನ್ನು ನಾವು ತೀರಿಸಲು ಸಾಧ್ಯವಿಲ್ಲ; ಆದರೆ ಅವರು ಹೇಳಿದ ಪ್ರಯತ್ನವನ್ನು ನಿರಂತರ ಹಾಗೂ ಮನಃಪೂರ್ವಕ ಮಾಡಿ ಭಾವದ ಸ್ಥಿತಿಯನ್ನು ಅನುಭವಿಸಿ ಅಷ್ಟು ಆನಂದವನ್ನಾದರೂ ಅವರಿಗೆ ಕೊಡಬಹುದು.)

ಭಾವದ ಮಹತ್ವ

* ‘ಭಾವದಲ್ಲಿ ಆನಂದವಿದೆ. ಭಾವದ ನಂತರ ಶಾಂತಿಯ ಹಂತ ಬರುತ್ತದೆ. ಭಾವದ ಸ್ಥಿತಿಗೆ ಹೋಗಲು ಕಷ್ಟವಿದೆ. ಸತತ ಶರಣಾಗತಭಾವದಿಂದ ಪ್ರಯತ್ನಿಸಬೇಕಾಗುತ್ತದೆ. ಭಾವದ ಸ್ತರದಲ್ಲಿರುವ ಸಾಧಕರ ಪ್ರಾರ್ಥನೆಯನ್ನು ದೇವರು ಕೇಳಿಯೇ ಕೇಳುತ್ತಾರೆ ! ಭಾವ-ಭಕ್ತಿ ಹೆಚ್ಚಾದರೆ ಶಕ್ತಿ ಹೆಚ್ಚಾಗುತ್ತದೆ.

* ಸಕ್ಕರೆಯ ಸವಿಯನ್ನು ಹೇಗೆ ಶಬ್ದದಿಂದ ಹೇಳಲು ಸಾಧ್ಯವಿಲ್ಲವೋ, ಹಾಗೆಯೇ ಭಾವವನ್ನು ಸಹ ಶಬ್ದದಿಂದ ವ್ಯಕ್ತಪಡಿಸಲು ಸಾಧ್ಯವಿಲ್ಲ. ಸತತ ಭಗವಂತನ ಅನುಸಂಧಾನದಲ್ಲಿರುವ ಸುಲಭವಾದ ಮಾರ್ಗವೆಂದರೆ ಸತತ ಭಾವಾವಸ್ಥೆಯಲ್ಲಿರಲು ಪ್ರಯತ್ನಿಸುವುದು.

ಅನುಭೂತಿ : ಅನುಭೂತಿಗಳಿಂದ ದೇವರ ಮೇಲಿನ/ಸಾಧನೆಯ ಮೇಲಿನ ಉಪಾಸಕನ ಶ್ರದ್ಧೆಯು ಹೆಚ್ಚಾಗಿ ಅವನ ಸಾಧನೆಯಲ್ಲಿ ಹೆಚ್ಚಳವಾಗಲು ಸಹಾಯವಾಗುತ್ತದೆ.